Connect with us

Bengaluru City

ಸಿಎಂ ಆಗೋವರೆಗೂ ನಂಗೆ ನಿದ್ದೆ ಬರಲ್ಲ, ಸಿದ್ದರಾಮಯ್ಯ ಒಳ್ಳೆಯರು ಯಡಿಯೂರಪ್ಪ ಭ್ರಷ್ಟ – ರಮೇಶ್‌ ಜಾರಕಿಹೊಳಿ

Published

on

ಬೆಂಗಳೂರು: ರಾಜ್ಯದ ಮಾನ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಹರಾಜಾಗಿದೆ. ಸರ್ಕಾರದ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ದೃಶ್ಯ ಸಮೇತ ಬಹಿರಂಗವಾಗಿದೆ. ರಾಸಲೀಲೆ ಸಂಬಂಧ ಈಗಾಗಲೇ ದೂರು ಕೂಡ ಸಲ್ಲಿಕೆಯಾಗಿದೆ. ಕೆಪಿಟಿಸಿಎಲ್‍ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ಸಂತ್ರಸ್ತ ಯುವತಿಯನ್ನು ಕಾಮಕ್ರಿಯೆಗೆ ಬಳಸಿಕೊಂಡಿರುವುದಾಗಿ ದೂರು ದಾಖಲಾಗಿದೆ.

ರಾಸಲೀಲೆಗೆ ಒಳಗಾದ ಯುವತಿ ಜೊತೆ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿರುವ ಆಡಿಯೋ ಫುಲ್ ವೈರಲ್ ಆಗಿದೆ. ಆಡಿಯೋದಲ್ಲಿ ಯುವತಿ ನೆರವು ಕೇಳುವುದು, ಸಚಿವರು ಭರವಸೆ ನೀಡಿರುವುದು ಬಹಿರಂಗವಾಗಿದೆ.

ಸಂತ್ರಸ್ತೆ ಜೊತೆ ಸರಸದ ವೇಳೆ ರಮೇಶ್ ಜಾರಕಿಹೊಳಿ ಆಡಿರುವ ಮಾತುಗಳು ರಾಜ್ಯದಲ್ಲಿ ರಾಜಕೀಯದಲ್ಲಿ ಇನ್ನೊಂದು ಮಟ್ಟದ ಸಂಚಲನಕ್ಕೆ ಕಾರಣವಾಗಿವೆ. ಯಡಿಯೂರಪ್ಪ ಸರ್ಕಾರ ರಚನೆಗೆ ಕಾರಣರಾದ ರಮೇಶ್ ಜಾರಕಿಹೊಳಿ ಖುದ್ದು ಯಡಿಯೂರಪ್ಪ ವಿರುದ್ಧವೇ ಮಾತನಾಡಿದ್ದಾರೆ. ಸಿದ್ದರಾಮಯ್ಯ ಒಳ್ಳೆಯವರು, ಯಡಿಯೂರಪ್ಪ ಬಹಳ ಭ್ರಷ್ಟ ಎಂದು ರಮೇಶ್ ಜಾರಕಿಹೊಳಿ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಆಗೋವರೆಗೂ ನಂಗೆ ನಿದ್ದೆ ಬರಲ್ಲ ಎಂದು ಕೂಡ ರಮೇಶ್ ಜಾರಕಿಹೊಳಿ ಹೇಳಿಕೊಂಡಿದ್ದಾರೆ. ಆ ವಿಡಿಯೋ ಕೂಡ ಈಗ ವೈರಲ್ ಆಗಿದೆ.

ಎಫ್‌ಐಆರ್‌ ದಾಖಲಾಗಿಲ್ಲ: ಪ್ರಕರಣ ಸಂಬಂಧ ಸಂತ್ರಸ್ತೆ ಪರವಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮೊದಲು ಪೊಲೀಸ್ ಆಯುಕ್ತ ಕಮಲ್ ಪಂತ್‍ರನ್ನು ಭೇಟಿಯಾಗಿ ದೂರು ನೀಡಲು ಮುಂದಾದರು. ಕೊನೆಗೆ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ದಿನೇಶ್ ಕಲ್ಲಹಳ್ಳು ಮನವಿ ಮಾಡಿದ್ದಾರೆ.

ಪೊಲೀಸರು ಇನ್ನೂ ಎಫ್‍ಐಆರ್ ದಾಖಲಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಅನುಚೇತ್, ಸಂತ್ರಸ್ತೆಯ ಹೇಳಿಕೆ ಪಡೆದ ಮೇಲಷ್ಟೇ ಎಫ್‍ಐಆರ್ ದಾಖಲಿಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ, ಸಂತ್ರಸ್ತೆ ಸಂಬಂಧಿಕರ ಜೊತೆ ಪೊಲೀಸರು ದೂರವಾಣಿ ಮೂಲಕ ಮಾತನಾಡಿದ್ದು, ಇದೆಲ್ಲಾ ಸತ್ಯ. ತನಿಖೆಗೆ ಸಹಕರಿಸ್ತೀವಿ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ದೂರಿನಲ್ಲಿ ಏನಿದೆ?
ಬೆಂಗಳೂರಿನ ಆರ್.ಟಿ. ನಗರದ ಪಿಜಿಯಲ್ಲಿ ಯುವತಿ ವಾಸವಾಗಿದ್ದು, ಡ್ರೋಣ್ ಮೂಲಕ ಡ್ಯಾಂ ಚಿತ್ರೀಕರಿಸುವ ಯೋಜನೆಯನ್ನು ಯುವತಿ ಹೊಂದಿದ್ದಳು. ಈ ಸಂಬಂಧ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿಯನ್ನು ಆಕೆ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಕೆಪಿಟಿಸಿಎಲ್‍ನಲ್ಲಿ ಉದ್ಯೋಗ ನೀಡುವ ಆಮಿಷವೊಡ್ಡಿ ಜಾರಕಿಹೊಳಿ ರಾಸಲೀಲೆ ನಡೆಸಿದ್ದಾರೆ. ಕೃತ್ಯದ ಬಳಿಕ ಕೆಲಸ ಕೊಡಿಸದೇ ಸಚಿವ ರಮೇಶ್ ಜಾರಕಿಹೊಳಿ ವಂಚನೆ ಮಾಡಿದ್ದಾರೆ. ಇದೀಗ ಸಂತ್ರಸ್ತ ಯುವತಿಗೆ, ಯುವತಿ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ಸಂತ್ರಸ್ತೆಗೆ ರಕ್ಷಣೆ ಕಲ್ಪಿಸಿಕೊಡುವಂತೆ ದಿನೇಶ್ ಕಲ್ಲಳ್ಳಿ ದೂರು ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *