ನಾನು ಸಿಕ್ಕಾಪಟ್ಟೆ ಕುಡಿಯುತ್ತಿದ್ದೆ, ವಿಸ್ಕಿ ವ್ಯಸನಿಯಾಗಿದ್ದೆ: ಶ್ರುತಿ ಹಾಸನ್

ಚೆನ್ನೈ: ಕಾಲಿವುಡ್ ನಟಿ ಶ್ರುತಿ ಹಾಸನ್ ಅವರು ಎರಡು ವರ್ಷ ಸಿಕ್ಕಾಪಟ್ಟೆ ಕುಡಿಯುತ್ತಿದ್ದೆ ಎಂಬ ಹೇಳಿಕೆ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಶ್ರುತಿ ಹಾಸನ್ ಅವರಿಗೆ ಆರೋಗ್ಯ ಸರಿಯಿಲ್ಲ, ಹೀಗಾಗಿ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಈ ಬಗ್ಗೆ ಮಾತನಾಡಿದ ಶ್ರುತಿ, “ನಾನು ಸಿಕ್ಕಾಪಟ್ಟೆ ಕುಡಿಯುತ್ತಿದ್ದೆ. ಹೀಗಾಗಿ ಆರೋಗ್ಯ ಕೈಕೊಟ್ಟಿತ್ತು” ಎಂದು ಸ್ಪಷ್ಟನೆ ನೀಡಿದ್ದಾರೆ. ಶ್ರುತಿ ಅವರ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಟಾಲಿವುಡ್ ನಟಿ ಮಂಚು ಲಕ್ಷ್ಮಿ ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರುತಿ ಭಾಗವಹಿಸಿ, “ನಾನು ವಿಸ್ಕಿ ಬಾಟಲಿಗೆ ವ್ಯಸನಿಯಾಗಿದ್ದೆ. ಎರಡು ವರ್ಷ ಸಿಕ್ಕಾಪಟ್ಟೆ ಕುಡಿಯುತ್ತಿದ್ದೆ. ಹೀಗಾಗಿ ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ಆದರೆ ಈಗ ಎಲ್ಲವನ್ನು ನಿಲ್ಲಿಸಲು ನಿರ್ಧರಿಸಿದ್ದೇನೆ. ಜೊತೆಗೆ ನನ್ನ ಜೀವನದಲ್ಲಿ ಹೊಸ ಬದಲಾವಣೆಯಾಗಿದೆ” ಎಂದು ಹೇಳಿದ್ದಾರೆ.

ನಾನು ಅನಾರೋಗ್ಯದಿಂದ ಬಳಲುತ್ತಿದ್ದದ್ದು ಯಾರಿಗೂ ತಿಳಿದಿಲ್ಲ. ಇದು ನನ್ನ ವೈಯಕ್ತಿಕ ವಿಷಯವಾಗಿದ್ದರಿಂದ ಎಂದು ನನ್ನ ಸ್ನೇಹಿತರಿಗೂ ಹೇಳಿಲ್ಲ. ಕೊನೆಗೆ ನಾನು ಚಿಕಿತ್ಸೆಗೆ ಪಡೆದು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಯಿತು. ಇದರಿಂದ ನಾನು ಸಿನಿಮಾಗಳಿಂದ ದೂರವಾದೆ. ಸದ್ಯಕ್ಕೆ ವೃತ್ತಿ ಬದುಕಿನ ಕಡೆಗೆ ದೃಷ್ಟಿ ಹರಿಸಿದ್ದೇನೆ ಎಂದು ಹೇಳಿದ್ದಾರೆ

ಶ್ರುತಿ ಹಾಸನ್ ಕೊನೆಯದಾಗಿ `ಕಾಟಮರಾಯುಡು’ ಸಿನಿಮಾದಲ್ಲಿ ನಟಿಸಿದ್ದರು. ಈಗ ನಟ ರವಿತೇಜ ಸಿನಿಮಾ ಮೂಲಕ ರೀ-ಎಂಟ್ರಿ ಕೊಡುತ್ತಿದ್ದಾರೆ. ಇದೇ ವೇಳೆ ತಮ್ಮ ಗೆಳೆಯ ಮೈಕೇಲ್ ಕೋರ್ಸೆಲ್ ಜೊತೆಗಿನ ಸಂಬಂಧ ಮುರಿದುಬಿದ್ದ ಬಗ್ಗೆಯೂ ಮಾತನಾಡಿದ್ದಾರೆ.

Leave a Reply

Your email address will not be published. Required fields are marked *