Connect with us

Bengaluru City

ದೊಡ್ಮನೆಯಲ್ಲಿ ಲವ್‍ಸ್ಟೋರಿ ರಿವೀಲ್ ಮಾಡಿದ ಶುಭಾ ಪೂಂಜಾ!

Published

on

ಶುಭಾ ಪೂಂಜಾಗೆ ಬಾಯ್ ಫ್ರೆಂಡ್ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದ್ರೆ ಶುಭಾ ಪೂಂಜಾ ಲವ್ ಸ್ಟೋರಿ ಆರಂಭ ಆಗಿದ್ದು ಹೇಗೆ? ಮೊದಲು ಯಾರು ಲವ್‍ನಲ್ಲಿ ಬಿದ್ದರು. ಪ್ರಪೋಸ್ ಮಾಡಿದ್ಯಾರು ಎಂದು ದೊಡ್ಮನೆಯಲ್ಲಿ ರಿವೀಲ್ ಮಾಡಿದ್ದಾರೆ.

ನಿನ್ನೆ ಕಿಚನ್ ಏರಿಯಾದ ಬಳಿ ವೈಷ್ಣವಿ, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಕುಳಿತಿರುತ್ತಾರೆ. ಈ ವೇಳೆ ಶುಭಾ ಪೂಂಜಾ ಸುಮಂತ್ ಜೊತೆ ಡೇಟ್ ಮಾಡುತ್ತಿದ್ದ ವೇಳೆ ಒಂದು ಹಾಡನ್ನು ಕಳುಹಿಸಿದ್ದೆ, ಆದ್ರೆ 3-4 ದಿನವಾದರೂ ರಿಪ್ಲೈ ಇರಲಿಲ್ಲ. 5ನೇ ದಿನ ನಾನು ನಿನಗೊಂದು ಸಾಂಗ್ ಕಳುಹಿಸಿದ್ದೆ ನೋಡಿದ್ಯಾ ಎಂದು ಕೇಳಿದೆ. ಆಗ ಹೌದು ನೋಡಿದೆ. ಅದು ಸುದೀಪ್ ಸರ್ ಸಿನಿಮಾದಲ್ವಾ ಎಂದು ಕೇಳಿದ. ಅದಕ್ಕೆ ನಾನು ಹೌದು ಮತ್ತೆ ಎಂದೇ. ಚೆನ್ನಾಗಿದೆ ಅಲ್ವಾ? ನಾನು ಒಂದು ಬಾರಿ ಕೇಳಿದ್ದೇನೆ ಅಂತ ಹೇಳಿದ. ನಾನು ಮತ್ತೆ ಎಂದೆ? ಏನು ಯೂಟ್ಯೂಬ್‍ನಿಂದ ಕಳುಹಿಸಿದ್ಯಾ ಅಷ್ಟೇ ತಾನೇ ಅಂದ. ನನಗೆ ‘ಒ ಮೈ ಗಾಡ್ ನನ್ನ ಮಗನೇ ನಾನು ಕಳುಹಿಸಿದ್ದು ರೋಮ್ಯಾನ್ಸ್’ ಎಂದು ಹೇಳಿದೆ.

ಮೊದಲು ನಾನು ಅವನಿಗೆ ಉದ್ದದ ಒಂದು ಪೇಜ್ ಮೆಸೇಜ್ ಕಳುಹಿಸುತ್ತಿದ್ದೆ. ಅವಾಗ ಒಂದು ರೀತಿ ಮಿಸ್ ಮಾಡಿಕೊಳ್ಳುತ್ತಿದ್ದೆ, ಒಂದು ರೀತಿ ನೆನಪಾಯಿತು ಅಂತ ಎಲ್ಲಾ ಮೆಸೇಜ್ ಮಾಡುತ್ತಿದ್ದೆ, ಅದಕ್ಕೆ ಅವನು ಬರೀ ಒಕೆ ಎಂದು ಹೇಳುತ್ತಿದ್ದ.

ಅವನು ಮದುವೆಗೆ ಬಂದು ಪ್ರಪೋಸ್ ಮಾಡಿದ್ದು ಎಷ್ಟು ವಿಚಿತ್ರವಾಗಿತ್ತು ಎಂದರೆ ಅವನು ಮೊದಲಿಗೆ ಏನೋನೋ, ಹೇಗೆಗೋ ಮಾತನಾಡುತ್ತಾ, ಈ ಫೀಲ್ ಎಷ್ಟು ಚೆನ್ನಾಗಿದೆ ಅಲ್ವಾ? ಎಂದು ಇನ್‍ಡೈರೆಕ್ಟ್ ಆಗಿ ನಾಳೆನು ಇದು ಇರುವುದಿಲ್ಲ ಅಂದರೆ ಹೇಗೆ? ಇದನ್ನು ಹೇಗೆ ನಾನು ಬಿಟ್ಟಿರುವುದು, ನನಗೆ ಒಂಥರಾ ಆಗುತ್ತಿದೆ. ಏನೋ ಡಮ್ ಡಮ್ ಎಂದು ಹೃದಯ ಹೊಡೆದುಕೊಳ್ಳುತ್ತಿದೆ ಎಂದು ವಾಯ್ಸ್ ನೋಟ್ ಕಳುಹಿಸಿದ್ದ. ನಾನು ಅದಕ್ಕೆ ಏನು ರಿಪ್ಲೈ ಮಾಡಿರಲಿಲ್ಲ. ಐ ಲವ್ ಯೂ ವಿಲ್ ಯೂ ಮ್ಯಾರಿ ಮೀ ಅಂತ ಹೇಳದೆ 10 ದಿನ ಹೀಗೆ ಸರ್ಕಲ್ ಹೊಡೆಯುತ್ತಿದ್ದ, ಕೊನೆಗೆ ಪ್ರಪೋಸ್ ಮಾಡಿದ್ದು, ಯಾರು ಗೊತ್ತಾ ನನ್ನ ಅಮ್ಮ. ನನಗೆ ನೀನು ಇಷ್ಟ ಆಗಿದ್ಯಾ ನಮ್ಮನೆ ಅಳಿಯ ಆಗುತ್ತೀಯಾ ಅಂತ ಅವನನ್ನು ಕೇಳಿದ್ರು ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *