Connect with us

Cinema

ಹುಡುಗಿಯರು ಯಾಕೆ ಹೀಗೆ ಉಲ್ಟಾ ಹೊಡಿತಾರೆ?

Published

on

ಬಿಗ್ ಮನೆಯಲ್ಲಿ ಈ ವಾರದ ಕಳಪೆ ಪ್ರದರ್ಶನ ನೀಡಿದ ಸದಸ್ಯರನ್ನು ಒಮ್ಮತದಿಂದ ಗುರುತಿಸಿ ಸೂಕ್ತ ಕಾರಣವನ್ನು ಗುರುತಿಸಿ ಹೇಳಿ ಎಂದು ಬಿಗ್‍ಬಾಸ್ ಸೂಚಿಸಿದ್ದರು. ಮನೆಯ ಸದಸ್ಯರೆಲ್ಲರು ಶಮಂತ್ ಹೆಸರನ್ನು ಸೂಚಿಸಿದ್ದಾರೆ.

ಶಮಂತ್‍ಗೆ ಬ್ಯಾಡ್ ಟೈಮ್!

ಬಿಗ್‍ಬಾಸ್ ಮನೆಯಲ್ಲಿ ಮೊದಲವಾರವೇ ಕ್ಯಾಪ್ಟನ್ ಆಗಿ ಆಯ್ಕೆಯಾದ ಶಮಂತ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಮನೆ ಸದಸ್ಯರು ಮುಂದಿನವಾರವು ಅವರೆ ಇರಲಿ ಎಂದು ಸೂಚಿಸಿದ್ದರು. ಆದರೆ ಕ್ಯಾಪ್ಟನ್ ಪಟ್ಟ ಕಳೆದುಕೊಳ್ಳುತ್ತಿದ್ದಂತೆ ಕೆಟ್ಟ ಕಾಲ ಶುರುವಾಗಿದೆ. ಕಾಪ್ಟನ್ ರೂಮ್‍ನಲ್ಲಿ ಹಾಯಾಗಿದ್ದ ಶಮಂತ್ ಇಂದು ಜೈಲು ಪಾಲಾಗಿದ್ದಾರೆ.

ಟಾಸ್ಕ್ ಮಾತ್ರವಲ್ಲದೇ ಕೆಲವರು ವೈಯಕ್ತಿಕ ಕಾರಣ ಮತ್ತು ಅವರ ನಡವಳಿಕೆಯನ್ನು ಆಧರಿಸಿ ಶಮಂತ್ ಅವರಿಗೆ ಕಳಪೆ ಪ್ರದರ್ಶನ ಎಂದು ಗುರುತಿಸಿದ್ದಾರೆ. ಖೈದಿಯ ಬಟ್ಟೆ ಧರಿಸಿ ಜೈಲು ಪ್ರವೇಶಿಸಿದ ಶಮಂತ್ ಕೊಂಚ ಬೇಸರವಾಗಿದ್ದಾರೆ.

ನಿಧಿ ಅವರಿಗೆ ನಾನು ಎಷ್ಟು ಸಹಾಯ ಮಾಡಿದೆ. ಅವರು ನನ್ನ ಕಳಪೆ ಎಂದಿದ್ದಾರೆ. ಒಳ್ಳೆತನಕ್ಕೆ ಬೆಲೆ ಇಲ್ಲ. ಹುಡುಗಿಯರು ಯಾಕೆ ಹೀಗೆ ಉಲ್ಟಾ ಹೊಡಿತಾರೆ? ಇಲ್ಲಿಂದ ಕಾಲು ಆಚೆ ಇಡುತ್ತಿದ್ದಂತೆ ನನ್ನಲ್ಲಿ ಎಷ್ಟು ಬದಲಾವಣೆ ಇರುತ್ತದೆ ನೋಡಿ. ನಾನು ಸೈಲೆಂಟ್ ಆಗಿ ಇದ್ದು ತಪ್ಪು ಮಾಡಿದೆ ಬಿಗ್‍ಬಾಸ್ ಎಂದು ಹೇಳಿದ್ದಾರೆ.

ಕ್ಯಾಪ್ಟನ್ ಜವಾಬ್ದಾರಿಯಲ್ಲಿ ಶಮಂತ್ ಕೊಂಚ ಎಡವಿದಂತೆ ಕಾಣುತ್ತದೆ. ಮನೆಯ ಸದಸ್ಯರನ್ನು ನಿಭಾಯಿಸಿಕೊಂಡು, ಟಾಸ್ಕ್‍ನಲ್ಲಿ ಎಲ್ಲರೂ ಭಾಗವಹಿಸುತ್ತಿದ್ದಾರಾ? ಅವರ ಸಮಸ್ಯೆಗಳೆನು ಎಂಬುದನ್ನು ಕೇಳಿ ಸರಿದೂಗಿಸಿಕೊಂಡು ಹೋಗಬೇಕಿತ್ತು. ಆದರೆ ಮನೆಯವರ ದೃಷ್ಟಿಯಲ್ಲಿ ಅವರು ಕೊಂಚ ಎಡವಿದ್ದಾರೆ ಎಂದು ಅನ್ನುಸುತ್ತದೆ ಹೀಗಾಗಿ ಈವಾರದ ಕಳಪೆ ಹಣೆಪಟ್ಟಿಯನ್ನು ಧರಿಸಿ ಜೈಲುವಾಸ ಅನುಭವಿಸುತ್ತಿದ್ದಾರೆ.

ಮೊದಲವಾರ ಧನುಶ್ರೀ ಎಲಿಮಿನೆಟ್ ಆಗಿ ಮನೆಯಿಂದ ಹೊರ ನಡೆದಿದ್ದರು. ಈ ವಾರ ಮನೆಯಿಂದ ಯಾರು ಹೋಗುತ್ತಾರೆ ಎನ್ನುವ ಕೂತುಹಲ ಎಲ್ಲರಲ್ಲಿದೆ. ವಾರದ ಕಟ್ಟೆಪಂಚಾಯ್ತಿಯಲ್ಲಿ ಸುದೀಪ್ ಇಂದು ಮನೆಯವರ ಬಳಿ ಯಾವೆಲ್ಲ ವಿಚಾರವಾಗಿ ಚರ್ಚೆಮಾಡಿ ಬುದ್ದಿವಾದ ಹೇಳಲಿದ್ದಾರೆ. ಯಾರು ಒಂಟಿ ಮನೆಯಿಂದ ಆಚೆ ಹೋಗಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಂದು ಸಿಗಲಿದೆ.

Click to comment

Leave a Reply

Your email address will not be published. Required fields are marked *