Connect with us

Cinema

ನನ್ನ ಹಲ್ಲೆಲ್ಲಾ ಉದುರಿ ಹೋಗ್ತಿದೆ: ಶುಭಾ ಪೂಂಜಾ

Published

on

ಬಿಗ್‍ಬಾಸ್ ಮನೆಯಲ್ಲಿ ಶುಭಾ ಬೇಡಿಕೆಯನ್ನು ಕೇಳಿ ಬಿಗ್‍ಬಾಸ್ ಕಂಗಾಲ ಆದಂತಿದೆ. ಬಿಗ್‍ಬಾಸ್ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಬಿಗ್‍ಬಾಸ್ ಪಡೆದುಕೊಂಡಿದ್ದಾರೆ. ಮನೆಯ ವಸ್ತುಗಳಿಗಾಗಿ ಸ್ಪರ್ಧಿಗಳು ಟಾಸ್ಕ್‍ನಲ್ಲಿ ಗೆದ್ದು ಪಡೆಯಬೇಕಿದೆ. ಆದರೆ ಶುಭಾ ಸಂಕಷ್ಟ ಮಾತ್ರ ಎಲ್ಲರಿಗೂ ನಗು ತರಿಸುವಂತಿದೆ.

ಶುಭಾ ಕೆಲವು ಬಾರಿ ಮನೆಯಲ್ಲಿ ಮಕ್ಕಳಂತೆ ವರ್ತನೆ ಮಾಡುತ್ತಾರೆ. ಕೆಲವೊಮ್ಮೆ ಬಿಗ್‍ಬಾಸ್ ಬಳಿಯೇ ಹಟವನ್ನು ಮಾಡುತ್ತಾರೆ. ಬಿಗ್‍ಬಾಸ್ ಬಳಿ ಕೆಲವು ಬೇಡಿಕೆಗಳನ್ನು ಇಡುತ್ತಾರೆ. ಈ ಬಾರಿ ಶುಭಾ ಬೇಡಿಕೆ ಇಟ್ಟಿರುವುದನ್ನು ಕಂಡು ಮನೆಮಂದಿಯು ನಗುವಂತಾಗಿದೆ.

ಏನೇ ವಸ್ತು ಬೇಕೆಂದರೂ ಬಿಗ್ ಬಾಸ್ ನೀಡುವ ಟಾಸ್ಕ್ ಗೆಲ್ಲಬೇಕಿದೆ. ಸೋತರೇ, ವಾರಪೂರ್ತಿ ಸೌಲಭ್ಯಗಳನ್ನು ಕಳೆದುಕೊಳ್ಳಬೇಕಿದೆ. ಮನೆಯ ಮಂದಿ ಅಗತ್ಯ ವಸ್ತುಗಳಿಂದ ವಂಚಿತರಾಗಿದ್ದಾರೆ. ಹಲ್ಲು ಉಜ್ಜುವುದಕ್ಕೆ ಟೂಥ್‍ಬ್ರಷ್ ಕೂಡ ಇಲ್ಲ. ಅದಕ್ಕಾಗಿ ಶುಭಾ ಪೂಂಜಾ ಗೋಗರೆದಿದ್ದಾರೆ. ಪ್ಲೀಸ್ ಟೂಥ್‍ಬ್ರಷ್ ಕಳುಹಿಸಿ, ನಾವು ಏನು ತಪ್ಪು ಮಾಡಿದ್ದೇವೆ ಯಾಕಿಷ್ಟು ಕ್ರೂರಿ ಆಗುತ್ತಿದ್ದೀರಾ? ಎಂದು ಮನೆಯ ಎಲ್ಲಾ ಕ್ಯಾಮೆರಾಗಳ ಮುಂದೆ ಹೋಗಿ ಹೋಗಿ ಹೇಳುತ್ತಿದ್ದಾರೆ.

ಪ್ಲೀಸ್ ಬಿಗ್ ಬಾಸ್ ನನ್ನ ಟೂಥ್‍ಬ್ರಷ್ ಕಳುಹಿಸಿಕೊಡಿ. ನೋಡಿ ನನ್ ಹಲ್ಲೆಲ್ಲಾ ಉದುರಿಹೋಗ್ತಿದೆ ಎಂದು ಪರಿ ಪರಿಯಾಗಿ ಶುಭಾ ಬಿಗ್‍ಬಾಸ್ ಮುಂದೆ ಬೇಡಿಕೊಂಡರು. ಕ್ಯಾಮೆರಾ ಕಂಡಲೆಲ್ಲಾ ಟೂಥ್‍ಬ್ರಷ್‍ಗಾಗಿ ಮನವಿ ಮಾಡಿಕೊಂಡರು. ಆದರೆ ಬಿಗ್ ಬಾಸ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅತ್ತ ಶಮಂತ್ ಪಾತ್ರೆ ತೊಳೆಯುವ ಬ್ರಷ್ ಅನ್ನೇ ಬಳಸಿಕೊಂಡು ಹಲ್ಲು ಉಜ್ಜುವುದಕ್ಕೆ ಶುರು ಮಾಡಿದ್ದಾರೆ. ಶುಭಾ ಕೂಡ ಅನಿವಾರ್ಯವಾಗಿ ಅದನ್ನೇ ಯೂಸ್ ಮಾಡುವುದಕ್ಕೆ ಶುರುಮಾಡಿದ್ದಾರೆ.

 ನಾನು ಎನ್ ಗೋಲ್ಡ್ ಕೇಳ್ತಾ ಇದ್ದೀನಾ ಅಥವಾ ಡೈಮಂಡ್ ಕೇಳತ್ತಾ ಇದ್ದೀನಾ ಹಲ್ಲು ಉಜ್ಜಬೇಕು ಬ್ರಷ್ ಕೊಡಿ ಬಿಗ್‍ಬಾಸ್. ನಾನು ಇನ್ನು ಏನು ಕೇಳಲ್ಲಾ ಬಿಗ್‍ಬಾಸ್. ನನಗೆ ಚಿಕನ್ ಕೂಡ ಬೇಡಾ. ನನಗೆ ಬ್ರಷ್ ಕೊಡಿ ಬಿಗ್‍ಬಾಸ್ ಎಂದು ಶುಭಾ ಕೇಳುವಾಗ ಬಿಗ್‍ಬಾಸ್ ಏನು ಮಾತನಾಡದ್ದನ್ನು ಕಂಡ ಶುಭಾ ಬೇಸರದಿಂದ ಸಪ್ಪೆಮೊರೆ ಹಾಕಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *