Connect with us

Bengaluru City

ಗ್ರಹಣದ ವಿಶೇಷತೆ ಏನು? ಇಂದು ಏನು ಮಾಡಬೇಕು- ಜ್ಯೋತಿಷಿ ಸೋಮಸುಂದರ ದೀಕ್ಷಿತ್ ಹೇಳ್ತಾರೆ

Published

on

– ರಾತ್ರಿ 8 ಗಂಟೆಯೊಳಗೆ ಊಟ ಮಾಡಿ
– ವೃಶ್ಚಿಕ ರಾಶಿಯವರಿಗೆ ಮಿತ್ರರೇ ಶತ್ರುಗಳಾಗಬಹುದು
– ಸಿಎಂ, ಪಿಎಂ ಮನಸ್ಸಿನ ಮೇಲೆ ಪರಿಣಾಮ

ಬೆಂಗಳೂರು: ಇಂದು ವರ್ಷದ 2ನೇ ಚಂದ್ರಗ್ರಹಣ. ಚಂದ್ರಗ್ರಹಣ ಗೋಚರ ನಮ್ಮಲ್ಲಿ ಇಲ್ಲ. ಆದರೂ ಚಂದ್ರಗ್ರಹಣದ ಎಫೆಕ್ಟ್ ಮಾತ್ರ ಇದೆ. ವೃಶ್ಚಿಕ ರಾಶಿಗೆ ಹೆಚ್ಚು ಎಫೆಕ್ಟ್ ಇದೆ. ಹಾಗೆಯೇ ಎಲ್ಲ ರಾಶಿ, ನಕ್ಷತ್ರದವರು ಎಚ್ಚರಿಕೆಯಿಂದ ಇರಬೇಕು ಎಂದು ಜ್ಯೋತಿಷಿ ಸೋಮಸುಂದರ ದೀಕ್ಷಿತ್ ಅವರು ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ರಾತ್ರಿ 11 ಗಂಟೆಯಿಂದ ಶನಿವಾರ ಮುಂಜಾನೆ 2.45ರವರೆಗೂ ಗ್ರಹಣದ ಕಾಲ ಇದೆ. ಚಂದ್ರಗ್ರಹಣ ನಮಗೆ ಗೋಚರವಾಗದ ಕಾರಣ ಅದರ ಯಾವುದೇ ಎಫೆಕ್ಟ್ ಇರುವುದಿಲ್ಲ. ಆದರೂ ನಾವು ನೋಡುವ ಚಂದ್ರನಿಗೆ ಗ್ರಹಣವಾಗುವುದರಿಂದ ಅದರ ಬಗ್ಗೆ ನಮಗೂ ಕಾಳಜಿ ಇದೆ. ಈಗ ವೃಶ್ವಿಕ ಲಗ್ನದಲ್ಲಿ ಗ್ರಹಣ ನಡೆಯುತ್ತಿದೆ. ಹೀಗಾಗಿ ಈ ರಾಶಿಯವರಿಗೆ ಅನುಕೂಲವೂ ಇದೆ, ಅನಾನುಕೂಲವೂ ಇದೆ. ಇದೊಂದು ಮಿಶ್ರ ಫಲದ ಗ್ರಹಣವಾಗಿದೆ ಎಂದರು.

ಇದು ಭಾರತ ದೇಶಕ್ಕೆ ಕಾಣಿಸದೆ ಇರುವುದರಿಂದ ಬೇರೆ ಕೆಲವು ದೇಶಗಳಿಗೆ ಪರಿಣಾಮ ಬೀರುತ್ತದೆ. ವೃಶ್ಚಿಕ ಲಗ್ನದಲ್ಲಿ ಗ್ರಹಣ ಸಂಭವವಾಗುವ ಹಿನ್ನೆಲೆಯಲ್ಲಿ ಮನಸ್ಕರಕ ಚಂದ್ರನಿಂದ ಮನಸ್ಸಿನ ಮೇಲೆ ಪರಿಣಾಮ ಬೀಳಲಿದೆ. ಸದ್ಯ ದೇವಾಲಯಗಳು ಬಂದ್ ಆಗಿದೆ. ಹೀಗಾಗಿ ಯಾವುದೇ ಸ್ವಚ್ಛ ಕಾರ್ಯ ಇಲ್ಲ. ಜೊತೆಗೆ ಗೋಚರವೂ ಇಲ್ಲ. ದರ್ಬೆ ಹಾಕುವ ಪದ್ಧತಿಯೂ ಇಲ್ಲ. ಶಿವನಿಗೆ ಪೂಜೆ ಮಾಡುವುದರಿಂದ ಗ್ರಹಣದ ದೋಷ ಪರಿಹಾರ ಆಗಲಿದೆ. ಹೀಗಾಗಿ ಶಿವ ದೇವಾಲಯಗಳಲ್ಲಿ ಇಂದು ಸಂಜೆ ದರ್ಬೆ ಹಾಕಲಾಗುತ್ತದೆ ಎಂದು ಸೋಮಸುಂದರ್ ದೀಕ್ಷಿತ್ ಹೇಳಿದರು.

ಮನೆಯಲ್ಲಿ ದರ್ಬೆ ಹಾಕುವ ಅವಶಕ್ಯತೆ ಇರುವುದಿಲ್ಲ. ಆದರೆ ಗ್ರಹಣ ಕಾಲವಧಿಯನ್ನು ನೋಡಿದರೆ ಇಂದು ರಾತ್ರಿ 8 ಗಂಟೆಯೊಳಗೆ ಭೋಜನ ಮಾಡಿ ಮುಗಿಸಿರಬೇಕು. ಇನ್ನೂ ಗ್ರಹಣ ದೋಷ ಪರಿಹಾರವಾಗಲು ಬೆಳಗ್ಗೆಯೇ ಸ್ನಾನ ಮಾಡಿ ಮನೆಯಲ್ಲಿ ಶಿವನ ಪೂಜೆ ಮಾಡಿ. ವೃಶ್ಚಿಕ ರಾತ್ರಿ ಮಾತ್ರವಲ್ಲದೇ ಎಲ್ಲ ರಾಶಿ, ನಕ್ಷತ್ರ, ಜನರಿಗೆ ಚಂದ್ರ ಬೇಕಿರುವುದರಿಂದ ಎಲ್ಲರೂ ಎಚ್ಚರಿಕೆಯಿಂದ ಇರುವುದು ಉತ್ತಮ ಎಂದರು.

ಸಿಎಂ ಯಡಿಯೂರಪ್ಪ ಅವರದ್ದು ವೃಶ್ಚಿಕ ರಾಶಿ. ದೇಶದ ಪ್ರಧಾನಿ ಮಂತ್ರಿಗಳದ್ದು ಅನುರಾಧ ನಕ್ಷತ್ರ, ವೃಶ್ಚಿಕ ರಾಶಿಯಾಗಿದೆ. ಮನಸ್ಕರ ಚಂದ್ರವಾಗಿರುವುದರಿಂದ ವೃಶ್ಚಿಕ ರಾಶಿಯವರಿಗೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಸದ್ಯಕ್ಕೆ ರಾಜ್ಯದಲ್ಲಿ ಕೊರೊನಾ, ಆರ್ಥಿಕ ಸಂಕಷ್ಟ ಎದುರಾಗಿದೆ. ಇದರ ಬಗ್ಗೆ ಸಿಎಂ ತಲೆ ಕೆಡಿಸಿಕೊಳ್ಳುತ್ತಾರೆ. ಅದರಂತೆಯೇ ದೇಶದಲ್ಲೂ ಕೊರೊನಾ, ಅತ್ತ ಚೀನ ಯುದ್ಧ ಮಾಡಲು ಮುಂದಾಗಿದೆ. ಇದೆಲ್ಲದರ ಬಗ್ಗೆ ಪ್ರಧಾನಿ ಅವರು ಯೋಚನೆ ಮಾಡುತ್ತಾರೆ. ಹೀಗಾಗಿ ವೃಶ್ಚಿಕ ರಾಶಿಯವರಿಗೆ ಮನಸ್ಸಿನ ನೆಮ್ಮದಿ ಕೆಡುತ್ತದೆ. ಮಿತ್ರರೇ ಶತ್ರುಗಳಾಗಬಹುದು ಎಂದು ಜ್ಯೋತಿಷಿ ಸೋಮಸುಂದರ ದೀಕ್ಷಿತ್ ಅಭಿಪ್ರಾಯ ವ್ಯಕ್ತಪಡಿಸಿದರು.