Bollywood
ಮಲೆನಾಡಿನ ತಪ್ಪಲಿನಲ್ಲಿ ಜಾಕ್ವಲಿನ್ ಫೆರ್ನಾಂಡಿಸ್ ವೀಕೆಂಡ್ ಮಸ್ತಿ

ಶಿವಮೊಗ್ಗ: ಬಾಲಿವುಡ್ ನಟಿ ಜಾಕ್ವಲಿನ್ ಫೆರ್ನಾಂಡಿಸ್ ಗೆಳತಿ ಸಾಶಾ ಜೈರಾಮ್ ಜೊತೆ ಶಿವಮೊಗ್ಗದಲ್ಲಿ ಎರಡು ದಿನಗಳ ಕಾಲ ವೀಕೆಂಡ್ ಮಸ್ತಿ ಮಾಡಿದ್ದಾರೆ.
ಶಿವಮೊಗ್ಗದ ಕಿಮ್ಮನೆ ಗಾಲ್ಫ್ ರೆಸಾರ್ಟ್ನಲ್ಲಿ ಗಾಲ್ಫ್ ಆಡುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕವಾಗಿ ಜಾಕ್ವಲಿನ್ ಫೆರ್ನಾಂಡಿಸ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
View this post on Instagram
ಜಾಕ್ವಲಿನ್ ಫೆರ್ನಾಂಡಿಸ್ ಶೂಟಿಂಗ್ಗಾಗಿ ಶಿವಮೊಗ್ಗಕ್ಕೆ ಬಂದಿದ್ದಾರಾ ಎಂಬ ಅನುಮಾನ ಇತ್ತು. ಆದರೆ ಇದು ಖಾಸಗಿ ಭೇಟಿ ಎಂದು ತಿಳಿದು ಬಂದಿದೆ. ಜಾಕ್ವಲಿನ್ ತಂಗಿದ್ದ ರೆಸಾರ್ಟ್ ಉದ್ಯಮಿ ಕಿಮ್ಮನೆ ಜಯರಾಮ್ಗೆ ಸೇರಿದ್ದಾಗಿದೆ. ಜಯರಾಮ್ ಪುತ್ರಿ ಸಾಶಾ ಲಂಡನ್ನಲ್ಲಿ ಫ್ಯಾಶನ್ ಡಿಸೈನಿಂಗ್ ಕಲಿತು ಇದೀಗ ಮುಂಬೈನಲ್ಲಿದ್ದಾರೆ. ಹೀಗಾಗಿ ಜಾಕ್ವಲಿನ್ ಅವರಿಗೆ ಸಾಶಾ ಪರಿಚಯವಿದೆ ಮತ್ತು ಇವರು ಉತ್ತಮ ಸ್ನೇಹಿತರಾಗಿದ್ದಾರೆ.
View this post on Instagram
ಸಾಶಾ ಜೊತೆಯಲ್ಲಿ ಶಿವಮೊಗ್ಗಕ್ಕೆ ಬಂದಿಳಿದಿರುವ ಜಾಕ್ವಲಿನ್ ಫೆರ್ನಾಂಡಿಸ್ 2 ದಿನಗಳ ಕಾಲ ಗೆಳತಿ ಜೊತೆಯಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಶಿವಮೊಗ್ಗ ಸುತ್ತಮುತ್ತಲಿನ ಪ್ರಕೃತಿಯ ಸೌಂದರ್ಯವನ್ನು ತಮ್ಮ ಕ್ಯಾಮೆರದಲ್ಲಿ ಸೆರೆಹಿಡಿದಿದ್ದಾರೆ. ಒಟ್ಟಾರೆಯಾಗಿ ಜಾಕ್ವಲಿನ್ ಫೆರ್ನಾಂಡಿಸ್ ವೀಕೆಂಡ್ನನ್ನು ಮಲೆನಾಡಿನ ತಪ್ಪಲಿನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.
