Connect with us

Cricket

ಕೊಹ್ಲಿಯನ್ನು ಎಲ್ಲರು ಏಕೆ ಇಷ್ಟ ಪಡುತ್ತಾರೆ ಎಂದು ರಿವೀಲ್ ಮಾಡಿದ್ರು ಶೇನ್ ವಾರ್ನ್

Published

on

ಮುಂಬೈ: ಆಸ್ಟ್ರೇಲಿಯಾ ತಂಡದ ಬೌಲಿಂಗ್ ಲೆಜೆಂಡ್ ಶೇನ್ ವಾರ್ನ್ ನಾನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಬಹು ದೊಡ್ಡ ಅಭಿಮಾನಿ ಎಂದು ಹೇಳಿದ್ದು, ನಾನು ಮಾತ್ರವಲ್ಲ ಎಲ್ಲರೂ ಕೂಡ ಕೊಹ್ಲಿರನ್ನು ಇಷ್ಟ ಪಡುತ್ತಾರೆ ಎಂದಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಮಾಧ್ಯಮಗಳಿಗೆ ಶೇನ್ ವಾರ್ನ್ ಪ್ರತಿಕ್ರಿಯೆ ನೀಡಿದ್ದು, ಕೊಹ್ಲಿ ಅವರ ನಾಯಕತ್ವ, ಪ್ರಾಮಾಣಿಕತೆ ಮತ್ತು ಕೌಶಲ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಹ್ಲಿ ಅವರ ಬ್ಯಾಟಿಂಗ್ ನೋಡಲು ಹಾಗೂ ಅವರೊಂದಿಗೆ ಮಾತನಾಡಲು ನಾನು ಬಹಳಷ್ಟು ಇಷ್ಟ ಪಡುತ್ತೇನೆ. ಕೊಹ್ಲಿ ವಿಶ್ವ ಕ್ರಿಕೆಟ್‍ನ ಅತ್ಯುತ್ತಮ ನಾಯಕರಾಗಿದ್ದು, ಅವರು ನಂಬಿರುವ ವಿಷಯಗಳ ಬಗ್ಗೆ ಗಟ್ಟಿಯಾಗಿ ನಿಲ್ಲುತ್ತಾರೆ. ಫೀಲ್ಡ್ ನಲ್ಲಿ ಭಾವುಕರಾದರೂ ಕೂಡ ಮೋಡಿ ಮಾಡುತ್ತಾರೆ ಎಂದು ಹಾಡಿ ಹೊಗಳಿದ್ದಾರೆ. ಅಲ್ಲದೇ ಇದೇ ಅವರನ್ನು ಎಲ್ಲರೂ ಇಷ್ಟ ಪಡಲು ಕಾರಣ ಎಂದು ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಏಕದಿನ ಕ್ರಿಕೆಟ್‍ಕ್ಕಿಂತಲೂ ಟಿ20 ಕ್ರಿಕೆಟ್‍ಗೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದ್ದು, ಇದು ಕ್ರಿಕೆಟ್ ಭವಿಷ್ಯಕ್ಕೆ ಮಾರಕವಾಗಿದೆ. ಆದರೆ ಟೆಸ್ಟ್ ಕ್ರಿಕೆಟ್‍ಗೆ ಕೊಹ್ಲಿ ಸಾಕಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಇಂದಿನ ಕ್ರಿಕೆಟ್ ತಂಡದ ನಾಯಕರಲ್ಲಿ ಕೊಹ್ಲಿ ಟೆಸ್ಟ್ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಟೀಂ ಇಂಡಿಯಾ ಕೂಡ ಟೆಸ್ಟ್ ಕ್ರಿಕೆಟ್ ಬಗ್ಗೆ ಪ್ರಾಮುಖ್ಯತೆ ನೀಡುತ್ತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕೊಹ್ಲಿ, ಸಚಿನ್ ನಡುವೆ ಯಾರು ಇಷ್ಟ ಎಂಬ ಪ್ರಶ್ನೆಗೆ ಉತ್ತರಿಸಿ, ಇಬ್ಬರು ಆಟಗಾರರು ಕೂಡ ಭಿನ್ನ ಸಮಯದಲ್ಲಿ ತಂಡದಲ್ಲಿ ಆಡಿದ್ದಾರೆ. ಇಬ್ಬರಲ್ಲಿ ಯಾರು ಇಷ್ಟ ಎಂದು ಹೇಳುವುದು ಕಷ್ಟ. ಆದರೆ ಸಚಿನ್ ಹಾಗೂ ನಮ್ಮ ಕಾಲಘಟ್ಟದಲ್ಲಿದ್ದ ಪರಿಸ್ಥಿತಿಗಳಿಗಿಂತ ಈಗಿರುವ ಸ್ಥಿತಿಗಳು ಬ್ಯಾಟ್ಸ್ ಮನ್ಸ್ ಹೆಚ್ಚು ಅನುಕೂಲಗಳಿವೆ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv