Connect with us

7 ವರ್ಷದ ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ

7 ವರ್ಷದ ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ

ದಾವಣಗೆರೆ: 8 ವರ್ಷದ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಂಭೀರ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಆಜಾದ್ ನಗರದಲ್ಲಿ ನಡೆದಿದೆ.

ದಾವಣಗೆರೆಯ ಆಜಾದ್ ನಗರದ ಸಲಾಂ ಶೇಕ್, ತಬಸ್ಸುಂ ಬಾನು ಅವರ ಮಗಳು 7 ವರ್ಷದ ಬಾಲಕಿ ಖನಿಜಾ ಫಾತಿಮಾ ಮೇಲೆ ನಸುಕಿನ ಜಾವ ಮೂರು ಗಂಟೆ ಸುಮಾರಿಗೆ ಬೀದಿ ನಾಯಿಗಳು ದಾಳಿ ಮಾಡಿದ್ದು, ಖತಿಜಾ ಫಾತಿಮಾಲ ಕಾಲು, ತಲೆ ಸೇರಿ ಮೈ ತುಂಬಾ ಕಚ್ಚಿ ಎಳೆದಾಡಿ ಭೀಕರವಾಗಿ ಗಾಯ ಮಾಡಿವೆ. ಈ ವೇಳೆ ಬಾಲಕಿಯ ಕಿರುಚಾಟ ಕೇಳಿ ಆಕೆಯ ಪೋಷಕರು ಮತ್ತು ಅಕ್ಕಪಕ್ಕದವರು ನಾಯಿಗಳನ್ನು ಓಡಿಸಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಪ್ರಿಯತಮನಿಂದ ಮೋಸ – ಯುವತಿ ಆತ್ಮಹತ್ಯೆ 

ಗಾಯಾಳು ಬಾಲಕಿಯನ್ನು ಕೂಡಲೇ ಬಾಪೂಜಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಬಡವರ್ಗದ ಕುಟುಂಬವಾಗಿರುವುದರಿಂದಾಗಿ ಮಗುವಿನ ಚಿಕಿತ್ಸೆಗೆ ಹಣವಿಲ್ಲದೆ ಪೋಷಕರು ಪರದಾಡುವಂತಾಗಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರು ಕೂಡ ಸ್ಥಳೀಯ ಆಡಳಿತ ಸಿಬ್ಬಂದಿ ಕ್ರಮ ಕೈಗೊಳ್ಳದೆ ಇರುವುದನ್ನು ಕಂಡು ಆಜಾದ್ ನಗರದ ಜನರು ಪ್ರತಿಭಟನೆ ನಡೆಸಿ. ಕೂಡಲೇ ಬಾಲಕಿಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ದಾವಣಗೆರೆ ಆಜಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement
Advertisement