Wednesday, 29th January 2020

ಇದು ನನಗೆ ಮಾಡಿದ ಕಪಾಳಮೋಕ್ಷ: ಸೋತ ಮೇಲೆ ಪ್ರಕಾಶ್ ರಾಜ್ ಟ್ವೀಟ್

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಸೋಲು ಕಂಡಿದ್ದಾರೆ. ಇದೇ ಬೇಸ ರದಿಂದ ಈ ಚುನಾವಣೆಯ ಫಲಿತಾಂಶ ನನಗೆ ಮಾಡಿದ ಕಪಾಳ ಮೋಕ್ಷವಾಗಿದೆ ಎಂದು ಹೇಳಿಕೊಂಡಿದ್ದಾರೆ.

ನಟ ಪ್ರಕಾಶ್ ಚುನಾವಣೆಯ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿದ್ದು, ಇದು ನನಗಾಗಿರುವ ಕಪಾಳಮೋಕ್ಷ. ನನ್ನ ದಾರಿಯುದ್ದಕ್ಕೂ ಅನೇಕ ನಿಂದನೆ, ಟ್ರೋಲ್ ಮತ್ತು ಅವಮಾನವೇ ಹೆಚ್ಚಾಗಿದ್ದವು. ಆದರೂ ನನ್ನ ನಿಲುವಿಗೆ ನಾನು ಬದ್ಧನಾಗಿದ್ದೇನೆ. ಜಾತ್ಯತೀತ ಭಾರತಕ್ಕಾಗಿ ನನ್ನ ಹೋರಾಟವನ್ನು ನಿರಂತವಾಗಿ ಮುಂದುವರಿಸುತ್ತೇನೆ. ನನ್ನ ಕಷ್ಟಕರವಾದ ಪ್ರಯಣ ಈಗ ಪ್ರಾರಂವಾಗಿದೆ. ಈ ಲೋಕಸಭಾ ಚುನಾವಣೆಯ ಪಯಣದಲ್ಲಿ ನನ್ನ ಜೊತೆ ಇದ್ದು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರು ಕೇಂದ್ರದಿಂದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಪಿ.ಸಿ ಮೋಹನ್‍ಗೆ ಸ್ಪರ್ಧಿಯಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಚುನಾವಭಣೆ ಎದುರಿಸಿದ್ದರು. ಇತ್ತ ಪ್ರಕಾಶ್ ರಾಜ್ ಪಕ್ಷೇತರ ಅಭ್ಯರ್ಥಿಯಾಗಿ ಚುನಾಯಿಸಿದ್ದರು.

ಪಿ.ಸಿ ಮೋಹನ್ ಅವರು 6,02,877 ಮತಗಳನ್ನು ಪಡೆದಿದ್ದರೆ, ರಿಜ್ವಾನ್ ಅರ್ಷದ್ 5,32,160 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ 70,717 ಮತಗಳ ಅಂತರದಿಂದ ಮೋಹನ್ ಗೆಲವು ಸಾಧಿಸಿದ್ದಾರೆ. ಪ್ರಕಾಶ್ ರಾಜ್ 28,882 ಮತಗಳನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *