Connect with us

Bengaluru City

ದೀಪಿಕಾರನ್ನು ನೋಡೋದೇ ಚಂದ: ಶೈನ್ ಶೆಟ್ಟಿ

Published

on

ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಶೈನ್ ಶೆಟ್ಟಿ ಅವರು ದೀಪಿಕಾ ಅವರನ್ನು ನೋಡುವುದೇ ಚಂದ ಎಂದು ಸಹಸ್ಪರ್ಧಿಗಳ ಬಳಿ ಹೇಳಿಕೊಂಡಿದ್ದಾರೆ.

ಗುರುವಾರ ಶೈನ್, ರೂಮಿನಲ್ಲಿ ಕುಳಿತು ಸುಜಾತ ಹಾಗೂ ಚಂದನಾ ಅವರ ಬಳಿ, ದೀಪಿಕಾ ದಾಸ್ ಒಂದೇ ಪ್ಯಾಕೇಜ್ ರೀತಿ. ಏಕೆಂದರೆ ಅವರೇ ಸ್ವತಃ ಮೇಕಪ್ ಮಾಡಿಕೊಳ್ಳುತ್ತಾರೆ. ಅವರು ಫ್ಯಾಶನ್ ಡಿಸೈನರ್, ಅಡುಗೆ ಮಾಡಲು ಬರುತ್ತೆ. ನೋಡೋಣ ನಾನು ಯೋಚನೆ ಮಾಡುತ್ತೇನೆ. ನೀವೆಲ್ಲಾ ನನ್ನ ಮದುವೆಗೆ ಬಂದು ಅಕ್ಷತೆ ಹಾಕಿ ಎಂದು ಹೇಳಿದ್ದಾರೆ.

ಶೈನ್ ಮಾತು ಕೇಳಿ ದೀಪಿಕಾ ದಾಸ್ ಅವರ ಮದುವೆಗೆ ಅಕ್ಷತೆ ಹಾಕಲು ನಾವು ಬರಬೇಕಂತೆ ಎಂದು ಸುಜಾತ ಅವರು ಚಂದನಾ ಬಳಿ ಹೇಳಿದ್ದಾರೆ. ಈ ವೇಳೆ ಚಂದನಾ, ದೀಪಿಕಾ ದಾಸ್ ಹಾಗೂ ಶೈನ್ ಮದುವೆಗೆ ಅಕ್ಷತೆ ಹಾಕಲು ಹೇಳುತ್ತಿದ್ದಾರೆ ಎಂದರು.

ಚಂದನಾ ಈ ರೀತಿ ಹೇಳುತ್ತಿದ್ದಂತೆ ಶೈನ್ ನೀವೇ ನೀವೇ ಈ ರೀತಿ ಭಾವಿಸಿಕೊಳ್ಳುತ್ತೀರಿ ಎಂದಾಗ ಚಂದನಾ ನೀವು ಡೈರೆಕ್ಟ್ ಆಗಿ ಹೇಳಿಲ್ಲ ಎಂದರೆ ನಮಗೆ ಗೊತ್ತಾಗಲ್ಲ ಎಂದುಕೊಂಡರಾ ಎಂದರು. ಬಳಿಕ ದೀಪಿಕಾ ಪ್ರತಿದಿನ ಏನು ಹಾಕಿಕೊಳ್ಳುತ್ತಾರೆ ಎಂದು ನೋಡುವುದೇ ಚಂದ ಎಂದು ಶೈನ್ ಹೇಳಿದ್ದಾರೆ.