Connect with us

Bengaluru City

ದಿಗಂತ್, ಐಂದ್ರಿತಾ ಮಧ್ಯರಾತ್ರಿ ದೊಡ್ಡ ಸಂಭ್ರಮಾಚರಣೆ ಮಾಡಿದ್ರು – ಸುಚೇಂದ್ರ ಪ್ರಸಾದ್

Published

on

– ತುಂಬಾ ಸಭ್ಯ, ಸಜ್ಜನ ಕುಟುಂಬ ಅವರದ್ದು

ಬೆಂಗಳೂರು: ದಿಗಂತ್-ಐಂದ್ರಿತಾ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ತುಂಬಾ ಸಭ್ಯ ಮತ್ತು ಸಜ್ಜನ ಕುಟುಂಬ ಅವರದ್ದು. ಆದರೆ ಒಮ್ಮೆ ದಿಗಂತ್ ಮತ್ತು ಐಂದಿತ್ರಾ ಮಧ್ಯರಾತ್ರಿ ದೊಡ್ಡ ಸಂಭ್ರಮಾಚರಣೆ ಮಾಡಿದ್ದರು ಎಂದು ಹಿರಿಯ ಕಲಾವಿದರಾದ ಸುಚೇಂದ್ರ ಪ್ರಸಾದ್ ಹೇಳಿದರು. ಇದನ್ನೂ ಓದಿ: ಸಿಸಿಬಿ ವಿಚಾರಣೆಗೆ ಹಾಜರಾದ ಗುಳಿ ಕೆನ್ನೆ ದಂಪತಿ

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಸುಚೇಂದ್ರ ಪ್ರಸಾದ್, ಡ್ರಗ್ ಮಾಫಿಯಾ ಏಕಾಏಕಿ ಹುಟ್ಟಿದ್ದಲ್ಲ. ಯಾರ‍್ಯಾರ ಬಳಿ ಮಾಹಿತಿ ಇದಿಯೋ ಅವರನ್ನು ಒಬ್ಬೊಬ್ಬರಾಗಿ ಕರೆಸಿ ಪ್ರಶ್ನೆ ಮಾಡುವ ಕೆಲಸವನ್ನು ಇದಕ್ಕೆ ಸಂಬಂಧಪಟ್ಟ ಇಲಾಖೆ ಮಾಡುತ್ತಿದೆ. ನಾವು ನಮ್ಮ ಕೆಲಸ ಆಯಿತು ಎಂದು ಇದ್ದವರು. ಹೀಗಾಗಿ ನಮಗೆ ಇದರ ಬಗ್ಗೆ ಗೊತ್ತಿಲ್ಲ. ಆದರೆ ಇದೆಲ್ಲವನ್ನು ಗಮನಿಸಿದಾಗ ಐಷಾರಾಮಿ ಬದುಕು ಈ ರೀತಿ ಮಾಡಿಸುತ್ತಿದೆ ಎಂದರು. ಇದನ್ನೂ ಓದಿ: ರಾಗಿಣಿಗೆ ಬಿಗ್ ಶಾಕ್- ಜಾಮೀನು ಅರ್ಜಿ ಮುಂದೂಡಿಕೆ

Advertisement
Continue Reading Below

ದಿಗಂತ್-ಐಂದ್ರಿತಾ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಒಂದು ಸಿನಿಮಾದಲ್ಲಿ ಮಾತ್ರ ಅವರ ಜೊತೆ ತೆರೆ ಹಂಚಿಕೊಂಡಿದ್ದೇನೆ. ತುಂಬಾ ಸಭ್ಯ ಮತ್ತು ಸಜ್ಜನ ಕುಟುಂಬ ಅವರದ್ದು. ಅವರ ತಂದೆ ಪ್ರಾಂಶುಪಾಲರು ಎಂದು ಗೊತ್ತು. ಅದನ್ನು ಬಿಟ್ಟು ಅಷ್ಟೇನು ಗೊತ್ತಿಲ್ಲ. ನಮ್ಮ ಮನೆ ಇರುವ ಏರಿಯಾದ ಕೊನೆಯಲ್ಲಿ ಅವರ ಮನೆ ಇದೆ. ಆದರೆ ನಾನು ಹೆಚ್ಚಾಗಿ ಅವರಿಬ್ಬರನ್ನೂ ನೋಡಿಯೇ ಇಲ್ಲ. ಇತ್ತೀಚೆಗೆ ಆ ಮನೆಗೆ ದಂಪತಿ ಬಂದಿದ್ದರು. ಒಂದು ದೊಡ್ಡ ಸಂಭ್ರಮಾಚರಣೆ ಮಾಡಿದ್ದರು ಎಂದು ಸುಚೇಂದ್ರ ಪ್ರಸಾದ್ ತಿಳಿಸಿದರು.

ಮಧ್ಯರಾತ್ರಿ ಆದರೂ ಸಂಭ್ರಮಾಚರಣೆಯ ಸದ್ದು ಕೇಳಿಸಿತ್ತು. ಜೋರು ಧ್ವನಿಗೆ ಮಧ್ಯರಾತ್ರಿ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದರು. ಆಗ ನಾನು ನಟರಾಗಿರುವುದರಿಂದ ಈ ಬಗ್ಗೆ ಮಾತನಾಡಿ ಎಂದು ನಮ್ಮ ನೆರೆಹೊರೆಯವರು ಹೇಳಿದ್ದರು. ಆದರೆ ನಾನು ಬೆಳಗ್ಗೆ ಹೋಗಿ ಮಾತನಾಡುತ್ತೇನೆ ಎಂದಿದ್ದೆ. ನಮ್ಮ ಏರಿಯಾದಲ್ಲಿ ಕಾಣಿಸಿಕೊಂಡರೆ ಮಾತನಾಡೋಣ ಎಂದುಕೊಂಡಿದ್ದೆ. ಆದರೆ ದಂಪತಿ ನನಗೆ ಏಲ್ಲೂ ಕಾಣಿಸಿಕೊಂಡಿಲ್ಲ. ತುಂಬಾ ಸಭ್ಯ ರೀತಿಯಲ್ಲಿ ದಂಪತಿ ನಡೆದುಕೊಂಡಿದ್ದಾರೆ. ಮಧ್ಯರಾತ್ರಿ ಯಾಕೆ ಸಂಭ್ರಮಾಚರಣೆ ಮಾಡಬೇಕು ಎಂದು ನನಗೆ ಆಶ್ವರ್ಯ ಆಯಿತು. ಆದರೆ ಮತ್ತೆ ಆ ರೀತಿಯ ಘಟನೆಯ ಸಂಭವಿಸಿಲ್ಲ ಎಂದು ತಿಳಿಸಿದರು.

ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರು ಈಗಲಾದರೂ ನಾವು ಈ ರೀತಿ ಮಾಡುವುದು ತಪ್ಪು ಎಂದು ತಿಳಿದುಕೊಳ್ಳಲಿ. ಯಾರೇ ಈ ದಂಧೆಯಲ್ಲಿ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ನಮ್ಮ ಕ್ಷೇತ್ರ ಮಾತ್ರವಲ್ಲದೇ ಯಾವುದೇ ವಲಯದಲ್ಲಿ ಇದ್ದರೂ ಪರವಾಗಿಲ್ಲ ಅವರ ಹೆಡೆಮುರಿ ಕಟ್ಟಿ ಅವರಿಗೆ ಶಿಕ್ಷೆಯಾಗುವ ರೀತಿ ಸರ್ಕಾರ ಅಥವಾ ಅದಕ್ಕೆ ಸಂಬಂಧಪಟ್ಟ ಇಲಾಖೆ ಮಾಡಬೇಕು ಎಂದು ನಾನು ಆಶಿಸುತ್ತೇನೆ ಎಂದರು.

ನನಗೆ ಸಿನಿಮಾ ಹೊಟ್ಟೆ ತುಂಬಿಸಿದೆ, ನನ್ನ ಜೀವನಕ್ಕೆ ಒಂದು ದಾರಿ ಮಾಡಿಕೊಟ್ಟಿದೆ. ನಾವು ಬೇರೆಯವರಿಗೆ ಉಪಕಾರ ಮಾಡದಿದ್ದರೂ ಸಮಾಜಕ್ಕೆ ಅಪಕಾರ ಮಾಡಬಾರದು. ಆದರೆ ಹಿಂದಿನಿಂದಲೂ ಸಿನಿಮಾ ಎಂದಾಕ್ಷಣ ಹಣ ಎಂಬ ಭಾವನೆ ಇದೆ. ನನಗಿದು ಗೊತ್ತಿಲ್ಲದ ಸಂಗತಿ. ಇದು ನಾಗರೀಕರು ಮಾಡುವಂತ ಕೆಲಸವಲ್ಲ. ಸಾಮಾಜಿಕ ಸ್ವಾಸ್ಥ್ಯವನ್ನು ಇವೆಲ್ಲ ಹಾಳು ಮಾಡುತ್ತಿದೆ. ಇಂತಹ ಪ್ರಕರಣದಿಂದ ಮುಂದಿನ ಯುವ ಜನತೆ ಎಚ್ಚರವಾಗಿರುತ್ತಾರೆ ಎಂದು ಹೇಳಿದರು.

ಮಾಹಿತಿ ಇದೆ ಎಂದು ಹೇಳುವರು ಬಹಿರಂಗವಾಗಿ ತನಿಖೆ ಮಾಡುವ ಇಲಾಖೆಗೆ ತಿಳಿಸಬೇಕು. ಈ ಮೂಲಕ ಅವರಿಗೆ ಸಹಕರಿಸಬೇಕು. ನಿಜವಾದ ಸಮಾಜ ನಿರ್ಮಾಣ ಮಾಡಲು ಯಾರಾದರೂ ಆಗಲಿ ಸಹಕರಿಸಬೇಕು. ಯಾರೇ ಈ ದಂಧೆಯಲ್ಲಿ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು. ಇಲ್ಲವಾದಲ್ಲಿ ಮುಂದಿನ ತಲೆಮಾರಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಚೇಂದ್ರ ಪ್ರಸಾದ್ ತಿಳಿಸಿದರು.

 

Click to comment

Leave a Reply

Your email address will not be published. Required fields are marked *