Tuesday, 21st January 2020

Recent News

ಐಪಿಎಸ್ ರೂಪಾ ಬಿಜೆಪಿಯಂತೆ! – ಟೀಕಿಸಿದವರಿಗೆ ಐಜಿಪಿಯಿಂದ ಕ್ಲಾಸ್

ಬೆಂಗಳೂರು: ಐಪಿಎಸ್ ಅಧಿಕಾರಿ ಪ್ರಸ್ತುತ ಹೋಮ್‌ಗಾರ್ಡ್ಸ್‌ ಮತ್ತು ನಾಗರಿಕ ರಕ್ಷಣೆ ವಿಭಾಗದ ಐಜಿಪಿಯಾಗಿರುವ ರೂಪ ಬಿಜೆಪಿಯಂತೆ. ಹೀಗೊಂದು ಪರ, ವಿರೋಧ ಚರ್ಚೆ ಈಗ ಆರಂಭಗೊಂಡಿದೆ.

ನಗರದಲ್ಲಿ ನಡೆದ ಖಾಸಗಿ ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಐಪಿಎಸ್ ಅಧಿಕಾರಿ ರೂಪ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಜೊತೆ ಸೆಲ್ಫಿ ಕ್ಲಿಕ್ಕಿಸಿತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದರು.

ಸುಬ್ರಮಣಿಯನ್ ಸ್ವಾಮಿ ಅಂತಹವರು ಕೊಟ್ಟ ದೂರಿನಿಂದಾಗಿನೇ ಜೈಲಿನಲ್ಲಿ ವೈಭೋಗ ಅನುಭವಿಸುತ್ತಿದ್ದ ಮಹಿಳೆ ವಿಚಾರವನ್ನು ನಾನು ಬಯಲಿಗೆ ಎಳೆಯಲು ಸಾಧ್ಯವಾಯಿತು ಎಂದು ಬರೆದುಕೊಂಡಿದ್ದರು. ಇನ್ನೊಂದು ಟ್ವೀಟ್ ನಲ್ಲಿ ನೀವು ನಮಗೆಲ್ಲಾ ಸ್ಪೂರ್ತಿ ಎಂದು ಬರೆದುಕೊಂಡಿದ್ದರು.

ಇದರಿಂದ ಕೆರಳಿರುವ ಕೆಲ ಟ್ವಿಟಿಗರು ಸಾರ್ವಜನಿಕ ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿಗಳು ಅಧಿಕಾರಕ್ಕೆ ಬರುವ ಬೇರೆ ಬೇರೆ ಪಕ್ಷಗಳೊಡನೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ರೀತಿ ಒಂದು ಪಕ್ಷದವರ ಪರ ಮಾತನಾಡುವುದು ಒಳ್ಳೆಯದಲ್ಲ. ಬಿಜೆಪಿ ನಿಮ್ಮನ್ನ ಗೌರವಿಸಿದರೆಂದು ಅವರ ಪರ ನೀವು ಮಾತನಾಡುತ್ತಿದ್ದೀರ ಎಂದು ಟೀಕಿಸಿ ಟ್ವೀಟ್ ಮಾಡಿದ್ದರು.

ಈ ಫೋಟೋ ನಿಮ್ಮ ಕ್ಯಾಮೆರಾ ಇಂದ ತೆಗೆದ ಫೋಟೋ ಅಲ್ಲ. ನಿಮ್ಮ ಮೊಬೈಲ್ ಇಂದ ತೆಗೆದ ಫೋಟೋ ಎಲ್ಲಿದೆ. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶ ದಿಂದ ಶಶಿಕಲಾ ಜೈಲಿನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ತನ್ನ ವಿರುದ್ಧ ಬಂದ ಟ್ವೀಟ್ ಗಳಿಗೆ ಜೈಲಿನ ಅಕ್ರಮಗಳನ್ನು ನಾನು ಬಯಲಿಗೆ ಎಳೆದಿದ್ದೆ. ಕರ್ನಾಟಕ ಪೊಲೀಸ್ ಕಾಯ್ದೆಯ ಪ್ರಕಾರ ಒಂದು ವರ್ಷದ ಒಳಗಡೆ ಅಧಿಕಾರಿಯನ್ನು ವರ್ಗಾವಣೆ ಮಾಡುವಂತಿಲ್ಲ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ರಾಜಕೀಯ ಪ್ರೇರಿತವಾಗಿ ಟ್ವೀಟ್ ಮಾಡಿದ ವ್ಯಕ್ತಿಗಳನ್ನು ಅವರು ಬ್ಲಾಕ್ ಮಾಡಿದ್ದರು. ಪರ, ವಿರೋಧ ಚರ್ಚೆಯಾದ ಕಾರಣ ರೂಪ ಅವರ ಹೆಸರು ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿತ್ತು.

ಈ ಟ್ವೀಟ್ ಗೆ, ರೂಪ ಅವರು ಕರ್ತವ್ಯದಲ್ಲಿ ಧೈರ್ಯ ತೋರಿದ್ದಾರೆ ಎಂದು ಬರೆದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿ ಹೊಗಳಿದ್ದಾರೆ.

 

 

 

 

Leave a Reply

Your email address will not be published. Required fields are marked *