Connect with us

Latest

ನೆಟ್ಟಿಗನ ಪ್ರಶ್ನೆಗೆ ಚಪ್ಪಲಿ ಬ್ರ್ಯಾಂಡ್ ಕೇಳ್ಬೇಡಿ ಅಂದ್ರು ಸ್ಮೃತಿ ಇರಾನಿ!

Published

on

ನವದೆಹಲಿ: ಕೇಂದ್ರ ಸಚಿವ ಸ್ಮೃತಿ ಇರಾನಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ನೆಟ್ಟಿಗರ ಫನ್ನಿ ಪ್ರಶ್ನೆಗಳಿಗೂ ಉತ್ತರಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ಫೋಟೋವೊಂದನ್ನ ಸ್ಮೃತಿ ಇರಾನಿ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆದ್ರೆ ನೆಟ್ಟಿಗರೊಬ್ಬರ ಗಮನ ಕೇಂದ್ರ ಸಚಿವೆ ತೊಟ್ಟ ಚಪ್ಪಲಿ ಮೇಲೆ ಬಿದ್ದಿದೆ. ನೆಟ್ಟಿಗ ಕೇಳಿದ ಪ್ರಶ್ನೆಗೆ ಸ್ಮೃತಿ ಇರಾನಿ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.

ಗಾರ್ಡನ್ ಏರಿಯಾದಲ್ಲಿ ಟೇಬಲ್ ಮೇಲೆ ಲ್ಯಾಪ್‍ಟಾಪ್ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಫೋಟೋ ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡು ‘ಪ್ಯಾನ್‍ಡಮಿಕ್ ಮಾರ್ನಿಂಗ್’ ಅಂತ ಬರೆದುಕೊಂಡಿದ್ದರು. ಫೋಟೋ ಅಪ್ಲೋಡ್ ಆಗುತ್ತಿದ್ದಂತೆ ನೆಟ್ಟಿಗರು ಸಹ ಲೈಕ್ಸ್, ಕಮೆಂಟ್ ಮಾಡಲಾರಂಭಿಸಿದ್ದರು.

 

View this post on Instagram

 

A post shared by Smriti Irani (@smritiiraniofficial)

ಓರ್ವ ನೆಟ್ಟಿಗ ಇದು ಹವಾಯಿ ಚಪ್ಪಲಿ ಅಲ್ವಾ ಅಂತ ಕಮೆಂಟ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಸ್ಮೃತಿ ಇರಾನಿ, ಅರೇ ಬ್ರದರ್ ಇದು ಹವಾಯಿ ಚಪ್ಪಲಿ, 200 ರೂಪಾಯಿ ಬೆಲೆಯದ್ದು. ಈಗ ನೀವು ಯಾವ ಬ್ರ್ಯಾಂಡ್ ಎಂದು ಮಾತ್ರ ಕೇಳಬೇಡಿ.. ಲೋಕಲ್ ಇದೆ ಎಂದು ಉತ್ತರ ನೀಡಿದ್ದಾರೆ. ಇದಾದ ಬಳಿಕ ನೆಟ್ಟಿಗರು ವೋಕಲ್ ಫಾರ್ ಲೋಕಲ್ ಎಂದು ಕಮೆಂಟ್ ಮಾಡುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in