Cinema
100 ಫೋನ್ಗಳನ್ನು ಗಿಫ್ಟ್ ಕೊಟ್ಟ ಸೋನು ಸೂದು

ಹೈದರಾಬಾದ್: ಚಿತ್ರತಂಡದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರ ಮಕ್ಕಳಿಗೆ, ಆನ್ಲೈನ್ ಕ್ಲಾಸ್ ಕೇಳಲು ನೂರು ಮೊಬೈಲ್ಗಳನ್ನು ಉಡುಗೊರೆಯಾಗಿ ಸೋನು ಸೂದ್ ಕೊಟ್ಟಿದ್ದಾರೆ.
ಸ್ಮಾರ್ಟ್ ಫೋನ್ ಇಲ್ಲದೆ ಆನ್ಲೈನ್ ಶಿಕ್ಷಣ ಪಡೆಯಲು ಮಕ್ಕಳಿಗೆ ಕಷ್ಟವಾಗುತ್ತಿದೆ, ಎಂಬ ಸುದ್ದಿಯನ್ನು ತಿಳಿದ ಸೋನು ಸೂದ್ ತಕ್ಷಣ ನೂರು ಮೊಬೈಲ್ ಫೋನ್ಗಳನ್ನು ಆರ್ಡರ್ ಮಾಡಿದ್ದಾರೆ. ಆಚಾರ್ಯ ಚಿತ್ರತಂಡಲ್ಲಿ ಕೆಲಸ ಮಾಡುತ್ತಿರುವ 100 ಕಾರ್ಮಿಕರಿಗೆ ನೀಡಿದ್ದಾರೆ.
ಸೊನು ಸುದ್ ಅವರು ಮೊಬೈಲ್ ತರಿಸಿ ಚಿತ್ರತಂಡದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಬರಲು ಹೇಳಿದ್ದರೆ. ಈ ವಿಚಾರ ತಿಳಿಯದೆ ಇರುವ ಕಾರ್ಮಿಕರು ಗೊಂದಲ ಮತ್ತು ಆಶ್ಚರ್ಯದಿಂದ ಬಂದಿದ್ದಾರೆ. ಸೋನುಸೂದ್ ಅವರು ಸ್ಮಾರ್ಟ್ ಫೋನ್ ಹಂಚುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸಂತೋಷಪಟ್ಟಿದ್ದಾರೆ. ಸೋನು ಅವರ ಕೈಯಿಂದ ಮೊಬೈಲ್ ಪಡೆದುಕೊಂಡ ಕಾರ್ಮಿಕರು ಖುಷಿಯಿಂದ ಕೂಗಾಡಿದ್ದಾರೆ. ಸೋನು ಅವರನ್ನು ಮನಸರೆ ಹರಿಸಿ ಹಾರೈಸಿದ್ದಾರೆ. ಸ್ಮಾಟ್ ಫೋನ್ಗಳನ್ನು ಸ್ವೀಕರಿಸಿದ ಫೋಟೋಗಳು ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿವೆ.
.@SonuSood gifted 100 mobile phones to poor workers in #Acharya movie unit.👏 #SonuSood pic.twitter.com/ooJsBfVKkl
— Suresh Kondi (@V6_Suresh) January 6, 2021
ಈ ಹಿಂದೆ ಸರ್ಕಾರಿ ಶಾಲೆ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಕೇಳಲು ಉಚಿತವಾಗಿ ಸ್ಮಾರ್ಟ್ ಫೋನ್ ನೀಡಿದ್ದರು. ಇದೀಗ ಮತ್ತೊಮ್ಮೆ ನೂರು ಫೋನ್ ಉಚಿತವಾಗಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
— Suresh Kondi (@V6_Suresh) January 6, 2021
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರದಲ್ಲಿ ಸೋನು ಸೂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೈದರಾಬಾದ್ನ ಕೊಕಾಪೇಟ್ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರ ತಂಡದಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಆನ್ಲೈನ್ ತರಗತಿ ಕೇಳಲು ಸಹಾಯವಾಗಲು ಮೊಬೈಲ್ ಫೋನ್ಗಳನ್ನು ಉಚಿತವಾಗಿ ನೀಡಿದ್ದಾರೆ. ಈ ಹಿಂದೆ ಕೂಡಾ ತಾವು ಮಾಡಿರುವ ಉತ್ತಮ ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡ ಸೋನು ಅವರು ಈ ಬಾರಿಯೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
