Connect with us

Bollywood

ಅತ್ತೆಯ ಜೊತೆ ಶಿಲ್ಪಾ ಶೆಟ್ಟಿ ಭರ್ಜರಿ ಡ್ಯಾನ್ಸ್- ವಿಡಿಯೋ ವೈರಲ್

Published

on

-10 ಲಕ್ಷಕ್ಕೂ ಅಧಿಕ ವ್ಯೂವ್

ಮಂಬೈ: ಬಾಲಿವುಡ್ ನಟಿ, ಕುಡ್ಲದ ಚಲುವೆ ಶಿಲ್ಪಾ ಶೆಟ್ಟಿ ಅತ್ತೆಯ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅತ್ತೆಯ ಹುಟ್ಟುಹಬ್ಬದ ಹಿನ್ನೆಲೆ ಶಿಲ್ಪಾ ಶೆಟ್ಟಿ ಪಂಜಾಬಿ ಹಾಡು ‘ಸೌದಾ ಖರಾ ಖರಾ’ ಸಖತ್ ಹೆಜ್ಜೆ ಹಾಕಿದ್ದಾರೆ. ಸೊಸೆ ಡ್ಯಾನ್ಸ್ ಮಾಡುವ ವೇಳೆ ಪಕ್ಕದಲ್ಲಿಯೇ ನಿಂತಿದ್ದ ಅತ್ತೆ ಹೆಜ್ಜೆ ಹಾಕುವ ಮೂಲಕ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಇದುವರೆಗೂ 10 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, ನೆಟ್ಟಿಗರು ಅತ್ತೆ-ಸೊಸೆ ನಡುವಿನ ಬಾಂಧವ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಇನ್‍ಸ್ಟಾಗ್ರಾಂನಲ್ಲಿ ಡ್ಯಾನ್ಸ್ ವಿಡಿಯೋ ಪೋಸ್ಟ್ ಮಾಡಿಕೊಂಡಿರುವ ಶಿಲ್ಪಾ ಶೆಟ್ಟಿ, ಅಮೇಜಿಂಗ್ ಅತ್ತೆಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ನಮ್ಮ ಕುಟುಂಬದ ಅಲ್ಟಿಮೇಟ್ ರಾಕ್ ಸ್ಟಾರ್. ನಿಮ್ಮನ್ನು ಅತ್ತೆಗೆ ಪಡೆದ ನಾನು ಅದೃಷ್ಟವಂತೆ. ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ. ಒಬ್ಬ ಸೊಸೆಗೆ ಅತ್ತೆಯ ರೂಪದಲ್ಲಿ ಒಳ್ಳೆಯ ಡ್ಯಾನ್ಸ್ ಪಾಟರ್ನರ್ ಮತ್ತು ಸ್ನೇಹಿತೆ ಆಗಿದ್ದೀರಿ ಎಂದು ಬರೆದುಕೊಂಡಿದ್ದಾರೆ.

ಬಹು ವರ್ಷಗಳ ಬಳಿಕ ನಟನೆಗೆ ಹಿಂದಿರುಗಿರುವ ಶಿಲ್ಪಾ ಶೆಟ್ಟಿ, ನಿಕ್ಕಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಭ್ಯಾಗ್ಯಶ್ರೀ ಪುತ್ರ ಅಭಿಮನ್ಯು ದಸಾನಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಹಂಗಮಾ-2ದಲ್ಲಿಯೂ ಶಿಲ್ಪಾ ಕಾಣಿಸಿಕೊಳ್ಳುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *