Connect with us

Dharwad

ಎಸ್ಕಾರ್ಟ್ ಚಾಲಕನ ಮನೆಗೆ ಭೇಟಿ ನೀಡಿದ ಸಿದ್ದರಾಮಯ್ಯ

Published

on

ಧಾರವಾಡ: ಹಲವು ವರ್ಷಗಳಿಂದ ತಮ್ಮ ವಾಹನದ ಎಸ್ಕಾರ್ಟ್ ಚಾಲಕನಾಗಿರುವ ಶರೀಫ್ ಮನೆಗೆ ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದರು.

ಹುಬ್ಬಳ್ಳಿಯಿಂದ ತಮ್ಮ ಕ್ಷೇತ್ರವಾದ ಬಾದಾಮಿಗೆ ಹೋಗುವಾಗ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದಲ್ಲಿರುವ ಶರೀಫ್ ಯಾವಗಲ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿದರು.

ಸಿದ್ದರಾಮಯ್ಯ ಗ್ರಾಮಕ್ಕೆ ಆಗಮಿಸುವುದು ತಿಳಿಯುತ್ತಿದ್ದಂತೆ ಶಲವಡಿ ಗ್ರಾಮಸ್ಥರು ಹಾಗೂ ನವಲಗುಂದ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಜಮಾಯಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಎಲ್ಲರತ್ತ ಕೈ ಬಿಸಿ ಅಲ್ಲಿಂದ ಬಾದಾಮಿಗೆ ಹೊರಟರು.

Click to comment

Leave a Reply

Your email address will not be published. Required fields are marked *