ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಂಡ ಸಿಂಹಗಳು!

Advertisements

ಸಿಂಗಾಪುರ : ವಿದೇಶದ ಮೃಗಾಲಯವೊಂದಕ್ಕೆ ಸಾಗಿಸಲು ಕಂಟೈನರ್‌ನಲ್ಲಿ ಇರಿಸಲಾಗಿದ್ದ 2 ಸಿಂಹಗಳು ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಂಡ ಆತಂಕಕಾರಿ ಘಟನೆ ಸಿಂಗಾಪುರದಲ್ಲಿ ನಡೆದಿದೆ.

Advertisements

ಸಿಂಗಾಪುರದಿಂದ ವಿದೇಶದ ಮೃಗಾಲಯಗಳಿಗೆ ಸಿಂಹಗಳನ್ನು ಸಾಗಿಸಲಾಗುತ್ತಿತ್ತು. ಆದರೆ ಚಾಂಗಿ ವಿಮಾನ ನಿಲ್ದಾಣದಲ್ಲಿ 2 ಸಿಂಹಗಳು ತಪ್ಪಿಸಿಕೊಂಡು ಕಟ್ಟಡದ ಸುತ್ತಲೂ ತಿರುಗಾಡುತ್ತಿದ್ದವು. ಇದರಿಂದಾಗಿ ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ನಂತರ ವಿಮಾನ ನಿಲ್ದಾಣದಲ್ಲಿದ್ದ ಅಧಿಕಾರಿಗಳು ಅವುಗಳನ್ನು ಸೆರೆ ಹಿಡಿಯಲು ಮಾಂಡೈ ವನ್ಯಜೀವಿ ತಜ್ಞರಿಗೆ ತಿಳಿಸಿದರು. ಸ್ವಲ್ಪ ಸಮಯದ ನಂತರ ಆಗಮಿಸಿದ ಪಶುವೈದ್ಯರ ಗುಂಪು 2 ಸಿಂಹಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಉತ್ತರಾಖಂಡದ ಆರೋಗ್ಯ ಸಚಿವರ ಕಾರು ಅಪಘಾತ!

Advertisements

ಮಾಂಡೈ ವನ್ಯಜೀವಿ ತಜ್ಞರ ಸಹಾಯದಿಂದ ಅವುಗಳಿಗೆ ಅರವಳಿಕೆ ಚುಚ್ಚುಮದ್ದನ್ನು ಗನ್ ಮೂಲಕ ಗುಂಡು ಹಾರಿಸಿ ನೀಡಿದರು. ನಂತರ ಆ 2 ಸಿಂಹಗಳನ್ನು ಸೆರೆ ಹಿಡಿಯಲಾಯಿತು. ಪ್ರಸ್ತುತ 2 ಸಿಂಹಗಳಿಗೆ ಮಾಂಡೈ ಅಭಯಾರಣ್ಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 7 ಸಿಂಹಗಳನ್ನು ವಿದೇಶದ ಮೃಗಾಲಯಕ್ಕಾಗಿ ಸಿಂಗಾಪುರ್ ಏರ್‌ಲೈನ್ಸ್ ಮುಖಾಂತರ ಸಾಗಿಸಲಾಗುತ್ತಿತ್ತು. ಇದನ್ನೂ ಓದಿ: ಯುವತಿಯ ಒಂದು ದೂರಿಗೆ 1 ಸಾವಿರ ಪೊಲೀಸರು ತನಿಖೆ ಮಾಡಿದ್ರು!

Advertisements
Advertisements
Exit mobile version