Connect with us

Cricket

ವಿಶ್ವಕಪ್ ಕಮೆಂಟ್ರಿ ಪಟ್ಟಿ – ಗಂಗೂಲಿ, ಭೋಗ್ಲೆ, ಮಂಜ್ರೇಕರ್‌ಗೆ ಸ್ಥಾನ

Published

on

ಲಂಡನ್: ವಿಶ್ವಕಪ್ ಕ್ರಿಕೆಟ್ ಅಂಗವಾಗಿ ಭಾರತದ ಮೂವರನ್ನು ಐಸಿಸಿ ವೀಕ್ಷಕ ವಿವರಣೆಗಾರರನ್ನಾಗಿ ನೇಮಕ ಮಾಡಿದೆ. ಹರ್ಷ ಭೋಗ್ಲೆ, ಸಂಜಯ್  ಮಂಜ್ರೇಕರ್‌, ಸೌರವ್ ಗಂಗೂಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 23 ಮಂದಿ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಐಸಿಸಿ ಗುರುವಾರ ಪ್ರಕಟಿಸಿದೆ. ಇದರಲ್ಲಿ ಇಂಗ್ಲೆಂಡಿನ 4, ಭಾರತ ಮತ್ತು ನ್ಯೂಜಿಲೆಂಡಿನ 3, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಪಾಕಿಸ್ತಾನ ಪರ ಇಬ್ಬರು ಹಾಗೂ ಬಾಂಗ್ಲಾದೇಶ, ಶ್ರೀಲಂಕಾ, ಜಿಂಬಾಬ್ವೆಯಿಂದ ತಲಾ ಒಬ್ಬರನ್ನು ಆಯ್ಕೆ ಮಾಡಲಾಗಿದೆ.

ಈ ಪಂದ್ಯಕ್ಕೆ ಮೂವರು ಮಹಿಳಾ ವೀಕ್ಷಕ ವಿವರಣೆಗಾರರನ್ನು ಆಯ್ಕೆ ಮಾಡಲಾಗಿದೆ. ಇಷಾ ಗುಹಾ, ಮೆಲಾಜಿ ಜೋನ್ಸ್, ಅಲಿಸನ್ ಮಿಚೆಲ್ ಸ್ಥಾನ ಪಡೆದಿದ್ದಾರೆ.

ವೀಕ್ಷಕ ವಿವರಣೆಗಾರರ ಪಟ್ಟಿ: ಸೌರವ್ ಗಂಗೂಲಿ, ಇಯಾನ್ ಬಿಷಪ್, ಮೈಕಲ್ ಕ್ಲಾರ್ಕ್, ನಾಸಿರ್ ಹುಸೇನ್, ಮಿಚೆಲ್ ಜೋನ್ಸ್, ಕುಮಾರ ಸಂಗಕ್ಕಾರ, ಮೈಕಲ್ ಅಥರ್ಟನ್, ಅಲಿಸನ್ ಮಿಚೆಲ್, ಬ್ರೆಂಡನ್ ಮೆಕ್ಕಲಂ, ಗ್ರೇಮ್ ಸ್ಮಿತ್, ವಾಸೀಂ ಅಕ್ರಂ, ಶಾನ್ ಪೋಲಾಕ್, ಮೈಕಲ್ ಸ್ಲೇಟರ್, ಮಾರ್ಕ್ ನಿಕೋಲಸ್, ಮೈಕಲ್ ಹೋಲ್ಡಿಂಗ್, ಸಂಜಯ್ ಮಂಜ್ರೇಕರ್, ಹರ್ಷ ಭೋಗ್ಲೆ, ಸಿಮಾನ್ ಡೌಲ್, ಇಯಾನ್ ಸ್ಮಿತ್, ರಮೀಜ್ ರಾಜಾ, ಅಥರ್ ಅಲಿ ಖಾನ್, ಇಯಾನ್ ವಾರ್ಡ್.