Connect with us

Bengaluru City

ಸಿದ್ದರಾಮಯ್ಯ, ಕುಮಾರಸ್ವಾಮಿ ಕರ್ನಾಟಕದ ಬಫೂನ್‍ಗಳು – ಮತ್ತೆ ಕುಟುಕಿದ ಹಳ್ಳಿ ಹಕ್ಕಿ

Published

on

– ಕುರುಬರಿಗೆ ಎಸ್‍ಟಿ ಸಿಗಬೇಕು ಅಷ್ಟೇ

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕರ್ನಾಟಕದ ಬಫೂನ್‍ಗಳು. ಅವರು ಯಾಕೆ ಮಾತನಾಡುತ್ತಾರೆ, ಏನು ಮಾತಾಡುತ್ತಾರೆ ಎಂಬುವುದೇ ಅವರಿಗೆ ಅರಿವಿರುವುದಿಲ್ಲ. ಜನ ಅವರನ್ನು ಬಫೂನ್‍ಗಳ ತರ ನೋಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ, ಹಳ್ಳಿ ಹಕ್ಕಿ ಹೆಚ್.ವಿಶ್ವನಾಥ್ ವಾಗ್ದಾಳಿ ಹೇಳಿದ್ದಾರೆ.

ಶಾಸಕರ ಭವನದಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್ ನಾನು ಮಾಜಿ ಸಿಎಂ ಸಿದ್ದರಾಮಯ್ಯಗೆ ಹೋರಾಟದ ಪಾಠ ಮಾಡಲು ತಯಾರಿದ್ದೇನೆ. ಬರಲಿ ಪಾಠ ಮಾಡೋಣ. ಸಿದ್ದರಾಮಯ್ಯ ಯಾವ ಹೋರಾಟ ಮಾಡಿದ್ದಾರೆ? ದೇವೇಗೌಡರು ಜೆಡಿಎಸ್‍ನಿಂದ ಸಿದ್ದರಾಮಯ್ಯರವರನ್ನು ಹೊರ ಹಾಕಿದರು. ಬಳಿಕ ಕಾಂಗ್ರೆಸ್‍ಗೆ ಬಂದರು ಆಗ ನಾವು ಹೋರಾಟ ಮಾಡಿದ್ದೆವು. ನಮ್ಮೆಲ್ಲರಿಂದ ಅವರು ಸಿಎಂ ಆದರು. ಅಹಿಂದ ಅವರು ಕಟ್ಟಿದ್ರಾ? ಜಿಲ್ಲೆ ತಿರುಗಿ ಮುಖುಡಪ್ಪ, ರೇವಣ್ಣ ಸಂಘಟನೆ ಮಾಡಿದರು. ಸಿದ್ದರಾಮಯ್ಯನವರು ಬಂದು ಭಾಷಣ ಮಾಡಿದರು ಅಷ್ಟೇ. ನೀವು ಸಿಎಂ ಆದ ಮೇಲೆ ಅಹಿಂದ ಏನಾಯ್ತು? ಸಿದ್ದರಾಮಯ್ಯನವರೆ ಸಿಎಂ ಆದ ಮೇಲೆ ಅಹಿಂದವನ್ನು ಮರೆತರು. ನಾವೆಲ್ಲ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಸಹ ಸಿದ್ದರಾಮಯ್ಯ ಅಹಿಂದ ಸಂಘಟನೆಗೆ ಬೆಂಬಲ ಕೊಟ್ಟಿದ್ದೇವು. ನಾವೆಲ್ಲ ಬೆಂಬಲ ಕೊಟ್ಟಿದ್ದರಿಂದ ಅಂದು ಅಹಿಂದ ಸಂಘಟನೆ ಯಶಸ್ವಿ ಆಯ್ತು ಎಂದರು.

ಸಿದ್ದರಾಮಯ್ಯ ಯಾವ ಹೋರಾಟ ಮಾಡಿದ್ದೀರಿ? ಮೈಸೂರು ಮಹಾರಾಜರು ಖಡ್ಗ, ಗುರಾಣಿ ಎಲ್ಲ ಹಿಡಿದುಕೊಂಡು ಓಡಾಡಿದ್ರು. ನೀವು ಯಾವ ಯುದ್ದ ಮಾಡಿದ್ದೀರಿ? ಮೈಸೂರು ಮಹಾರಾಜರೂ ಯಾವ ಯುದ್ಧ ಮಾಡಲಿಲ್ಲ, ಸಿದ್ದರಾಮಯ್ಯವರೂ ಯಾವ ಹೋರಾಟ ಮಾಡಲಿಲ್ಲ. ಪಿರಾನ್ ನನ್ನನ್ನು ಕಾಂಗ್ರೆಸ್‍ಗೆ ಕರೆತಂದರು ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಸಿದ್ದರಾಮಯ್ಯ ಹೇಳೋ ಪೀರಾನ್ ಯಾರು ಗೊತ್ತಾ? ಸಿದ್ದರಾಮಯ್ಯ ಹೇಳೋ ಪೀರಾನ್ ಮನಿ ಎಕ್ಸಚೇಂಜರ್ ಎಂದು ಹೇಳಿದರು.

 

ಸಚಿವ ಸಂಪುಟ ವಿಸ್ತರಣೆಯ ಬಗೆಗೆ ಯಾರು ಪದೇ ಪದೇ ಮಾತನಾಡಬಾರದು ಹಿರಿಯ ಸದಸ್ಯನಾಗಿ ನನ್ನ ಅನುಭವದ ಆಧಾರದ ಮೇಲೆ ಹೇಳುತ್ತೇನೆ. ಮುಖ್ಯಮಂತ್ರಿಯಾಗಲಿ ಬೇರೆ ಯಾರೇ ಆಗಲಿ ಅದರ ಬಗ್ಗೆ ದಿನ ಬೆಳಿಗ್ಗೆ ಮಾತನಾಡಬಾರದು. ಹೈಕಮಾಂಡ್ ಯಾವಾಗ ಗ್ರೀನ್ ಸಿಗ್ನಲ್ ಕೊಡುತ್ತದೆಯೋ ಅಂದು ಸಂಪುಟ ವಿಸ್ತರಣೆ ಆಗುತ್ತದೆ. ದಿನ ಬೆಳಿಗ್ಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ರೆ ಮಾತನಾಡುವ ಬದಲು ಅಭಿವೃದ್ಧಿ ಬಗ್ಗೆ ಮಾತಾಡಬೇಕು. ಯಾವಾಗ ಏನು ಆಗಬೇಕು ಅದು ಆ ಸಮಯಕ್ಕೆ ಆಗುತ್ತದೆ ಎಂದು ತಿಳಿಸಿದರು.

ಕುರುಬ ಸಮುದಾಯದ ಬಗೆಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಕುರುಬ ಸಮುದಾಯದ ಎಸ್.ಟಿ ಹೋರಾಟದ ಹಿಂದೆ ಆರ್‍ಎಸ್‍ಎಸ್ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಎಸ್.ಟಿ ಹೋರಾಟದ ಹಿಂದೆ ಆರ್‍ಎಸ್‍ಎಸ್ ಇದ್ದರೆ ತಪ್ಪೇನು? ಕುರುಬರನ್ನು ಒಡೆಯುತ್ತಿರುವುದು ಸಿದ್ದರಾಮಯ್ಯ. ಕುರುಬರನ್ನು ಆರ್‍ಎಸ್‍ಎಸ್ ಒಡೆಯುತ್ತಿಲ್ಲ. ಆರ್‍ಎಸ್‍ಎಸ್ ಬಗ್ಗೆ ಆರೋಪ ಮಾಡೋದು ಸರಿ ಅಲ್ಲ. ಆರ್‍ಎಸ್‍ಎಸ್ ಏನು ಈ ದೇಶದಲ್ಲಿ ಬ್ಯಾನ್ ಆಗಿದೆಯಾ ಸಂತೋಷ್ ಜೀ ಬಳಿ ಹೋದರೆ ಮಾತನಾಡಿದರೆ ತಪ್ಪೇನು? ಹೊಸಬಾಳೆನೂ ಇದ್ದಾರೆ, ಹಳೇಬಾಳೆ ಕೂಡ ಇದ್ದಾರೆ ಏನೀವಾಗ? ನಮಗೆ ಎಸ್.ಟಿ. ಸಿಗಬೇಕು ಅಷ್ಟೇ ಎಂದು ಆಗ್ರಹಿಸಿದರು.

Click to comment

Leave a Reply

Your email address will not be published. Required fields are marked *