ಮುಂಬೈ: ಬಾಲಿವುಡ್ನಲ್ಲಿ ಸಂಚಲ ಹುಟ್ಟಿಸಿರುವ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಜೈಲುಪಾಲಾಗಿದ್ದಾನೆ. ಹೀಗಾಗಿ ಶಾರೂಖ್ ಪತ್ನಿ ಗೌರಿ ತಮ್ಮ ಹುಟ್ಟುಹಬ್ಬವನ್ನು ದುಃಖದಲ್ಲಿಯೇ ಕಳೆಯುವಂತಾಗಿದೆ.
ಶಾರುಖ್ ಖಾನ್ ಹೆಂಡತಿ ಗೌರಿ ಖಾನ್ಗೆ ಇಂದು ಜನ್ಮದಿನ. 51 ವರ್ಷದ ಜನ್ಮದಿನಾಚರಣೆಯ ಸಂಭ್ರಮ ಆಚರಣೆಯಲ್ಲಿ ಇರಬೇಕಾದ ಕುಟುಂಬದಲ್ಲಿ ಈ ವರ್ಷ ಜನ್ಮದಿನ ಆಚರಿಸಿಕೊಳ್ಳಲು ಆಸಕ್ತಿ ಉಳಿದಿಲ್ಲ. ಮಗ ನ್ಯಾಯಾಂಗ ಬಂಧನದಲ್ಲಿರುವುದರಿಂದ ಗೌರಿ ಬರ್ತ್ಡೇ ಆಚರಿಸಿಕೊಂಡಿಲ್ಲ. ಇದನ್ನೂ ಓದಿ: ಉಪ ಚುನಾವಣೆ ಗೆಲ್ಲುವ ವಿಶ್ವಾಸ ಇದೆ: ದೇವೇಗೌಡ
ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಆರ್ಯನ್ ಭಾಗಿಯಾದ ಹಿನ್ನೆಲೆಯಲ್ಲಿ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ (ಎನ್ಸಿಬಿ) ಬಂಧಿಸಿದೆ. ಇದನ್ನೂ ಓದಿ: ನನಗೆ ಅಕ್ರಮ ಸಂಬಂಧ ಇಲ್ಲ- ಟ್ರೋಲಿಗರ ವಿರುದ್ಧ ಕುಟುಕಿದ ಸಮಂತಾ
ನಿನ್ನೆ ನಡೆದಿದ್ದ ವಿಚಾರಣೆಯಲ್ಲಿ ನ್ಯಾಯಾಲಯವು ಆರ್ಯನ್ ಖಾನ್ಗೆ ಎನ್ಸಿಬಿ ಕಸ್ಟಡಿಯನ್ನು ವಿಸ್ತರಿಸಲು ನಿರಾಕರಿಸಿತ್ತು. ಈಗಾಗಲೇ ಅಗತ್ಯವಿದ್ದಷ್ಟು ಸಮಯವನ್ನು ಎನ್ಸಿಬಿಗೆ ನೀಡಲಾಗಿದೆ ಎಂದು ಹೆಚ್ಚುವರಿ ಮೆಟ್ರೋಪಾಲಿಟನ್ ನ್ಯಾಯಾಧೀಶರಾದ ಆರ್.ಎಂ.ನಿರ್ಲೇಕರ್ ಅಭಿಪ್ರಾಯ ವ್ಯಕ್ತಪಡಿಸಿ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು. ಇದನ್ನೂ ಓದಿ: ತನ್ನ ವಿರುದ್ಧ ಟೀಕೆ ಮಾಡುತ್ತಿರೋರಿಗೆ ಸ್ಟ್ರಾಂಗ್ ಉತ್ತರ ಕೊಟ್ಟ ಸಮಂತಾ