Advertisements

ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್

ಹುಭಾಷಾ ನಟಿ ಶ್ರಿಯಾ ಸರನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾಗಳಿಗೆ ಬ್ರೇಕ್ ತೆಗೆದುಕೊಂಡಿದ್ದು, ವೈಯಕ್ತಿಕ ಜೀವನದಲ್ಲಿ ಸಂತೋಷದಿಂದ ಇದ್ದಾರೆ. ಈಗ ಈ ಸಂತೋಷ ಹೆಚ್ಚಿಸಲು ಶ್ರಿಯಾ ಮನೆಗೆ ಹೊಸ ಅತಿಥಿ ಬರುತ್ತಿದ್ದಾರೆ. ಈ ಕುರಿತು ಶ್ರಿಯಾ ಸರನ್ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

Advertisements

ರಷ್ಯಾದ ಜನಪ್ರಿಯ ಟೆನಿಸ್ ಆಟಗಾರ ಮತ್ತು ವಾಣಿಜ್ಯೋದ್ಯಮಿ ಆಂಡ್ರೇ ಕೊಸ್ಚೆವ್ ಅವರನ್ನು 2018ರಲ್ಲಿ ಶ್ರಿಯಾ ಕೈಹಿಡಿದಿದ್ದಾರೆ. ಮದುವೆಯಾದ ನಂತರ ವಿದೇಶದಲ್ಲಿ ನೆಲೆಸಿರುವ ಈ ನಟಿ ಸಿನಿಮಾರಂಗದಲ್ಲಿ ಕಾಣಿಸಕೊಂಡಿದ್ದು ಕಡಿಮೆ. ಆದರೆ ಈ ನಟಿ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದು, ತಮ್ಮ ಅಪ್ಡೇಟ್ ಬಗ್ಗೆ ತಿಳಿಸುತ್ತಿರುತ್ತಾರೆ. ಅದೇ ರೀತಿ ಈ ನಟಿ ಟ್ವಿಟ್ಟ‌ರ್‌ನಲ್ಲಿ ನಮ್ಮ ಬೇಬಿ ಬಂಪ್‍ನ್ನು ಮೊದಲ ಬಾರಿಗೆ ಶೇರ್ ಮಾಡಿಕೊಂಡಿದ್ದು, ಹ್ಯಾಪಿನೆಸ್ ಎಂದು ಬರೆದುಕೊಂಡಿದ್ದಾರೆ.

Advertisements

ಫೋಟೋದಲ್ಲಿ ಫುಲ್ ಖುಷಿಯಲ್ಲಿರುವ ಈ ನಟಿ ಬೇಬಿ ಬಂಪ್‍ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಈ ಹಿಂದೆ ಶ್ರಿಯಾ ತಮ್ಮ ಮೊದಲನೇ ಮಗು ಜನಿಸಿರುವುದನ್ನು 2 ವರ್ಷಗಳ ಬಳಿಕ ಅಭಿಮಾನಿಗಳಿ ತಿಳಿಸಿದ್ದರು.

Advertisements

ಶ್ರಿಯಾ ಟಾಲಿವುಡ್, ಬಾಲಿವುಡ್ ಮತ್ತು ಕನ್ನಡದ ಲವ್ಲಿ ಸ್ಟಾರ್ ಪ್ರೇಮ್ ಜೊತೆ ‘ಚಂದ್ರ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದಾರೆ ಈ ನಟಿ.

Advertisements
Exit mobile version