Connect with us

Bengaluru City

ಆಪ್ತಮಿತ್ರನ ನಿಧನಕ್ಕೆ ಕಣ್ಣೀರು ಹಾಕಿದ ಮಲ್ಲಿಕಾರ್ಜುನ ಖರ್ಗೆ:ವಿಡಿಯೋ

Published

on

ಬೆಂಗಳೂರು: ನನಗೆ ಅಣ್ಣನನ್ನು ಕಳೆದುಕೊಂಡಷ್ಟು ನೋವಾಗಿದೆ. ನಾನೇ ಎಷ್ಟೋ ಸಾರಿ ಅವರ ಜೊತೆ ಜಗಳ ಮಾಡಿಕೊಂಡ್ರೂ, ಮರುದಿನ ಅವರೇ ನನಗೆ ಫೋನ್ ಮಾಡಿ ಸಮಾಧಾನ ಮಾಡುತ್ತಿದ್ದರು ಎಂದು ಗೆಳಯನನ್ನ ನೆನೆದು ಕಾಂಗ್ರೆಸ್‍ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕಣ್ಣೀರು ಹಾಕಿದ್ದಾರೆ.

ನಮ್ಮದು ಸುದೀರ್ಘ 50 ವರ್ಷಗಳ ಸ್ನೇಹ. ರಾಜಕಾರಣದ ಹೊರತಾಗಿಯೂ ವೈಯಕ್ತಿಕವಾಗಿ ನಾವಿಬ್ಬರೂ ಒಳ್ಳೆಯ ಗೆಳೆಯರು. ಇತ್ತೀಚಿಗೆ ನನ್ನ ಹುಟ್ಟು ಹಬ್ಬದ ದಿನ ಶುಭಾಶಯ ಕೋರಲು ಮನೆಗೆ ಬರ್ತೀನಿ ಅಂದಿದ್ರು. ನಿಮ್ಮ ಆರೋಗ್ಯ ಸರಿಯಿಲ್ಲ, ಬರಬೇಡಿ ಎಂದು ಹೇಳಿದ್ರೂ ಮನೆಗೆ ಬಂದು ಶುಭಾಶಯ ಹೇಳೀದ್ದರು. ಈಗ ನಾನೇ ಮನೆಗೆ ಬಾ ಅಂದ್ರೂ ಅವರು ಬರಲ್ಲ ಎಂದು ದುಃಖ ಭರಿತರಾಗಿ ಹೇಳಿದರು.

ಧರಂಸಿಂಗ್ ಅವರು ಶಾಸಕರಾಗಿ, ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ರಾಜ್ಯಕ್ಕೆ ಅಮೋಘವಾದ ಸೇವೆಯನ್ನು ಸಲ್ಲಿಸಿದ್ದಾರೆ. ನಾವಿಬ್ಬರೂ ದೆಹಲಿಗೆ ಹೋದರೂ ಒಟ್ಟಾಗಿ ಹೋಗುತ್ತಿದ್ವಿ. ನಾವಿಬ್ಬರೂ ಒಟ್ಟಾಗಿ ಇರೋದನ್ನು ನೋಡಿದ ಉಳಿದ ನಾಯಕರು ನಮ್ಮನ್ನ ಚೇಡಿಸುತ್ತಿದ್ದರು ಎಂದು ತಮ್ಮ ರಾಜಕೀಯ ಜೀವನವನ್ನು ಖರ್ಗೆ ನೆನಪು ಮಾಡಿಕೊಂಡರು.