ಚಾಮುಂಡಿ ದರ್ಶನ ಮುಗಿಸಿ ಮೈಸೂರಿನಲ್ಲಿ ಉಪಾಧ್ಯಕ್ಷನನ್ನು ಭೇಟಿಯಾದ ಶಿವರಾಜ್ ಕುಮಾರ್

Advertisements

ಚಿಕ್ಕಣ್ಣ ಇದೇ ಮೊದಲ ಬಾರಿಗೆ ಹೀರೋ ಆಗಿ ನಟಿಸುತ್ತಿರುವ ಉಪಾಧ್ಯಕ್ಷ ಸಿನಿಮಾ ಶೂಟಿಂಗ್ ಮೈಸೂರು ಸುತ್ತಮುತ್ತ ನಡೆಯುತ್ತಿದೆ. ಈ ಸಂದರ್ಭದಲ್ಲಿ ಶೂಟಿಂಗ್ ಸ್ಥಳಕ್ಕೆ ನಟ ಶಿವರಾಜ್ ಕುಮಾರ್ ಭೇಟಿ ಮಾಡಿ ಕೆಲ ಹೊತ್ತು ಕಳೆದಿದ್ದಾರೆ. ಬೈರಾಗಿ ಸಿನಿಮಾದ ಪ್ರಚಾರಕ್ಕಾಗಿ ಇಂದು ಮೈಸೂರು ಮತ್ತು ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವ ಶಿವರಾಜ್ ಕುಮಾರ್, ಈ ಸಂದರ್ಭದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ  ದೇವಿಯ ದರ್ಶನ ಕೂಡ ಪಡೆದಿದ್ದಾರೆ.

Advertisements

ಚಾಮುಂಡಿ ದರ್ಶನದ ನಂತರ ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ಸ್ಥಳಕ್ಕೆ ತೆರಳಿದ ಶಿವರಾಜ್ ಕುಮಾರ್, ಕೆಲ ಹೊತ್ತು ಸಿನಿಮಾ ತಂಡದೊಂದಿಗೆ ಕಳೆದರು. ಈ ಸಂದರ್ಭದಲ್ಲಿ ಡಾಲಿ ಧನಂಜಯ್ ಕೂಡ ಶಿವಣ್ಣನಿಗೆ ಸಾಥ್ ನೀಡಿದರು. ಶೂಟಿಂಗ್ ಸ್ಥಳದಲ್ಲಿ ಚಿಕ್ಕಣ್ಣ, ರವಿಶಂಕರ್ ಸೇರಿದಂತೆ ಹಲವು ಕಲಾವಿದರು ಹಾಜರಿದ್ದರು. ಉಪಾಧ್ಯಕ್ಷ ಸಿನಿಮಾಗೆ ಒಳ್ಳೆಯದಾಗಲಿ ಎಂದು ಹಾರೈಸಿ, ಬೈರಾಗಿ ಟೀಮ್ ಜೊತೆ ಶಿವರಾಜ್ ಕುಮಾರ್ ಚಾಮರಾಜನಗರದತ್ತ ಹೊರಟರು. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

Advertisements

ಇಂದು ಚಾಮರಾಜನಗರದಲ್ಲಿ ಬೈರಾಗಿ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಆಯೋಜನೆಯಾಗಿದೆ. ಆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ಡಾಲಿ, ಪೃಥ್ವಿ ಅಂಬರ್ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಲಿದ್ದಾರೆ. ಅಲ್ಲದೇ, ಸಿನಿಮಾ ರಂಗದ ಅನೇಕ ಗಣ್ಯರು ಕೂಡ ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಇಂದು ಸಂಜೆ ಪ್ರಿ ರಿಲೀಸ್ ಇವೆಂಟ್ ಚಾಮರಾಜನಗರದಲ್ಲಿ ನಡೆಯಲಿದೆ.

Live Tv

Advertisements
Advertisements
Exit mobile version