Connect with us

Bengaluru City

ಖುಷಿಯಿಂದ ಹೋಗಿ ಬನ್ನಿ ರವಿ ಸರ್: ಭೂಮಿ ಶೆಟ್ಟಿ

Published

on

Share this

– ಅಪ್ಪನ ಸ್ಥಾನ ತುಂಬಿದ್ರು ಅಂದ್ರು ಚಂದನಾ

ಬೆಂಗಳೂರು: ರವಿ ಸರ್ ನಾವು ನಿಮ್ಮನ್ನು ತುಂಬಾನೇ ಇಷ್ಟಪಡುತ್ತೇವೆ. ಖುಷಿಯಿಂದ ಹೋಗಿ ಬನ್ನಿ ಸರ್ ಎಂದು ಬಿಗ್ ಬಾಸ್ ಸ್ಪರ್ಧಿ ಭೂಮಿ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.

ರವಿ ಬೆಳಗೆರೆ ನಿಧನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರವಿ ಸರ್ ನಮ್ಮಿಂದ ದೂರ ಹೋಗಿರಬಹುದು. ಆದರೆ ಪುಸ್ತಕಗಳಲ್ಲಿ ಹಾಗೂ ನಮ್ಮಲ್ಲಿ ಅವರು ಯಾವತ್ತೂ ಅಮರರಾಗಿರುತ್ತಾರೆ. ಅವರು ಜೊತೆ ಬಿಗ್ ಬಾಸ್ ಮನೆಯಲ್ಲಿ ಕಳೆದ ಒಂದು ವಾರ ಅದು ಜೀವನಪರ್ಯಂತ ಅನುಭವವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನನಗೇನಾಗುತ್ತೆ, ಎಷ್ಟೋ ವರ್ಷ ಬದುಕಿರುತ್ತೇನೆ ಕಣ್ರೋ ಅಂದಿದ್ರು- ದೀಪಿಕಾ ದಾಸ್ ಕಣ್ಣೀರು

ಒಂದು ಒಳ್ಳೆಯ ಮೆಮೊರಿ ಕೂಡ ಆಗಿದೆ. ಕೊನೆಗೆ ಉಳಿಯೋದು ಬರೀ ನೆನಪು ಮಾತ್ರ ಅಂತಾರಲ್ವ. ಅದು ಯಾವತ್ತಿಗೂ ನಿಜವಾದ ಮಾತು. ಬೇಜಾರಾಗುತ್ತದೆ, ಆದರೆ ರವಿ ಸರ್ ನಾವು ನಿಮ್ಮನ್ನು ತುಂಬಾನೇ ಇಷ್ಟಪಡುತ್ತೇವೆ. ಖುಷಿಯಿಂದ ಹೋಗಿ ಬನ್ನಿ ಸರ್ ಎಂದು ತಿಳಿಸಿದ್ದಾರೆ.

ಇದೇ ವೇಳೆ ಚಂದನ ಅನಂತಕೃಷ್ಣ ಮಾತನಾಡಿ, ರವಿ ಸರ್ ನಿಧನದ ಬಗ್ಗೆ ಬೆಳಗ್ಗೆ ಗೊತ್ತಾಯ್ತು. ಬಿಗ್ ಬಾಸ್ ಮನೆಯಲ್ಲಿ ಅವರೊಂದಿಗೆ ಕಳೆದ ದಿನಗಳು ನಿಜಕ್ಕೂ ಮರೆಯಲಾದರಂತಹ ದಿನಗಳಾಗಿವೆ. ಅವರಿಂದ ತುಂಬಾ ಕಲಿತಿದ್ದೇವೆ. ಅಲ್ಲದೆ ಸ್ಫೂರ್ತಿ ಪಡೆದವು. ಆ ಒಂದು ವಾರ ಹೇಗೆ ಹೋಯಿತು ಅಂತಾನೇ ನಮಗೆ ಗೊತ್ತಾಗಿಲ್ಲ. ನಾವು ಅದೃಷ್ಟವಂತರು. ಅಲ್ಲಿ ಅವರು ನಮಗೆ ಅಪ್ಪನ ಸ್ಥಾನ ತುಂಬಿದ್ರು ಎಂದು ಭಾವುಕರಾದ್ರು.

ಡಯಾಬಿಟಿಸ್ ಹಾಗೂ ಕಾಲುಗಳ ನೋವಿನಿಂದ ಬಳಲುತ್ತಿದ್ದ ರವಿ ಬೆಳಗೆರೆ ಅವರು ಇಂದು ಬೆಳಗ್ಗಿನ ಜಾವ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಈಗಾಗಲೇ ಅವರ ಮೃತದೇಹವನ್ನು ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಸಂಜೆ ಸಂಜೆ 4 ಗಂಟೆ ಒಳಗೆ ಬನಶಕಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್

Click to comment

Leave a Reply

Your email address will not be published. Required fields are marked *

Advertisement