Connect with us

Crime

45 ವರ್ಷದ ಮಗನಿಂದ ನಿರಂತರ ಅತ್ಯಾಚಾರ- 70ರ ತಾಯಿಯಿಂದ ಪೊಲೀಸರಿಗೆ ದೂರು

Published

on

ಚಂಡೀಘಢ: 70 ವರ್ಷದ ಮಹಿಳೆಯ ಮೇಲೆ 45 ವರ್ಷ ವಯಸ್ಸಿನ ತನ್ನ ಮಗನೇ ನಿರಂತರ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ.

ಪಂಜಾಬ್ ರಾಜ್ಯದ ಬಾತಲಾ ಗ್ರಾಮದ ನಿವಾಸಿಯಾದ ವೃದ್ಧೆ ಈ ಬಗ್ಗೆ ಶುಕ್ರವಾರದಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಗೆ ನಾಲ್ಕು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳಿದ್ದು, ಬ್ರಹ್ಮಚಾರಿಯಾಗಿರೋ ಮಗನೊಂದಿಗೆ ವಾಸವಿದ್ದೇನೆ. ಉಳಿದ ಮಕ್ಕಳಿಗೆ ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ ಎಂದು ವೃದ್ಧ ತಾಯಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕುಡಿತದ ಚಟಕ್ಕೆ ದಾಸನಾದ ಮಗ ತನ್ನ ತಾಯಿಯ ಮೇಲೆ ನಿರಂತರವಾಗಿ ಎರಡು ವರ್ಷಗಳಿಂದ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಷಯ ಬೆಳಕಿಗೆ ಬಂದರೆ ಕುಟುಂಬದ ಮರ್ಯಾದೆ ಹಾಳಾಗುತ್ತದೆ ಎಂದು ಸಂತ್ರಸ್ತ ತಾಯಿ ಎಲ್ಲಿಯೂ ಈ ವಿಷಯವನ್ನ ಹೇಳಿಕೊಂಡಿರಲಿಲ್ಲ ಎಂದು ಅದಿಕಾರಿಗಳು ಸುದ್ಧಿಸಂಸ್ಥೆಗೆ ತಿಳಿಸಿದ್ದಾರೆ.

ತನ್ನ ಮೇಲಾಗುತ್ತಿರುವ ಅತ್ಯಾಚರದ ಬಗ್ಗೆ ತಾಯಿ ತನ್ನ ಹೆಣ್ಣು ಮಕ್ಕಳಲ್ಲಿ ಒಬ್ಬರಿಗೆ ಹೇಳಿಕೊಂಡಿದ್ದರು. ವಿಷಯ ತಿಳಿದ ನಂತರ ಕುಟುಂಬದವರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದರು.

ತಾಯಿಯ ದೂರಿನನ್ವಯ ಮಗನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸದ್ಯ ಆರೋಪಿ ಮಗ ಪಾರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.