Saturday, 15th December 2018

ಮಾಡೆಲ್‍ಗೆ ಅಶ್ಲೀಲ ಫೋಟೋ ಕಳುಹಿಸಿ, ಲೈಂಗಿಕ ಕಿರುಕುಳ ನೀಡಿದ್ದ ಗಾಯಕ ಅರೆಸ್ಟ್

ದುಬೈ: ಬಾಲಿವುಡ್ ಗಾಯಕ ಮಿಕಾ ಸಿಂಗ್ ಮಾಡೆಲ್‍ಗೆ ಅಶ್ಲೀಲ ಫೋಟೋ ಕಳುಹಿಸಿ ಲೈಂಗಿಕ ಕಿರುಕುಳ ನೀಡಿ ದುಬೈನಲ್ಲಿ ಅರೆಸ್ಟ್ ಆಗಿದ್ದಾರೆ.

17 ವರ್ಷದ ಬ್ರೇಜಿಲಿಯನ್ ಮಾಡೆಲ್‍ಗೆ ಗಾಯಕ ಮಿಕಾ ಸಿಂಗ್ ಅಶ್ಲೀಲ ಫೋಟೋ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಬ್ರೇಜಿಲಿಯನ್ ಹುಡುಗಿ ಮುರಾಕ್ಕಾಬಾತ್ ಪೊಲೀಸ್ ಠಾಣೆಯಲ್ಲಿ ಅಶ್ಲೀಲ ಫೋಟೋ ಕಳುಹಿಸಿದ್ದ ಮಿಕಾ ವಿರುದ್ಧ ದೂರು ನೀಡಿದ್ದರು.

ಹುಡುಗಿಯ ದೂರು ಸ್ವೀಕರಿಸಿದ ಪೊಲೀಸರು ಬೆಳಗ್ಗಿನ ಜಾವ ಸುಮಾರು 3 ಗಂಟೆಗೆ ಬುರ್ ದುಬೈನಲ್ಲಿ ಗಾಯಕ ಮಿಕಾ ಸಿಂಗ್‍ರನ್ನು ಬಂಧಿಸಿದ್ದಾರೆ.

ಮಿಕಾ ದುಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದರು. ಈ ವೇಳೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಿಕಾ ಸ್ನೇಹಿತರು ಗಾಯಕನನ್ನು ಜೈಲಿನಿಂದ ಹೊರತರಲು ಪ್ರಯತ್ನ ಪಡುತ್ತಿದ್ದಾರೆ.

2007ರಲ್ಲಿ ರಾಖಿ ಸಾವಂತ್ ಅವರು ಮಿಕಾ ಸಿಂಗ್ ಅವರ ಬರ್ತ್ ಡೇ ಪಾರ್ಟಿಗೆ ಹೋಗಿದ್ದರು. ಈ ವೇಳೆ ಮಿಕಾ, ರಾಖಿ ಸಾವಂತ್‍ ರನ್ನು ಬಲವಂತವಾಗಿ ಎಳೆದು ಕಿಸ್ ಮಾಡಿದ್ದಾರೆ. ಈ ಕಿಸ್ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಅಲ್ಲದೇ ರಾಖಿ ಸಾವಂತ್, ಮಿಕಾ ಅವರ ಮೇಲೆ ರೊಚ್ಚಿಗೆದ್ದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *