ಶಾನ್ವಿ ಶ್ರೀವಾಸ್ತವ್ ಮಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಮಲಯಾಳಂನ ಮೊದಲ ಸಿನಿಮಾ ವಿಚಾರವಾಗಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಈಗ ಶಾನ್ವಿ ಥೈಲ್ಯಾಂಡ್ಗೆ ಹಾರಿದ್ದಾರೆ. ಥೈಲ್ಯಾಂಡ್ನ ಬೋಲ್ಡ್ ಫೋಟೋಸ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
View this post on Instagram
`ಚಂದ್ರಲೇಖ’ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಿತರಾದ ನಟಿ ಶಾನ್ವಿ ಈಗ ಬಹುಭಾಷಾ ನಾಯಕಿಯಾಗಿ ಮಿಂಚಿದ್ದಾರೆ. ಕನ್ನಡ ಮತ್ತು ತೆಲುಗು ಚಿತ್ರದ ಮೂಲಕ ಸೌಂಡ್ ಮಾಡಿದ್ದ ನಟಿ ಈಗ ಮಾಲಿವುಡ್ಗೆ ಲಗ್ಗೆ ಇಟ್ಟಿದ್ದಾರೆ. ಸಾಲು ಸಾಲು ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಿದ್ದ ನಟಿ ಈಗ ಥೈಲ್ಯಾಂಡ್ಗೆ ಹಾರಿದ್ದಾರೆ. ಇದನ್ನೂ ಓದಿ:ಪಿಂಕ್ ಕಲರ್ ಡ್ರೆಸ್ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟ ಆಲಿಯಾ ಭಟ್
View this post on Instagram
ಥೈಲ್ಯಾಂಡ್ನ ಸುಂದರ ದ್ವೀಪದ ಮಧ್ಯೆ ಶಾನ್ವಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಮಾಸ್ಟರ್ಪೀಸ್ ಬೆಡಗಿಯ ಬೋಲ್ಡ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನು ನಟಿ ಶಾನ್ವಿ `ಮಹಾವೀರ್ಯಾರ್’ ಚಿತ್ರದ ಮೂಲಕ ಮಾಲಿವುಡ್ಗೆ ಪರಿಚಿತರಾಗುತ್ತಿದ್ದಾರೆ. ಇದೇ ಜುಲೈ 21ಕ್ಕೆ ಸಿನಿಮಾ ತೆರೆಯ ಮೇಲೆ ಅಬ್ಬರಿಸಲಿದೆ.