Connect with us

Cinema

ಶಂಕರ್‌ನಾಗ್ ನೆನಪು ಮಾಡಿಕೊಂಡ ಸ್ಯಾಂಡಲ್‍ವುಡ್ ಸ್ಟಾರ್ಸ್

Published

on

ಬೆಂಗಳೂರು: ನಟ ದರ್ಶನ್ ಸ್ಯಾಂಡಲ್‍ವುಡ್ ಲೆಜೆಂಡ್‍ಗಳ ಬಗ್ಗೆ ತುಂಬಾ ಗೌರವ ಹೊಂದಿದ್ದಾರೆ. ಇದಕ್ಕೆ ಅಂಬರೀಶ್ ಮೇಲಿಟ್ಟಿರುವ ಅವರ ಅಪಾರ ಪ್ರೀತಿಯೇ ಸಾಕ್ಷಿ. ಅಲ್ಲದೆ ಆಗಾಗ ಹಿರಿಯ ನಟರ ಬಗ್ಗೆ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅದೇ ರೀತಿ ಇದೀಗ ಕರಾಟೆ ಕಿಂಗ್ ಶಂಕರ್ ನಾಗ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ಶಂಕರ್ ನಾಗ್ ಚಂದನವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಿನಿಮಾ ಜಗತ್ತಿನಲ್ಲಿ ಅವರ ವಿಭಿನ್ನ ಪ್ರಯತ್ನ, ಸಾಮಾಜಿಕ ಕಳಕಳಿಯಿಂದಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆಟೋ ರಾಜ ಶಂಕರ್ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರಿತಿ, ಕೇವಲ ಶಂಕರ್ ನಾಗ್ ಅವರನ್ನು ಮಾತ್ರ ನೆನೆಯದೆ ವಿಭಿನ್ನ ಕೆಲಸಗಳ ಮೂಲಕ ಅವರನ್ನು ಸ್ಮರಿಸುತ್ತಾರೆ.

ಶಂಕರ್ ನಾಗ್ ಹುಟ್ಟುಹಬ್ಬದಂದು ಅವರ ಅಭಿಮಾನಿಗಳು ವಿವಿಧ ರೀತಿಯ ಸಾಮಾಜಿಕ ಕೆಲಸಗಳ ಮೂಲಕವೇ ಶುಭಾಶಯ ಕೋರುತ್ತಾರೆ. ಅಷ್ಟರ ಮಟ್ಟಿಗೆ ತಮ್ಮ ನೆಚ್ಚಿನ ನಟನ ಬಗ್ಗೆ ಅಭಿಮಾನ ಹೊಂದಿದ್ದಾರೆ. ಇದೀಗ ದರ್ಶನ್ ಸಹ ಲೆಜೆಂಡ್ ಆ್ಯಕ್ಟರ್ ಗೆ ಶುಭ ಕೋರಿದ್ದು, ಟ್ವೀಟ್ ಮಾಡಿ ಭಾವನಾತ್ಮಕ ಸಾಲುಗಳನ್ನು ಬರೆಯುವ ಮೂಲಕ ಸ್ಮರಿಸಿದ್ದಾರೆ.

ನಿಜವಾದ ಲೆಜೆಂಡ್‍ಗೆ ಯಾವತ್ತೂ ಸಾವಿಲ್ಲ, ಅವರು ಕನ್ನಡಿಗರ ಹೃದಯ ಸಾಮಾಜ್ಯದಲ್ಲಿ ಯಾವಾಗಲೂ ಎವರ್‍ಗ್ರೀನ್ ಆಗಿ ಉಳಿದಿದ್ದಾರೆ. ಹ್ಯಾಪಿ ಬರ್ತ್ ಡೇ ಶಂಕರಣ್ಣ, ನಾವು ಯಾವಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಆಟೋ ರಾಜನನ್ನು ನೆನೆದಿದ್ದಾರೆ. ಇದಕ್ಕೆ ಅವರಭಿಮಾನಿಗಳು ಸಹ ಕಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ.

ಇಂದು ಶಂಕರ್ ನಾಗ್ ಅವರ 66ನೇ ಹುಟ್ಟುಹಬ್ಬವಾಗಿದ್ದು, ಇಡೀ ಸ್ಯಾಂಡಲ್‍ವುಡ್‍ನ ನಟ, ನಟಿಯರು ನೆನೆಯುತ್ತಿದ್ದಾರೆ. ನವರಸ ನಾಯಕ ಜಗ್ಗೇಶ್, ಕಿಚ್ಚ ಸುದೀಪ್, ರಚಿತಾ ರಾಮ್, ಡಾಲಿ ಧನಂಜಯ್ ಸೇರಿದಂತೆ ಬಹುತೇಕ ನಟರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಶಂಕರ್ ನಾಗ್ ಕಣ್ಮರೆಯಾಗಿ ಮೂರು ದಶಕಗಳೇ ಕಳೆದರೂ ಅಭಿಮಾನಿಗಳು ಮಾತ್ರ ಅವರ ಬರ್ತ್ ಡೇಯನ್ನು ಹಬ್ಬದಂತೇ ಆಚರಿಸುತ್ತಾರೆ. ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾರೆ.

Click to comment

Leave a Reply

Your email address will not be published. Required fields are marked *