Connect with us

Districts

ಅಕ್ಕಸಾಲಿಗನ ಕೈಯಲ್ಲಿ ಅರಳಿತು ಅಕ್ಕಿ ಕಾಳಿಗಿಂತ ಚಿಕ್ಕದಾದ ಗೋಲ್ಡ್ ಮೋದಿ ಕಲಾಕೃತಿ

Published

on

ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಕ್ಕಸಾಲಿಗರೊಬ್ಬರು ಅಕ್ಕಿಕಾಳಿಗಿಂತ ಚಿಕ್ಕದಾದ ಚಿನ್ನದ ಮೋದಿ ಕಲಾಕೃತಿಯನ್ನು ರಚನೆ ಮಾಡಿದ್ದಾರೆ.

ಲಾಕ್‍ಡೌನ್‍ನಲ್ಲಿ ಸಮಯ ಮಾಡಿಕೊಂಡ ಅಕ್ಕಸಾಲಿಗರೊಬ್ಬರು, ಚಿನ್ನದಲ್ಲಿ ತನ್ನೊಳಗಿನ ಕಲಾಕೌಶಲ್ಯವನ್ನು ಅರಳಿಸಿದ್ದಾರೆ. ಗೋಲ್ಡ್‍ನಲ್ಲಿ ಮೋದಿ ಅರಳಿಸಿ, ಮನೆಮಾತಾಗಿದ್ದಾರೆ. ಅಂದಹಾಗೆ ಈ ಕಲಾಕೃತಿಗಳನ್ನು ರಚಿಸಿದ ಕಲಾವಿದನ ಹೆಸರು ರವಿಚಂದ್ರ. ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ಅಕ್ಕಸಾಲಿಗರಾಗಿರುವ ಇವರಿಗೆ ಏನಾದರೊಂದು ವಿಭಿನ್ನವಾಗಿ ಪ್ರಯತ್ನಿಸಬೇಕೆಂಬ ತುಡಿತವಿದ್ದು, ಇದೀಗ ಈ ಕಲಾಕೃತಿಗಳ ಮಾಡಿದ್ದಾರೆ.

Advertisement
Continue Reading Below

ಅಂದಹಾಗೆ ಇದೀಗ ಸಣ್ಣದರಲ್ಲಿಯೇ ಅತಿ ಸಣ್ಣ ಚಿಕ್ಕ ಮೋದಿಯನ್ನು ರಚಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. 20 ಮಿ.ಗ್ರಾಂ ಬಂಗಾರದ 3.75 ಮಿ.ಮೀ. ಎತ್ತರದ, 3 ಮಿ.ಮೀ. ಅಗಲದ, ಅಕ್ಕಿ ಕಾಳಿಗಿಂತ ಚಿಕ್ಕದಾದ ಪ್ರಧಾನಿ ನರೇಂದ್ರ ಮೋದಿಯವರ ಕಲಾಕೃತಿಯನ್ನು ರಚಿಸಿ ಸೈ ಎನಿಸಿಕೊಂಡಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವಿದ್ದು, ಇದನ್ನು ಅವರಿಗೆ ಸಮರ್ಪಿಸಿದ್ದಾರೆ.

ಅಲ್ಲದೇ ಈ ಲಾಕ್‍ಡೌನ್ ಬಿಡುವಿನ ಸಮಯವನ್ನೆ ಉಪಯೋಗಿಸಿಕೊಂಡು ಈ ಚಿಕ್ಕ ಕಲಾಕೃತಿ ರಚಿಸಲು ಸಾಕಷ್ಟು ಪ್ರಯತ್ನ ಪಟ್ಟು ಕೊನೆಗೆ ಸಕ್ಸಸ್ ಕಂಡಿದ್ದಾರೆ. ಕಳೆದ 2 ತಿಂಗಳಿನಿಂದ ಪ್ರತಿದಿನ ಒಂದೆರಡು ಗಂಟೆಗಳ ಕಾಲ ಈ ಕಲಾಕೃತಿ ರಚಿಸಲು ಸಮಯ ವ್ಯಯಿಸಿದ್ದು, ಕೊನೆಗೆ ಈ ಸೂಕ್ಷ್ಮ ಕಲಾಕೃತಿ ರಚಿಸುವಲ್ಲಿ ಸಫಲರಾಗಿದ್ದಾರೆ. ಮೋದಿಯವರು ಓಕೆ ಅಂದರೆ ಸಾಕು ದೆಹಲಿಗೆ ಹೋಗಿ ಇದನ್ನು ಕೊಟ್ಟು ಬರುತ್ತೇನೆ ಎಂಬ ಆಶಯ ಹೊಂದಿದ್ದಾರೆ.

Click to comment

Leave a Reply

Your email address will not be published. Required fields are marked *