Connect with us

Cinema

ಫಾಝಿಲ್ ಕ್ಯಾಸಿನೋ ಪಾರ್ಟಿಯಲ್ಲಿ ಗುಳಿ ಕೆನ್ನೆ ಬೆಡಗಿ ಐಂದ್ರಿತಾ

Published

on

ಬೆಂಗಳೂರು: ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಫೈಝಿಲ್ ಒಡೆತನದ ಕ್ಯಾಸಿನೋ ಪಾರ್ಟಿಯಲ್ಲಿ ಚಂದನವನದ ಗುಳಿಕೆನ್ನೆ ಚೆಲುವೆ ಐಂದಿತಾ ರೇ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕ್ಯಾಸಿನೋಗೆ ಆಹ್ವಾನ ನೀಡಿದ್ದಕ್ಕೆ ಐಂದ್ರಿತಾ ಧನ್ಯವಾದ ಹೇಳಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಶ್ರೀಲಂಕಾದ ಕೊಲಂಬೋದಲ್ಲಿರುವ ಶೇಖ್ ಫಾಝಿಲ್ ಒಡೆತನದ ಕ್ಯಾಸಿನೋಗಳಲ್ಲಿ ಸ್ಟಾರ್ ನಟ ನಟಿಯರು ಭಾಗಿಯಾಗುತ್ತಿದ್ದರು ಎನ್ನಲಾಗಿದೆ. ಬಂಧಿತ ನಟಿ ಸಂಜನಾ ಗಲ್ರಾನಿ ಕ್ಯಾಸಿನೋದಲ್ಲಿ ಕಾರ್ಯಕ್ರಮಗಳನ್ನ ನೀಡಿದ್ದು, ಫಾಝಿಲ್ ಜೊತೆ ನಿಕಟ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇತ್ತ ಫಾಝಿಲ್ ನಾಪತ್ತೆಯಾಗಿದ್ದು, ಆತನ ಬಗ್ಗೆ ಹೆಚ್ಚು ಮಾಹಿತಿಗಳು ಲಭ್ಯವಾಗಿಲ್ಲ. ಇದೇ ಫಾಝಿಲ್ ನೀಡಿದ್ದ ಆಹ್ವಾನ ಸ್ವೀಕರಿಸಿದ್ದ ಐಂದ್ರಿತಾ ಕ್ಯಾಸಿನೋದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ಐಂದಿತ್ರಾ ವಿಡಿಯೋ: ಎಲ್ಲರಿಗೂ ನಮಸ್ಕಾರ. ಶ್ರೀಲಂಕಾದಲ್ಲಿರುವ ಅತಿದೊಡ್ಡ, ಕೊಲೆಸ್ಟ್ ಕ್ಯಾಸಿನೋಗೆ ನಾನು ಬರುತ್ತಿದ್ದೇನೆ. ಸೆಪ್ಟೆಂಬರ್ 8ರ ಈದ್ (ಹಬ್ಬ)ನ್ನು ನಿಮ್ಮೊಂದಿಗೆ ಆಚರಿಸಲು ಕೊಲಂಬೋಗೆ ಬರುತ್ತಿದ್ದೇನೆ. ನನ್ನನ್ನ ಆಹ್ವಾನಿಸಿದಕ್ಕೆ ಶೇಖ್ ಫಾಝಿಲ್ ಅವರಿಗೆ ಧನ್ಯವಾದಗಳು. ಸೆಪ್ಟೆಂಬರ 8ರಂದ ನಿಮ್ಮನ್ನು ಭೇಟಿಯಾಗುತ್ತೇನೆ.

ಶೇಖ್ ಫಾಝಿಲ್ ಕ್ಲಿಕ್ಕಿಸಿಕೊಂಡಿರುವ ಕೆಲ ಫೋಟೋಗಳು ವೈರಲ್ ಆಗಿವೆ. ಇವರ ಜೊತೆ ಬಾಲಿವುಡ್ ನಟ ಸೋಹೈಲ್ ಖಾನ್ ಫೋಟೋದಲ್ಲಿರೋದನ್ನ ಗಮನಿಸಬಹುದು.

ಡ್ರಗ್ ಕೇಸ್‍ನಲ್ಲಿ ತಗ್ಲಾಕೊಂಡಿರುವ ನಟಿ ಸಂಜನಾ ಸ್ಯಾಂಡಲ್‍ವುಡ್ ಸ್ಟಾರ್ ಮಾತ್ರವಲ್ಲ ಕೊಲಂಬೋ ಸ್ಟಾರಾ ಅನ್ನೋ ಅನುಮಾನ ಮೂಡಿದೆ. ಸಂಜನಾ ಕೊಲಂಬೋ ಕ್ಯಾಸಿನೋದಲ್ಲಿರೋ ಮತ್ತಷ್ಟು ವಿಡಿಯೋಗಳು ವೈರಲ್ ಆಗಿದೆ. ಅಲ್ಲದೇ ಸಂಜನಾರ ಕೊಲಂಬೋ ಪಾರ್ಟಿಗಳ ಬಗ್ಗೆ ಪ್ರಶಾಂತ್ ಸಂಬರಗಿ ಸಿಸಿಬಿಗೆ ಸಾಕ್ಷ್ಯ ನೀಡಿದ್ದಾರೆ. ಶಾಸಕ ಜಮೀರ್ ಆಪ್ತ ಶೇಖ್ ಫಾಝಿಲ್ ಜೊತೆ ಸಂಜನಾ ಶಾಂಪೇನ್ ಚಿಮ್ಮಿಸಿ ಕ್ಯಾಸಿನೋದಲ್ಲೇ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದಾರೆ. ಅಲ್ಲದೇ ಆತನೊಂದಿಗೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಾರೆ.

ಶೇಖ್ ಫಾಝಿಲ್ ಜೊತೆಗಿನ ನಂಟೇ ಸಂಜನಾಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಂಭವ ಇದೆ. ಆದರೆ ಶೇಖ್ ಫಾಜೀಲ್ ಮಾತ್ರ ಇನ್ನೂ ಸಇಸಿಬಿ ಬಲೆಗೆ ಬೀಳದೇ ತಪ್ಪಿಸಿಕೊಂಡು ಓಡಾಡ್ತಾ ಇದ್ದಾನೆ. ಭೂಗತನಾಗಿದ್ದುಕೊಂಡು ಶೇಖ್ ಫಾಝೀಲ್ ಸಾಕ್ಷ್ಯ ನಾಶ ಮಾಡ್ತಿರಬಹುದು ಎಂಬ ಶಂಕೆಯನ್ನು ಸಿಸಿಬಿ ಅಧಿಕಾರಿಗಳು ವ್ಯಕ್ತಪಡಿಸ್ತಿದ್ದಾರೆ. 10 ವರ್ಷದ ಹಿಂದೆ ಚಾಮರಾಜಪೇಟೆಯಲ್ಲಿ ಬೈಕ್ ಮೆಕಾನಿಕ್ ಆಗಿದ್ದ ಫಾಝಿಲ್, ಹೆಲಿಕಾಪ್ಟರ್ ನಲ್ಲಿ ಓಡಾಡುವ ಮಟ್ಟಕ್ಕೆ ಬೆಳೆದಿದ್ದು ಹೇಗೆ ಎಂಬ ಬಗ್ಗೆ ಸಿಸಿಬಿ ತನಿಖೆ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

Click to comment

Leave a Reply

Your email address will not be published. Required fields are marked *