Connect with us

Bengaluru City

ಮೋಡಿ ಮಾಡಿದ ಸೀತಾರಾಮ ಕಲ್ಯಾಣ ಟ್ರೇಲರ್

Published

on

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಎರಡನೇ ಚಿತ್ರ ‘ಸೀತಾರಾಮ ಕಲ್ಯಾಣ’ ಬರುವ ಶುಕ್ರವಾರ ತೆರೆ ಕಾಣಲಿದ್ದು, ಶನಿವಾರ ಸಂಜೆ ಮೈಸೂರಿನಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

ಮೈಸೂರಿನ ಬನ್ನಿಮಂಟಪದ ಮೈದಾನದಲ್ಲಿ ಅದ್ಧೂರಿಯಾಗಿ ‘ಸೀತಾರಾಮ ಕಲ್ಯಾಣ’ದ ಟ್ರೇಲರ್ ಬಿಡುಗಡೆಯಾಗಿದೆ. ಇನ್ನೂ ಟ್ರೇಲರ್ ನಲ್ಲಿ ತುಂಟತನ ಪ್ರೀತಿ, ಕುಟುಂಬದವರ ನಡುವಿನ ಬಾಂಧವ್ಯ ತುಂಬಿದೆ. ಜೊತೆಗೆ ನಿಖಿಲ್ ಕುಮಾರಸ್ವಾಮಿ ಅವರ ಮಾಸ್ ಫೈಟ್ ಇದ್ದು, ಇದು ಪಕ್ಕಾ ಒಂದು ಸಾಂಪ್ರದಾಯಕ ಸಿನಿಮಾವಾಗಿದೆ. ಟ್ರೇಲರ್ ನಲ್ಲಿ ತಂದೆಯ ಪ್ರೀತಿಗೆ ನೀಡಿರುವ ಗೌರವ ಸಿನಿಮಾದ ವಿಶೇಷತೆ ಎಂದು ಹೇಳಬಹುದಾಗಿದೆ. ಟ್ರೇಲರ್ ನೋಡಿದ ಅಭಿಮಾನಿಗಳು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನೂ ಸಮಾರಂಭಕ್ಕೆ ಸ್ಯಾಂಡಲ್‍ ವುಡ್ ತಾರೆಯರ ಭರ್ಜರಿ ಡ್ಯಾನ್ಸ್, ನಾಯಕ ನಿಖಿಲ್ ಕುಮಾರ್, ಚಿತ್ರದ ನಾಯಕಿ ರಚಿತ್ ರಾಮ್, ರಾಗಿಣಿ, ಆಶಿಕಾ ರಂಗನಾಥ್ ಸೇರಿದಂತೆ ಹಲವರು ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಅಭಿಮಾನಿಗಳ ದಂಡೆ ಹರಿದು ಬಂದಿತ್ತು. ಹಲವು ನಟ – ನಟಿಯರು ಹಾಗೂ ಜೆಡಿಎಸ್ ಶಾಸಕರು ಸಾಕ್ಷಿಯಾಗಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಎಚ್.ಡಿ. ಕುಮಾರಸ್ವಾಮಿ, ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದ್ದು, ಒಂದೊಳ್ಳೆಯ ಕೌಟುಂಬಿಕ ಚಿತ್ರವನ್ನು ನಿರ್ಮಿಸಿದ ತೃಪ್ತಿ ಇದೆ ಎಂದು ಹೇಳಿದ್ದಾರೆ.

ಮೈಸೂರು, ಹಾಸನ, ಮಂಡ್ಯ ಭಾಗದಲ್ಲೇ ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ಪಕ್ಕಾ ಫ್ಯಾಮಿಲಿ ಎಂಟರ್‍ಟೈನರ್ ಚಿತ್ರ ಇದಾಗಿದೆ. ಜಾಗ್ವಾರ್ ನಂತರ ಬಹಳ ನಿರೀಕ್ಷೆಯೊಂದಿಗೆ ಸಿಎಂ ಪುತ್ರ ಮತ್ತೆ ತೆರೆ ಮೇಲೆ ಬರ್ತಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv