Connect with us

Crime

ಹಾಸ್ಟೆಲ್‍ನಿಂದ ಬಂದಾಗ ತಾಯಿಯ ರಹಸ್ಯ ಬಯಲು- 14ರ ಮಗನ ಕೊಲೆ

Published

on

– ಪ್ರಿಯಕರನ ಜೊತೆಗಿದ್ದ ಅಮ್ಮನನ್ನ ನೋಡಿದ್ದ ಪುತ್ರ
– ಅನೈತಿಕ ಸಂಬಂಧ ಮುಚ್ಚಾಗಲು ಪುತ್ರನ ಹತ್ಯೆ

ಪಾಟ್ನಾ: ತಾಯಿಯೊಬ್ಬಳು ತನ್ನ ಅನೈತಿಕ ಸಂಬಂಧ ಮುಚ್ಚಿ ಹಾಕಲು ಸ್ವಂತ ಮಗನನ್ನೇ ಪ್ರಿಯಕರನಿಂದ ಕೊಲೆ ಮಾಡಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಆರೋಪಿಯನ್ನು 40 ವರ್ಷದ ಧರ್ಮಶೀಲಾ ದೇವಿ ಎಂದು ಗುರುತಿಸಲಾಗಿದೆ. ಇದೀಗ ಈಕೆಯನ್ನು ಗೋಪಾಲ್‍ಗಂಜ್ ಜಿಲ್ಲೆಯ ದೇವಾರಿಯಾ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ತನ್ನ ಅನೈತಿಕ ಸಂಬಂಧ ಮುಚ್ಚಿ ಹಾಕಲು 14 ವರ್ಷದ ಮಗ ಮನೀಶ್ ಕುಮಾರ್‌ನನ್ನು ಕೊಲೆ ಮಾಡಿದ್ದಾಳೆ.

ಒಂದು ವಾರದ ಹಿಂದೆ 14 ವರ್ಷದ ಬಾಲಕನ ಮೃತದೇಹವನ್ನು ದೇವಾರಿಯಾ ಗ್ರಾಮದ ಹೊರವಲಯದಲ್ಲಿರುವ ಕಾಲುವೆಯಲ್ಲಿ ಪತ್ತೆಯಾಗಿತ್ತು. ನಂತರ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಈ ವೇಳೆ ಬಾಲಕನ ತಾಯಿ ಮೇಲೆ ಅನುಮಾನ ವ್ಯಕ್ತವಾಗಿದ್ದರಿಂದ ಪೊಲೀಸರು ಆಕೆಯನ್ನ ವಶಕ್ಕೆ ಪಡೆದ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ಧರ್ಮಶೀಲಾ ದೇವಿ ತಾನೇ ಮಗನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೇ ತನ್ನ ಪ್ರಿಯಕರ ಚಂದೇಶ್ ಸಿಂಗ್ ಮತ್ತು ಆತನ ಸ್ನೇಹಿತ ದಯಾಶಂಕರ್ ಮೂಲಕ ಮಗನನ್ನು ಹತ್ಯೆ ಮಾಡಿಸಿರುವುದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ದೇವಿ ಪತಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಈಕೆ ತನ್ನ ಮಕ್ಕಳೊಂದಿಗೆ ದೇವಾರಿಯಾ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಲಾಕ್‍ಡೌನ್‍ನಿಂದಾಗಿ ಹಾಸ್ಟೆಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮನೀಶ್ ಕುಮಾರ್ ಮನೆಗೆ ಬಂದಿದ್ದನು. ಒಂದು ದಿನ ತನ್ನ ತಾಯಿ ತನ್ನ ಪ್ರಿಯಕರ ಚಂದೇಶ್‍ಸಿಂಗ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಗ ಮಗ ನೋಡಿದ್ದಾನೆ. ಆಗ ತಾಯಿಯ ಅನೈತಿಕ ಸಂಬಂಧದ ಬಗ್ಗೆ ಮನೀಶ್ ಕುಮಾರ್‍ಗೆ ಗೊತ್ತಾಗಿದೆ.

ಆರೋಪಿ ದೇವಿ ಮಗ ತನ್ನ ಅನೈತಿಕ ಸಂಬಂಧ ಬಗ್ಗೆ ಯಾರಿಗಾದರೂ ತಿಳಿಸುತ್ತಾನೆ ಎಂದು ಭಯಗೊಂಡಿದ್ದಾಳೆ. ಕೊನೆಗೆ ತನ್ನ ಅನೈತಿಕ ಸಂಬಂಧವನ್ನು ಮುಚ್ಚಾಕಲು ಪ್ರಿಯಕರನ ಸಹಾಯ ಪಡೆದು ಮನನ್ನೇ ಕೊಲೆ ಮಾಡಿಸಿದ್ದಾಳೆ. ಸದ್ಯಕ್ಕೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸುಮಾನ್ ಕುಮಾರ್ ಮಿಶ್ರಾ ಹೇಳಿದರು.