
– ಬಿಜೆಪಿಯವರು ತಾಲಿಬಾನಿಗಳು
– ಶ್ರಿರಾಮುಲು ಒಬ್ಬ ಪೆದ್ದ
ಬೆಂಗಳೂರು: ಬಿಜೆಪಿ ಸರ್ಕಾರದಂತಹ ದರಿದ್ರ ಸರ್ಕಾರ ಬೇರೆ ಇಲ್ಲ. ನಿಮ್ಮ ದಮ್ಮಯ್ಯ ಅಂತೀನಿ ಈ ಸರ್ಕಾರವನ್ನು ಕಿತ್ತು ಬಿಸಾಕಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಅಂದ್ರೆ ಡೊಂಗಿಗಳು, ಬರಿ ಸುಳ್ಳು ಹೇಳುವುದೇ ಅವರ ಕೆಲಸ. ಕೆಲಸ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂತಾರೆ ಆದರೆ ರಾಜ್ಯ ಸರ್ಕಾರದಲ್ಲಿ ಒಬ್ಬನೆ ಒಬ್ಬ ಅಲ್ಪಸಂಖ್ಯಾತ ಮಂತ್ರಿ ಇಲ್ಲ. ಮುಂಬಾಗಿಲ ಮೂಲಕ ಅಧಿಕಾರಕ್ಕೆ ಬಂದು ಬಿಜೆಪಿಗೆ ಗೊತ್ತೇ ಇಲ್ಲ. ಹಿಂಬಾಗಿಲ ಮೂಲಕ ಆಪರೇಶನ್ ಕಮಲ ಮಾಡಿ ಅಧಿಕಾರಕ್ಕೆ ಬಂದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಒಳ್ಳೆಯ ಕೆಲಸ ಮಾಡಿದ್ದರೆ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಇಳಿಸುತ್ತಿರಲಿಲ್ಲ: ಡಿಕೆಶಿ
ಈಗ ಆಪರೇಶನ್ ಮಾಡಿದ ಯಡಿಯೂರಪ್ಪ ಕಿತ್ತು ಹಾಕಿ, ಬೊಮ್ಮಾಯಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಬೊಮ್ಮಾಯಿ ಆರ್ಎಸ್ಎಸ್, ಯಡಿಯೂರಪ್ಪ ಹೇಳಿದಂತೆ ಕೇಳ್ತಾರೆ. ಇವರಿಂದ ಯಾವ ಅಭಯ ನಿರೀಕ್ಷೆಯನ್ನು ಮಾಡೋಕೆ ಸಾಧ್ಯವಿಲ್ಲ ಎಂದರು. ಆರ್ಎಸ್ಎಸ್ ಅಂದ್ರೆ ಗೊತ್ತಾ? ಚಡ್ಡಿಗಳು ನಮ್ಮ ಕಾಲದಲ್ಲಿ ಚಡ್ಡಿಗಳು ಅಂತಿದ್ರು ಇವಾಗ ಪ್ಯಾಂಟ್ ಹಾಕ್ತಾರಾ ಎಂದು ನರೆದಿದ್ದ ಜನರನ್ನು ಪ್ರಶ್ನಿಸಿದರು. ಅವರು ದೇಶ ಭಕ್ತರಲ್ಲ. ಒಬ್ಬರಾದರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರಾ? ನರೇಂದ್ರ ಮೋದಿ ಏನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ರಾ…? ಅವರು ಹುಟ್ಟೇ ಇರಲಿಲ್ಲ ಎಂದು ಆರ್ಎಸ್ಎಸ್ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಸಮ್ಮಿಶ್ರ ಸರ್ಕಾರದ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿತ್ತು. ನಾವು ಐದು ಕೆಜಿಯಿಂದ ಏಳು ಕೆಜಿ ಅಕ್ಕಿ ಕೊಟ್ವಿ, ಆದರೆ ಏಳು ಕೆಜಿ ಹೆಚ್ಚಳ ಮಾಡಲು ದುಡ್ಡು ಇಟ್ಟಿರಲಿಲ್ಲ ಅಂತ ಕುಮಾರಸ್ವಾಮಿ ಸುಳ್ಳು ಹೇಳ್ತಾನೆ. ಬಡವರು ಯಾರು ಹಸಿವಿನಿಂದ ಮಲಗಬಾರದು ಅಂತ ಅಕ್ಕಿ ಕೊಟ್ಟಿದ್ದೇವೆ. ಇದನ್ನು ಕೊಡಲು ಸುಳ್ಳು ಹೇಳಬೇಕಾ ಎಂದು ಏಕವಚನದಲ್ಲೇ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಶ್ರೀರಾಮುಲು ಅಂತ ಒಬ್ಬ ಮಂತ್ರಿ ಇದ್ದಾನೆ. ಅವನು ಪೆದ್ದ. ಕೊರೊನಾದಿಂದ ಸತ್ತವರಿಗೆ ದುಡ್ಡು ಕೊಟ್ಟಿದ್ದೇವೆ ಎಂದ. ಎಲ್ಲಪ್ಪ ದಾಖಲೆ ತೋರಿಸಿ ಅಂದ್ರೆ ತಬ್ಬಿಬ್ಬು ಆಗಿಬಿಟ್ಟ. ಯಡಿಯೂರಪ್ಪ ಸತ್ಯ ಹೇಳಿದ. ಯಾರಿಗೂ ದುಡ್ಡು ಕೊಟ್ಟಿಲ್ಲ ಅಂತ. ಬರಿ ಸುಳ್ಳು ಹೇಳುವುದೇ ಬಿಜೆಪಿ ಕೆಲಸ. ಇದೊಂದು ಹಿಟ್ಲರ್ ಸರ್ಕಾರ. ಅವನ ತರಹ ಸುಳ್ಳು ಹೇಳ್ತಾರೆ. ಎಲ್ಲಾ ಬೆಲೆ ಏರಿಸಿ ಕೂತಿದ್ದಾರೆ, ಸರ್ಕಾರವನ್ನು ಕೇಳಿದ್ರೆ ಆ ಬೊಮ್ಮಾಯಿ ನಿಮ್ಮ ಕಾಲದಲ್ಲಿ ಬೆಲೆ ಏರಿಕೆ ಮಾಡಿಲ್ವಾ ಎಂದು ನಮ್ಮನ್ನೆ ಮರು ಪ್ರಶ್ನೆ ಮಾಡುತ್ತಾರೆ. ನಿಮ್ಮ ದಮ್ಮಯ್ಯ ಇಂತಹ ದರಿದ್ರ ಸರ್ಕಾರವನ್ನು ಕಿತ್ತುಹಾಕಿ ಅಂತ ಸಾರ್ವಜನಿಕರಲ್ಲಿ ಮನವಿ ಮಾಡಿದರು.