Connect with us

Bollywood

ಡಾರ್ಲಿಂಗ್ ಪ್ರಭಾಸ್‍ಗೆ ಸ್ವಾಗತ ಕೋರಿದ ಆಶಿಕಿ ಚೆಲುವೆ

Published

on

ಮುಂಬೈ: ಟಾಲಿವುಡ್ ಬಾಹುಬಲಿ ಪ್ರಭಾಸ್ ಇನಸ್ಟಾಗ್ರಾಂಗೆ ಎಂಟ್ರಿ ನೀಡಿದ 10 ದಿನಕ್ಕೆ ನಟಿ ಶ್ರದ್ಧಾ ಕಪೂರ್ ವಿಶೇಷ ರೀತಿಯಲ್ಲಿ ಸ್ವಾಗತಿಸಿದ್ದಾರೆ.

ಟಾಲಿವುಡ್ ಬಹು ನಿರೀಕ್ಷಿತ ಸಾಹೋ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಮತ್ತು ಪ್ರಭಾಸ್ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಫೇಸ್‍ಬುಕ್ ನಲ್ಲಿ ಆ್ಯಕ್ಟೀವ್ ಆಗಿದ್ದ ಪ್ರಭಾಸ್ ಇತ್ತೀಚೆಗೆ ಇನಸ್ಟಾಗ್ರಾಂ ಅಂಗಳಕ್ಕೆ ಕಾಲಿಟ್ಟಿದ್ದರು. ಕೇವಲ 10 ದಿನದಲ್ಲಿ 12 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಆದ್ರೆ ಇದುವರೆಗೂ ಪ್ರಭಾಸ್ ಇನ್‍ಸ್ಟಾದಲ್ಲಿ ಯಾರನ್ನೂ ಫಾಲೋ ಮಾಡಿಲ್ಲ.

ನಾನು ಇದೂವರೆಗೂ ಭೇಟಿಯಾದ ಒಳ್ಳೆಯ ವ್ಯಕ್ತಿಗಳಲ್ಲೊಬ್ಬರು ಪ್ರಭಾಸ್. ನಿಜಕ್ಕೂ ಪ್ರಭಾಸ್ ಎಲ್ಲರ ಡಾರ್ಲಿಂಗ್. ಇನ್‍ಸ್ಟಾ ಅಂಗಳಕ್ಕೆ ಸ್ವಾಗತ ಎಂದು ಬರೆದುಕೊಂಡು ಬಾಹುಬಲಿ ಸಿನಿಮಾದ ಫೋಟೋವನ್ನು ಶ್ರದ್ಧಾ ಕಪೂರ್ ಹಾಕಿಕೊಂಡಿದ್ದಾರೆ.

ಏಪ್ರಿಲ್ 28 ಅಂದರೆ ನಾಳೆಗೆ ಬಾಹುಬಲಿ-ದಿ ಕನ್‍ಕ್ಲೂಸನ್ ಬಿಡುಗಡೆಯಾಗಿ ಎರಡು ವರ್ಷ ಕಳೆಯಲಿದೆ. ಚಿತ್ರತಂಡ ಭಾನುವಾರ ಎರಡನೇ ವರ್ಷದ ಆಚರಣೆಯನ್ನು ಮಾಡಲಿದೆ. ಈಗಾಗಲೇ ಶ್ರದ್ಧಾ ಕಪೂರ್, ತಮನ್ನಾ ಭಾಟಿಯಾ, ಕತ್ರಿನಾ ಕೈಫ್, ನೀಲ್ ನಿತೀಶ್ ಮುಖೇಶ್ ಸೇರಿದಂತೆ 12 ತಾರೆಯರು ಪ್ರಭಾಸ್ ಅವರನ್ನು ಫಾಲೋ ಮಾಡುತ್ತಿದ್ದಾರೆ.