Advertisements

ಬಸವರಾಜ್ ಬೊಮ್ಮಾಯಿ 12 ವರ್ಷ ಸಿಎಂ ಆಗಿರ್ತಾರೆ: ಶಿವನಗೌಡ ನಾಯಕ್

ರಾಯಚೂರು: ಬಸವರಾಜ್ ಬೊಮ್ಮಾಯಿ ಅವರು ಮುಂದಿನ 12 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಹೇಳಿದ್ದಾರೆ.

Advertisements

ರಾಯಚೂರಿನಲ್ಲಿ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಈಗ ಸಿಎಂ ಆಗಿದ್ದಾರೆ, 2023ರ ಚುನಾವಣೆಯೂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತದೆ. 125 ಸೀಟ್ ಗಳನ್ನು ಸಹ ನಾವು ಗೆಲ್ಲುತ್ತೇವೆ. ಮತ್ತೆ ಬೊಮ್ಮಾಯಿ ಅವರನ್ನು ಸಿಎಂ ಮಾಡುತ್ತೇವೆ. ಶಾಸಕ ಕೆ.ಶಿವನಗೌಡ ನಾಯಕ್ 2023 ಮತ್ತು 2028ರ ಮುಖ್ಯಮಂತ್ರಿಯೂ ಬೊಮ್ಮಾಯಿ ಅಂತ ಹೇಳಿದ್ದಾರೆ.

Advertisements

ಇದೇ ವೇಳೆ ರಾಯಚೂರು ಕೊಪ್ಪಳ ಕ್ಷೇತ್ರ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬೇರೆ ಜಿಲ್ಲೆಯವರು ಅನ್ನೋ ಬಗ್ಗೆ ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಏನಾದರೂ ಬುದ್ಧಿ ಇದೆಯಾ? ಕಾಂಗ್ರೆಸ್‍ನವರಿಗೆ ಜ್ಞಾನವೇ ಇಲ್ಲ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ದೆಹಲಿ ವರಿಷ್ಠರು ಇದ್ದಾರೆ ಅಂತ ನಾನು ಜೀವಂತ ಇದ್ದೀನಿ: ರಮೇಶ್ ಜಾರಕಿಹೊಳಿ

ರಾಹುಲ್ ಗಾಂಧಿ ಕೇರಳದಲ್ಲಿ ನಿಂತು ಚುನಾವಣೆ ಗೆದ್ದಿದ್ದು ಅದು ಬೇರೆ ರಾಜ್ಯ ಅಲ್ವಾ? ಕಾಂಗ್ರೆಸ್ ನವರು 100 ತಪ್ಪು ಮಾಡಿ ಬೇರೆಯವರಿಗೆ ಬೆಟ್ಟು ಮಾಡಿ ತೋರಿಸುತ್ತಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕೋವಿಡ್ ಬಂತು, ಪ್ರವಾಹ ಬಂತು. ಮಹಾರಾಷ್ಟ್ರದಲ್ಲಿ ಶಿಕ್ಷಕರಿಗೆ ಸಂಬಳ ನೀಡಲು ಆಗಿಲ್ಲ. ಸರ್ಕಾರ ನಡೆಸುವವರಿಗೆ ಹಣಕಾಸಿನ ಸಂಕಷ್ಟದ ಬಗ್ಗೆ ಗೊತ್ತಿದೆ. ವಿರೋಧ ಪಕ್ಷದವರಿಗೆ ಬಾಯಿ ಇದೆ ಅಂತ ಏನೋನೋ ಮಾತನಾಡುತ್ತಿದ್ದಾರೆ. ನಿಜವಾದ ರಾಜಕಾರಣಿಗಳು ವಸ್ತುಸ್ಥಿತಿ ಅವಲೋಕನ ಮಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ವರಿಷ್ಠರ ಸಲಹೆ ಮೇರೆಗೆ ನಿರ್ಧಾರ: ಬೊಮ್ಮಾಯಿ

Advertisements

ಇನ್ನೂ ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಭವಿಷ್ಯ ನುಡಿದ ಕೆ. ಶಿವನಗೌಡ ನಾಯಕ್ 20 ಕ್ಷೇತ್ರದಲ್ಲಿ ನಾವು ಸ್ಪರ್ಧೆ ಮಾಡಿದ್ದೇವೆ. 17-18 ಸ್ಥಾನದಲ್ಲಿ ನಾವು ಗೆಲ್ಲಬಹುದು. 20ಕ್ಕೆ 20 ಸ್ಥಾನ ಗೆದ್ದರೂ ನಾವು ಅಚ್ಚರಿಪಡುವಂತಿಲ್ಲ. 18ಸ್ಥಾನ ಮಾತ್ರ ನಾವು ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.

Advertisements
Exit mobile version