ಬೆಂಗಳೂರು: ತಮ್ಮ ತಾಯಿಯೂ ವಿಧವೆ ಎನ್ನವುದನ್ನು ಪ್ರಧಾನಿ ನರೇಂದ್ರ ಮೋದಿ ಮರೆಯಬಾರದು ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ರಾಜಸ್ಥಾನ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ದೇಶದ ವಿಧವೆಯರ ವೇತನದ ಹಣವನ್ನು ಕಾಂಗ್ರೆಸ್ನ ವಿಧವಾ ಮಹಿಳೆ ಲೂಟಿ ಮಾಡಿದ್ದಾಳೆ ಎಂದು ಟೀಕೆ ಮಾಡಿದ್ದರು. ಇದನ್ನು ಖಂಡಿಸಿ ಸಿದ್ದರಾಮಯ್ಯ ಅವರು ಇಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
Advertisement
ಟ್ವೀಟ್ನಲ್ಲಿ ಏನಿದೆ?:
ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ವಿಧವೆಯರನ್ನು ಹೀಯಾಳಿಸುವ ಮೂಲಕ ಸಮಸ್ತ ಸ್ತ್ರೀ ಕುಲವನ್ನು ಅವಮಾನಿಸಿದ್ದಾರೆ. ತಮ್ಮ ತಾಯಿ ಕೂಡ ವಿಧವೆ ಎನ್ನುವುದನ್ನು ಮರೆತಿರುವ ಮೋದಿ ಅವರು ದ್ವೇಷಾಸೂಯೆಯ ರಸಾತಲ ತಲುಪಿದ್ದಾರೆ. ಅವರು ಇಂತಹ ಮಾನಸಿಕ ಅಸ್ವಸ್ಥತೆಯಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕಿಡಿಕಾರಿದ್ದಾರೆ.
Advertisement
ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ವಿಧವೆಯರನ್ನು ಹೀಯಾಳಿಸುವ ಮೂಲಕ ಸಮಸ್ತ ಸ್ತ್ರಿಕುಲವನ್ನು ಅವಮಾನಿಸಿದ್ದಾರೆ. ಮಾಡಿದ್ದಾರೆ. ತನ್ನ ತಾಯಿ ಕೂಡಾ ವಿಧವೆ ಎನ್ನುವುದನ್ನು ಮರೆತಿರುವ ಮೋದಿಯವರು ದ್ವೇಷಾಸೂಯೆಯ ರಸಾತಲ ತಲುಪಿದ್ದಾರೆ. ಅವರು ಇಂತಹ ಮಾನಸಿಕ ಅಸ್ವಸ್ಥತೆಯಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ.https://t.co/4rQm645URq
— Siddaramaiah (@siddaramaiah) December 8, 2018
Advertisement
Advertisement
ಪ್ರಧಾನಿ ಮೋದಿ ಹೇಳಿದ್ದೇನು?:
ಕಾಂಗ್ರೆಸ್ ಅನೇಕ ಹಗರಣಗಳನ್ನು ಮಾಡಿದೆ. ಅವುಗಳನ್ನು ನಾನು ಒಂದೊಂದಾಗಿ ಹೊರಗೆ ತೆಗೆಯುತ್ತಿರುವೆ. ಈ ಮೂಲಕ ಕಾಂಗ್ರೆಸ್ನವರ ಒಂದೊಂದೇ ಅಂಗಡಿ ಮುಚ್ಚುತ್ತಿರುವೆ. ಯುಪಿಎ ಸರ್ಕಾರದ ಅವಧಿಯಲ್ಲಿ ಹೆಣ್ಣು ಹುಟ್ಟುವ ಮೊದಲೇ ಹೆಸರಿಟ್ಟು, ಅವರನ್ನು ವಿಧವೆಯರ ಪಟ್ಟಿಗೆ ಸೇರಿಸುತ್ತಿದ್ದರು. ಬಳಿಕ ಸಿಕ್ಕ ಹಣವನ್ನು ಲೂಟಿ ಮಾಡುತ್ತಿದ್ದ ಎಂದು ಮೋದಿ ಆರೋಪಿಸಿದ್ದರು.
ವಿಧವಾ ವೇತನದ ಹಣ ಕಾಂಗ್ರೆಸ್ನ ಯಾವ ವಿಧವಾ ಮಹಿಳೆಗೆ ಹೋಗುತ್ತಿತ್ತು. ಇದರಂತೆ ವೃದ್ಧಾಪ್ಯ, ದಿವ್ಯಾಂಗ, ವಿದ್ಯಾರ್ಥಿ ವೇತನ, ಮಧ್ಯಾಹ್ನ ಬಿಸಿಯೂಟ ಯೋಜನೆ ಸೇರಿದಂತೆ ಅನೇಕ ಕಡೆಗಳಲ್ಲಿ ಹಣವನ್ನು ಕಾಂಗ್ರೆಸ್ ಅವರು ಲೂಟಿ ಮಾಡಿದ್ದಾರೆ ಎಂದು ಕಿಡಿಕಾರಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv