Connect with us

Bengaluru City

ಸಜ್ಜನಿಕೆಯೇ ಮೈವೆತ್ತಿದಂತಿದ್ದ ಧರಂಸಿಂಗ್ ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾಗಿದ್ರು: ಸಿಎಂ

Published

on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಟ್ವಟ್ಟರ್‍ನಲ್ಲಿ ಸಂತಾಪ ಸೂಚಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನ ಹಿರಿಯ ಮುಖಂಡ ಶ್ರೀ ಧರಂಸಿಂಗ್ ಅವರು ನಮ್ಮನ್ನಗಲಿದ ಸುದ್ದಿ ತೀವ್ರ ಆಘಾತ ತಂದಿದೆ. ಅವರ ಕುಟುಂಬ ಬಂಧುವರ್ಗಕ್ಕೆ ತೀವ್ರ ಸಂತಾಪಗಳು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸಜ್ಜನಿಕೆಯೇ ಮೈವೆತ್ತಿದಂತಿದ್ದ ಎನ್.ಧರಂಸಿಂಗ್ ಅವರು ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾಗಿದ್ದರು. ಸುಮಾರು ನಾಲ್ಕೂವರೆ ದಶಕದ ರಾಜಕೀಯ ಜೀವನದಲ್ಲಿ ಅಜಾತಶತ್ರುವಾಗಿದ್ದರು. ರಾಜಕೀಯ ಜೀವನದುದ್ದಕ್ಕೂ ಧರಂಸಿಂಗ್ ಅವರು ಪ್ರತಿನಿಧಿಸಿದ ಮೌಲ್ಯಗಳು ಅನುಕರಣೀಯ, ಅಪ್ಪಟ ಜನಾನುರಾಗಿಯಾಗಿದ್ದ ಅವರಲ್ಲಿ ಎಲ್ಲ ಜನಾಂಗದವರೂ ಅಪ್ರತಿಮ ನಾಯಕನನ್ನು ಕಂಡಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅಜಾತಶತ್ರು, ಅಪ್ಪಟ ಜನಾನುರಾಗಿ ನಾಯಕರಾದ ಶ್ರೀ ಎನ್. ಧರಂಸಿಂಗ್ ಅವರ ಅಗಲಿಕೆಯಿಂದ ನಾಡಿನ ಧೀಮಂತ ರಾಜಕಾರಣದ ಪರಂಪರೆ ಸೊರಗಿದೆ. ಶ್ರೀಯುತರಿಗೆ ನಾಡಿನ ಶೋಕತಪ್ತ ನಮನಗಳು ಎಂದು ಸಂತಾಪ ಸೂಚಿಸಿದ್ದಾರೆ.