Connect with us

Cinema

ಸುಶಾಂತ್ ಇಬ್ಬರು ಸೋದರಿಯರು ಡ್ರಗ್ಸ್ ಪಾರ್ಟಿಯಲ್ಲಿ ಭಾಗಿ

Published

on

-ರಿಯಾ ಮ್ಯಾನೇಜರ್ ಶೃತಿ ಪರ ವಕೀಲರಿಂದ ಆರೋಪ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸೋದರಿಯರಿಬ್ಬರು ಡ್ರಗ್ಸ್ ತೆಗದುಕೊಳ್ಳುತ್ತಿದ್ದರು ಎಂದು ನಟಿ ರಿಯಾ ಚಕ್ರವರ್ತಿ ಮ್ಯಾನೇಜರ್ ಶೃತಿ ಮೋದಿ ಪರ ವಕೀಲರಾದ ಅಶೋಕ್ ಸರವಾಗಿ ಆರೋಪಿಸಿದ್ದಾರೆ.

ಸುಶಾಂತ್ ನಿಧನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಿಯಾ ಮ್ಯಾನೇಜರ್ ಶೃತಿ ಈಗಾಗಲೇ ಮುಂಬೈ ಪೊಲೀಸರು ಮತ್ತು ಇಡಿ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಸದಾ ರಿಯಾ ಜೊತೆಯಲ್ಲಿಯೇ ಶೃತಿ ಇರುತ್ತಿದ್ದರು. ಈ ಹಿನ್ನೆಲೆ ಶೃತಿ ಅವರನ್ನ ಸಹ ವಿಚಾರಣೆಗೆ ಒಳಪಡಿಸಲಾಗಿತ್ತು. ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಕೇಸ್- ಸ್ಪೋಟಕ ಆಡಿಯೋ ಕ್ಲಿಪ್ ಔಟ್

ಒಂದು ವಾಟ್ಸಪ್ ಗ್ರೂಪ್: ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ವಕೀಲ ಆಶೋಕ್, ಒಂದು ವಾಟ್ಸಪ್ ಗ್ರೂಪ್ ನಲ್ಲಿ ಡ್ರಗ್ಸ್ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಆ ಗ್ರೂಪ್ ನಲ್ಲಿದ್ದ ಎಲ್ಲ ಸದಸ್ಯರು ಡ್ರಗ್ಸ್ ಸೇವಿಸುತ್ತಿದ್ದರು. ಈ ಗ್ರೂಪ್ ನಲ್ಲಿ ಸುಶಾಂತ್, ರಿಯಾ, ಸೋಹೆಲ್ (ಡ್ರೈವರ್ ಮತ್ತು ಬಾಡಿಗಾರ್ಡ್), ಗೆಳೆಯ ಆಯುಷ್ ಶರ್ಮಾ, ಆನಂದಿ ಸೇರಿದಂತೆ ಹಲವರಿದ್ದರು. ಆನಂದಿ ಆಗಾಗ್ಗೆ ಸುಶಾಂತ್ ಮನೆಗೆ ಬಂದು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಳು. ಶೃತಿಗೂ ಈ ಗ್ರೂಪ್ ಸದಸ್ಯರು ಡ್ರಗ್ಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಆದ್ರೆ ಶೃತಿ ಒತ್ತಡ ಹಾಕಿದ್ರೆ ಕೆಲಸ ಬಿಡೋದಾಗಿ ಹೇಳಿದ್ದರು. ಸುಶಾಂತ್ ಸಹ ಆ ಗ್ರೂಪ್ ನಲ್ಲಿದ್ದರಿಂದ ಅವರಿಗೂ ಡ್ರಗ್ಸ್ ವಿಷಯದ ಬಗ್ಗೆ ಮಾಹಿತಿ ಇತ್ತು. ಸುಶಾಂತ್ ಸಹ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಿಯಾ ಚಕ್ರವರ್ತಿ ಡ್ರಗ್ಸ್ ಕೇಸ್- ಎನ್‍ಸಿಬಿಗೆ ಮಹತ್ವದ ಸುಳಿವು

ಸುಶಾಂತ್ ಸೋದರಿಯರಿಬ್ಬರು ಸಹ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು. ಮದ್ಯ ಸೇವನೆ ಜೊತೆ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು. ಮುಂಬೈನಲ್ಲಿರುವ ಸುಶಾಂತ್ ಸೋದರಿ ಮೀತು ಇಂತಹ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಇದು ಸುಶಾಂತ್ ಕುಟುಂಬದವರಿಗೂ ಗೊತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ: ಸುಶಾಂತ್ ಕುತ್ತಿಗೆಗೆ ಸೂಜಿಯಿಂದ ಚುಚ್ಚಲಾಗಿತ್ತು: ಆಸ್ಪತ್ರೆಯ ಸಿಬ್ಬಂದಿ

Click to comment

Leave a Reply

Your email address will not be published. Required fields are marked *