Connect with us

Latest

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಸ್ವಸ್ಥ- ಶಿಮ್ಲಾದಿಂದ ದೆಹಲಿಗೆ ಶಿಫ್ಟ್

Published

on

ಶಿಮ್ಲಾ: ಯುಪಿಎ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಶಿಮ್ಲಾದಿಂದ ಸುಮಾರು 15 ಕಿಲೋ ಮೀಟರ್ ದೂರದ ಚರಾಬ್ರಾ ಪ್ರದೇಶದಲ್ಲಿ ಪ್ರಿಯಾಂಕ ಅವರ ನಿರ್ಮಾಣ ಹಂತದ ಮನೆಯನ್ನು ಪರಿಶೀಲಿಸಲು ಬಂದಾಗ ನಿತ್ರಾಣಗೊಂಡು ತೀವ್ರ ಬಳಲಿದ್ದ ಕಾರಣ ದೆಹಲಿಗೆ ವಾಪಸ್ ಕರೆದೊಯ್ಯಲಾಗಿದೆ.

ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ತಮ್ಮ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಜೊತೆ ಶಿಮ್ಲಾಗೆ ಭೇಟಿ ನೀಡಿದ್ದ ವೇಳೆ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿ (ಐಜಿಎಂಸಿ) ಗೆ ಕರೆತಂದು ಚಿಕಿತ್ಸೆ ನೀಡುವ ಚಿಂತನೆ ನಡೆಸಲಾಗಿತ್ತು. ಆದರೆ ಸೋನಿಯಾ ಗಾಂಧಿ ಅವರ ಜೊತೆಗಿದ್ದ ವೈದ್ಯರು ಸೂಚನೆ ಮೇರೆಗೆ ಅವರನ್ನು ದೆಹಲಿಗೆ ಕರೆ ತರಲಾಯಿತು.

ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿನ ನಿರ್ದೇಶಕರು ಅಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗಲು ಸಲಹೆ ನೀಡಿದರು. ಆದರೆ ಇದನ್ನು ನಿರಾಕರಿಸಿದ ಸೋನಿಯಾ ಗಾಂಧಿ ತಮ್ಮ ಮಗಳ ಜೊತೆ ಖಾಸಗಿ ವಾಹನದಲ್ಲೇ ಪ್ರಯಾಣಿಸಿದರು. ಮಾರ್ಗ ಮಧ್ಯೆ ಪಂಚಕುಲ ಎಂಬಲ್ಲಿ ಕೆಲ ಸಮಯ ವಿಶ್ರಾಂತಿ ಪಡೆದ ನಂತರ ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆತರಲಾಗಿದೆ.

ಶಿಮ್ಲಾದ ಐಜಿಎಂಸಿ ರ ಹಿರಿಯ ವೈದ್ಯರಾದ ಡಾ. ರಮೇಶ್ ಪ್ರಕಾರ ಅವರು ಪ್ರತಿಕ್ರಿಯೆ ನೀಡಿ, ಸೋನಿಯಾ ಅವರ ಆರೋಗ್ಯ ಸ್ಥಿರವಾಗಿದೆ. ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ. ಶಿಮ್ಲಾ ಶೀತ ವಾತಾವರಣ ಹಾಗೂ ಮಳೆಯ ಕಾರಣ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಸ್ಪಷ್ಟನೆ ನೀಡಿದರು.