Connect with us

Cinema

ಜೈಲು ಶಿಕ್ಷೆಗೆ ಗುರಿಯಾದ ಹಿರಿಯ ಸ್ಪರ್ಧಿ ಶಂಕರ್ ಅಶ್ವಥ್!

Published

on

ಬಿಗ್‍ಬಾಸ್ ಮನೆಯಲ್ಲಿ ಅತಿ ಹಿರಿಯ ಸ್ಪರ್ಧಿ ಎಂದರೆ ಶಂಕರ್ ಅಶ್ವಥ್. ವಯಸ್ಸಿನಲ್ಲಿ ಕಿರಿಯರೇ ಇರುವ ಈ ಮನೆಯಲ್ಲಿ ಇದೀಗ ಹಿರಿಜೀವ ಎಂಬುದನ್ನು ಲೆಕ್ಕಿಸದ ಮನೆ ಸದಸ್ಯರು ಶಂಕರ್ ಅವರನ್ನು ಜೈಲಿಗೆ ತಳ್ಳಿದ್ದಾರೆ.

ತಮ್ಮ ಅನುಭವ ಹಾಗೂ ವಿಶೇಷ ವ್ಯಕ್ತಿತ್ವದಿಂದ ಎಲ್ಲರ ಗಮನ ಸೆಳೆಯುತ್ತಿರುವ ಸ್ಪರ್ಧಿ ಎಂದರೆ ಶಂಕರ್ ಅಶ್ವಥ್. ಎರಡು ವಾರಗಳ ಕಾಲ ಎಲಿಮಿನೇಷನ್ ನಿಂದ ತಪ್ಪಿಸಿಕೊಂಡು, ಸೇಫ್ ಗೆಮ್ ಆಡಿಕೊಂಡು ಬಂದಿದ್ದ ಶಂಕರ್ ಅಶ್ವಥ್ ಇದೀಗ ಜೈಲುವಾಸವನ್ನು ಅನುಭವಿಸುತ್ತಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿ ಎಲ್ಲ ವಯೋಮಾನದವರು ಇದ್ದಾರೆ. ಪ್ರತಿಯೊಬ್ಬರು ಸರಿಸಮಾನವಾಗಿ ಎಲ್ಲಾ ಟಾಸ್ಕ್‍ಗಳಲ್ಲಿ ಭಾಗವಹಿಸಬೇಕು. ಹಿರಿಯರ ವಯಸ್ಸಿನವರಾದ ಶಂಕರ್ ಅಶ್ವಥ್ ಇದ್ದರೆ, ಅತಿ ಕಿರಿಯನಾಗಿ ವಿಶ್ವನಾಥ್ ಇದ್ದಾನೆ. ಟಾಸ್ಕ್ ಎಂದು ಬಂದರೆ ಯಾರು ಕೂಡಾ ವಯಸ್ಸಿನ ನೆಪವನ್ನು ಹೇಳುವಂತಿಲ್ಲ. ಎಲ್ಲರೂ ಸರಿಸಮಾನವಾಗಿ ಸ್ಪರ್ಧಿಸಬೇಕು. ಹಲವು ಬಾರಿ ಹಿರಿಯರು ಎಂದು ಬಿಟ್ಟ್ ಸ್ಪರ್ಧಿಗಳು ಈ ಬಾರಿ ಅವರ ಹೆಸರನ್ನು ಸೂಚಿಸಿದ್ದಾರೆ.

ಪ್ರತಿವಾರ ಕಳಪೆ ಪ್ರದರ್ಶನ ನೀಡಿದ ಮನೆಯ ಸದಸ್ಯನನ್ನು ಜೈಲಿಗೆ ಕಳುಹಿಸಲಾಗುತ್ತದೆ. ಈ ವಾರದ ಕಳಪೆ ಪ್ರದರ್ಶನ ನೀಡಿದ ಸದಸ್ಯನ ಹೆಸರನ್ನು ಸೂಚಿಸಿ ಎಂದು ಬಿಗ್‍ಬಾಸ್ ಹೇಳಿದಾಗ ಮನೆಯ ಸದಸ್ಯರು ಶಂಕರ್ ಅವರ ಹೆಸರನ್ನು ಸೂಚಿಸಿದ್ದಾರೆ. ಮನೆ ಸದಸ್ಯರ ಅನುಸಾರವಾಗಿ ಬಿಗ್‍ಬಾಸ್ ಶಿಕ್ಷೆಯನ್ನು ವಿಧಿಸಿದ್ದಾರೆ. ಖೈದಿಯ ಬಟ್ಟೆ ಧರಿಸಿ ಜೈಲುಪಾಲಾಗಿದ್ದಾರೆ.

ಶಂಕರ್ ಅವರ ಹೆಸರು ಸೂಚಿಸುವಾಗ ಮನೆಯ ಸದಸ್ಯರು ಕೆಲವರು ವಯಸ್ಸು ಹಾಗೂ ಮತ್ತಿತರ ಕಾರಣಗಳನ್ನು ಕೊಟ್ಟಿದ್ದಾರೆ. ಶಂಕರ್ ಅವರಿಗೆ ಈ ವಿಚಾರವಾಗಿ ಕೊಂಚ ಬೇಸರವಾಗಿದೆ. ಆದರೆ ಬೇಸರವನ್ನು ತೋರಿಸಿಕೊಳ್ಳದೆ ನಗುಮುಖದಿಂದ ಜೈಲಿನ ಒಳಗೆ ಹೋಗಿದ್ದಾರೆ.

ಜೈಲುವಾಸ ಅನುಭವಿಸುವ ಸ್ಪರ್ಧಿ ಮನೆಗೆ ಬೇಕಾಗುವ ತರಕಾರಿಗಳನ್ನು ಹೆಚ್ಚಿಕೊಡಬೇಕು. ಮನೆಯ ಯಾವುದೇ ಸೌಲಭ್ಯವನ್ನು ಬಳಸುವಂತಿಲ್ಲ. ಮೊದಲ ವಾರ ಧನುಶ್ರೀ, 2ನೇ ವಾರ ಶಮಂತ್‍ಗೆ ಶಿಕ್ಷೆಯನ್ನು ನೀಡಲಾಗಿತ್ತು. ಇದೀಗ ಶಂಕರ್ ಅಶ್ಚಥ್ ಜೈಲುವಾಸ ಅನುಭವಿಸಲಿದ್ದಾರೆ. ಇಂದು ಪ್ರಸಾರವಾಗುವ ಎಪಿಸೋಡ್‍ನಲ್ಲಿ ಶಂಕರ್ ಅವರು ಜೈಲಿನಲ್ಲಿ ಕಾಲ ಕಳೆಯಲಿದ್ದಾರೆ.

Click to comment

Leave a Reply

Your email address will not be published. Required fields are marked *