Connect with us

Bengaluru City

ಸಿಎಂ ಎಚ್‍ಡಿಕೆ ‘ಫಿಟ್ನೆಸ್’ ಬಗ್ಗೆ ಮಾಹಿತಿ ನೀಡಿ – ರಾಜ್ಯಪಾಲರಿಗೆ ಪತ್ರ

Published

on

ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ತಮ್ಮ ಆರೋಗ್ಯದ ಬಗ್ಗೆ ಸಾರ್ವಜನಿಕವಾಗಿಯೇ ಹೇಳಿಕೆ ನೀಡಿದ್ದು, ಅವರ ಆರೋಗ್ಯ ಬಗ್ಗೆ ರಾಜ್ಯದ ಜನರಲ್ಲಿ ಆತಂಕ ಮೂಡಿದೆ. ಆದ್ದರಿಂದ ಸಿಎಂರ ಆರೋಗ್ಯದ ಕುರಿತು ಮಾಹಿತಿ ನೀಡಿ ಎಂದು ಸಾಮಾಜಿಕ ಹೋರಾಟಗಾರರೊಬ್ಬರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಸಾಮಾಜಿಕ ಹೋರಾಟಗಾರ ಬಿಎಸ್ ಗೌಡ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದು, 2018ರ ಮೇ ತಿಂಗಳಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಸಿಎಂ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರ ಕಾರ್ಯಕ್ರಮ ಹಾಗೂ ಇತರೇ ಸಭೆಯಗಳಲ್ಲಿ ನನ್ನ ಆರೋಗ್ಯ ಸರಿ ಇಲ್ಲ. ನಾನು ಯಾವಾಗ ಬೇಕಾದರೂ ಸಾಯುವ ಪರಿಸ್ಥಿತಿ ಇದೆ ಎಂದು ಅವರೇ ಪ್ರಸ್ತಾಪ ಮಾಡಿದ್ದಾರೆ. ಈ ವಿಚಾರ ಮಾಧ್ಯಮಗಳಲ್ಲಿ ಕೂಡ ಸುದ್ದಿಯಾಗಿದ್ದು, ರಾಜ್ಯದ ಮತದಾರನಾಗಿ ಮುಖ್ಯಮಂತ್ರಿಗಳ ಆರೋಗ್ಯ ಬಗ್ಗೆ ಆತಂಕವಾಗುತ್ತಿದೆ ಎಂದಿದ್ದಾರೆ.

ಸಿಎಂ ಅವರ ಆರೋಗ್ಯ ಬಗ್ಗೆ ತಿಳಿದುಕೊಳ್ಳಲು ಆಸಕ್ತನಾಗಿದ್ದು, ಆದ್ದರಿಂದ ರಾಜ್ಯಪಾಲರು ಸಿಎಂ ಅವರ ಆರೋಗ್ಯದ ತಪಾಸಣೆಯ ದಾಖಲೆಗಳನ್ನು ಬಹಿರಂಗ ಪಡಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.