Connect with us

Latest

ಯೋಧರಿಗೆ ಚಳಿಯಿಂದ ರಕ್ಷಿಸಿಕೊಳ್ಳಲು ಸಿದ್ಧವಾಯ್ತು ವಿಶೇಷ ಟೆಂಟ್

Published

on

ನವದೆಹಲಿ: ಭಾರತೀಯ ಯೋಧರು ಕೊರೆಯುವ ಚಳಿಯಲ್ಲೂ ಗಲ್ವಾನಾ, ಲಡಾಕ್ ನಂತಹ ಅತೀ ಶೀತ ಪ್ರದೇಶದಲ್ಲಿ ಗಡಿ ಕಾಯುತ್ತಾರೆ. ಇದೀಗ ಯೋಧರು ಚಳಿಯಿಂದ ರಕ್ಷಿಸಿಕೊಳ್ಳಲು ಖ್ಯಾತ ಇಂಜಿನಿಯರ್ ಹಾಗೂ ಶಿಕ್ಷಣ ಸುಧಾರಕರಾದ ವಾಂಗ್‍ಚುಕ್ ಅವರು ವಿಶೇಷ ಟೆಂಟ್ ಒಂದನ್ನು ಸಿದ್ಧಗೊಳಿಸಿದ್ದಾರೆ.

ಇಂಜಿಯರ್ ಆಗಿ ಶಿಕ್ಷಣ ಸುಧಾರಕರಾಗಿ ದೇಶಕ್ಕೆ ಹಲವು ಕೊಡುಗೆಗಳನ್ನು ಕೊಟ್ಟಿರುವ ಸೋನಮ್ ವಾಂಗ್‍ಚುಕ್ ಯೋಧರು ಚಳಿಯಲ್ಲೂ ದೇಶದ ಗಡಿ ಕಾಯುವುದನ್ನು ಕಂಡು ತಮ್ಮ ಹೊಸ ಆವಿಷ್ಕಾರ ಮೂಲಕ ಇದೀಗ ವಿಶೇಷ ಟೆಂಟ್ ತಯಾರು ಮಾಡಿ ಸೈ ಎನಿಸಿಕೊಂಡಿದ್ದಾರೆ.

ಸೌರ ಶಕ್ತಿಯನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುವ ಈ ವಿಶೇಷ ಟೆಂಟ್ ಹೊರಗಡೆ -14 ಡಿಗ್ರಿ ಸೆಲ್ಸಿಯಸ್ ಇದ್ದರೆ ಟೆಂಟ್ ಒಳಭಾಗದಲ್ಲಿ +15 ಡಿಗ್ರಿ ಸೆಲ್ಸಿಯಸ್ ಇದೆ ಇದರಿಂದಾಗಿ ಯೋಧರು ಬೆಚ್ಚಗೆ ಚಳಿಯಿಂದ ರಕ್ಷಿಸಿಕೊಳ್ಳಬಹುದು ಎಂದು ವಾಂಗ್‍ಚುಕ್ ತಮ್ಮ ಆವಿಷ್ಕಾರದ ಕುರಿತು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಈ ವಿಶೇಷ ಟೆಂಟ್ ಮೇಡ್ ಇನ್ ಇಂಡಿಯಾ ಉತ್ಪನ್ನವಾಗಿದ್ದು, ಒಂದು ಟೆಂಟ್‍ನಲ್ಲಿ ಗರಿಷ್ಠ 10 ಯೋಧರು ಉಳಿದುಕೊಳ್ಳಬಹುದಾಗಿದೆ. 30 ಕೆ.ಜಿಗಿಂತಲೂ ಕಡಿಮೆ ತೂಕವಿರುವ ಈ ಟೆಂಟ್‍ನನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಹಳ ಸುಲಭವಾಗಿ ಶಿಫ್ಟ್ ಮಾಡಬಹುದು ಎಂದು ವಿವರಿಸಿದ್ದಾರೆ.

 

ವಾಂಗ್‍ಚುಕ್ ಅವರು ವಿಶೇಷ ಟೆಂಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಬಿತ್ತರಿಸುತ್ತಿದ್ದಂತೆ ಖ್ಯಾತ ಉದ್ಯಮಿ ಆನಂದ್ ಮಹೇಂದ್ರ ಸಹಿತ ಹಲವು ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *