Connect with us

Cinema

ರೈತರನ್ನ ಭಯೋತ್ಪಾದಕರು ಅಂದಿದ್ದಕ್ಕೆ 6 ಬ್ರಾಂಡ್ ಕಾಂಟ್ರಕ್ಟ್ ಕಳೆದುಕೊಂಡೆ: ಕಂಗನಾ

Published

on

ಮುಂಬೈ: ಸದಾ ಟ್ವೀಟ್ ಗಳ ಮೂಲಕ ಸದ್ದು ಮಾಡುವ ನಟಿ ಕಂಗನಾ ರಣಾವತ್, ತಮ್ಮ ಹಳೆಯ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಕಂಗನಾ ರಣಾವತ್ ಪ್ರತಿಭಟನಾ ನಿರತ ರೈತರನ್ನ ಭಯೋತ್ಪಾದಕರಿಗೆ ಹೋಲಿಸಿ ಟ್ವೀಟ್ ಮಾಡಿ ಅಳಸಿ ಹಾಕಿದ್ದರು. ಇಂದು ದೆಹಲಿಯಲ್ಲಿ ನಡೆದ ರೈತರ ದಂಗೆ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ ತಮ್ಮ ಮೊದಲಿನ ಮಾತುಗಳನ್ನ ಪುನರುಚ್ಛಿರಿಸಿದ್ದಾರೆ.

ಇಂದಿನ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಕಂಗನಾ, ರೈತರನ್ನ ಭಯೋತ್ಪಾದಕರು ಅಂತ ಕರೆದಿದ್ದಕ್ಕೆ ಒಪ್ಪಂದವಾಗಿದ್ದ ಆರು ಬ್ರಾಂಡ್ ಒಪ್ಪಂದಗಳನ್ನು ಕಳೆದುಕೊಂಡೆ. ನಿಮ್ಮನ್ನ ಬ್ರಾಂಡ್ ಗಳಿಗೆ ರಾಯಭಾರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಅಂತ ಹೇಳಿದರು. ಎಂದು ಟ್ವೀಟ್ ಮಾಡಿದ್ದಾರೆ.

ಇಂತಹ ಪ್ರತಿಭಟನೆಗಳು ದೇಶದ ಅಭಿವೃದ್ಧಿಗೆ ಅಪಾಯಕಾರಿ. ರೈತರ ಹೆಸರಿನಲ್ಲಿರುವ ಭಯೋತ್ಪಾದಕರಿಗೆ ಬಾಹ್ಯ ಬೆಂಬಲವಿದೆ. ಇಂದು ಸಹ ಹಲವರು ಇವರಿಗೆ ಬೆಂಬಲ ನೀಡುತ್ತಿದ್ದಾರೆ. ಕೊರೊನಾದಿಂದ ಚೇತರಿಸಿಕೊಂಡು ನಮ್ಮದ ಲಸಿಕೆ ತಯಾರಿಸಿಕೊಳ್ಳುವ ಇಡೀ ವಿಶ್ವಕ್ಕೆ ಭಾರತ ಮಾದರಿಯಾಗಿದೆ. ಗಣರಾಜ್ಯೋತ್ಸವ ಸಂಭ್ರಮದಲ್ಲಿ ಈ ಘಟನೆ ನಡೆದಿದ್ದು ದುರಂತ. ಯಾವುದೇ ದೇಶದ ಪ್ರಧಾನಿ ಬಂದರೂ ಕೆಲವು ಅನಕ್ಷರಸ್ಥರಂತೆ ಅರೆ ನಗ್ನರಾಗಿ ರಸ್ತೆಯಲ್ಲಿ ಕುಳಿತುಕೊಳ್ಳುತ್ತಾರೆ. ಇದರಿಂದ ದೇಶಕ್ಕೆ ಯಾವುದೇ ಲಾಭವಿಲ್ಲ. ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಎಲ್ಲರನ್ನ ಜೈಲಿಗೆ ಹಾಕಿ ಎಂದು ಆಗ್ರಹಿಸಿದ್ದಾರೆ.

ಮಗದೊಂದು ಟ್ವೀಟ್ ನಲ್ಲಿ ಇಂದಿನ ದಂಗೆಗೆ ಬೆಂಬಲ ನೀಡುವ ಬೆಂಬಲ ನೀಡುವ ಭಾರತೀಯರು ಸಹ ಆತಂಕವಾದಿಗಳು ಎಂದು ಹೇಳುತ್ತೇನೆ. ಇದೊಂದು ರಾಷ್ಟ್ರ ದ್ರೋಹ ಕೆಲಸ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಟ್ವೀಟ್ ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿದೆ.

Click to comment

Leave a Reply

Your email address will not be published. Required fields are marked *