Connect with us

Districts

ಬೆಳ್ಳಿ ಸಾಮಾನುಗಳೇ ಟಾರ್ಗೆಟ್ – ಸಿಕ್ಕಿಬಿದ್ರೆ ರಸ್ತೆಯಲ್ಲೇ ಬೆತ್ತಲೆ ಓಟ

Published

on

ಕಲಬುರಗಿ: ಬೆಳ್ಳಿ ಸಾಮಾನುಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಸ್ಸಮ್ಮ ನಂದಿಕೂರ್ ಬಂಧಿತ ಆರೋಪಿ. ಈಕೆ ಚಿನ್ನಾಭರಣ ಇದ್ದರು ಕೂಡ ಮುಟ್ಟದೆ ಬೆಳ್ಳಿಯನ್ನೆ ಕಳ್ಳತನ ಮಾಡುತ್ತಿದ್ದಳು. ಹಗಲು ಹೊತ್ತಿನಲ್ಲೇ ಮನೆಗಳಿಗೆ ನುಗ್ಗಿ ಮನೆ ಕಳ್ಳತನ ಮಾಡುತ್ತಿದ್ದು, ಕಲಬುರಗಿ ನಗರದ ವಿವಿಧ ಬಡವಾಣೆಗಳಲ್ಲಿ ಕಳ್ಳತನ ಮಾಡುತ್ತಿದ್ದಳು.

ಆರೋಪಿ ಬಸ್ಸಮ್ಮ ಕಳ್ಳತನ ಮಾಡಿದ ಬೆಳ್ಳಿ ವಸ್ತುಗಳನ್ನು ತನ್ನ ಸೀರೆಯಲ್ಲಿ ಬಚ್ಚಿಟ್ಟುಕೊಂಡು ಹೋಗುತ್ತಿದ್ದಳು. ಒಂದು ವೇಳೆ ಪೊಲೀಸರು ಬಂಧಿಸುವುದಕ್ಕೆ ಬಂದರೆ ಬೆತ್ತಲೆಯಾಗಿ ರಸ್ತೆಯಲ್ಲಿ ಹುಚ್ಚಿ ತರಹ ಓಡಾಡಿ ಎಸ್ಕೇಪ್ ಆಗುತ್ತಿದ್ದಳು. ಆರೋಪಿ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೇ ಕದ್ದ ವಸ್ತುಗಳನ್ನು ಸೀರೆಯಲ್ಲಿ ಮುಚ್ಚಿಕೊಂಡು ಹೋಗುತ್ತಿದ್ದ ದೃಶ್ಯ ಕೂಡ ಲಭ್ಯವಾಗಿದೆ.

ಮಾಹಿತಿ ತಿಳಿದು ಎಂ.ಬಿ ನಗರ ಪೊಲೀಸರು ಚಾಲಾಕಿ ಕಳ್ಳಿಯನ್ನು ಬಂಧಿಸಿದ್ದಾರೆ. ಬಂಧಿತಳಿಂದ ಸುಮಾರು ಐದು ಕೆ.ಜಿ.ಗೂ ಅಧಿಕ ಬೆಳ್ಳಿ ಸಾಮಾನುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.