Sunday, 19th August 2018

Recent News

ಜೀವದ ಹಂಗು ತೊರೆದು ಮಗುವಿನ ಜೀವ ಉಳಿಸಿದ ಪೊಲೀಸ್ ಅಧಿಕಾರಿ- ವೀಡಿಯೊ ನೋಡಿ

ವಾಷಿಂಗ್ಟನ್: ಪೊಲೀಸ್ ಅಧಿಕಾರಿಯೊಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೇ ವಾಹನ ದಟ್ಟಣೆ ಇರುವ ಹೆದ್ದಾರಿಯಲ್ಲಿ ಓಡುತ್ತಿದ್ದ ಮಗುವನ್ನು ರಕ್ಷಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮೆರಿಕದ ಇಲಿನಾಯ್ಸ ಪ್ರದೇಶದ ಹೆದ್ದಾರಿಯೊಂದರಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ದೃಶ್ಯಗಳಲ್ಲಿ ತಾಯಿಯ ಕಣ್ಣು ತಪ್ಪಿಸಿ ಮಗುವೊಂದು ವಾಹನ ದಟ್ಟಣೆಯಿರುವ ಹೆದ್ದಾರಿಯಲ್ಲಿ ಓಡತೊಡಗಿತ್ತು. ಇನ್ನೇನು ಅದು ವಾಹನಗಳ ಚಕ್ರಕ್ಕೆ ಸಿಲುಕಬೇಕು ಎನ್ನುವುಷ್ಟರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸಮಯಪ್ರಜ್ಞೆಯಿಂದ ಮಗುವನ್ನು ಅಪಾಯದಿಂದ ರಕ್ಷಿಸಿದ್ದಾರೆ.

ಇಲಿನಾಯ್ಸ್ ಪ್ರದೇಶದ ಪೊಲೀಸ್ ಅಧಿಕಾರಿ ಆಂಥೋನಿ ಮನ್ನಿನೊ ಮಗುವನ್ನು ರಕ್ಷಿಸಿದ ಅಧಿಕಾರಿಯಾಗಿದ್ದು, ಮಗುವನ್ನು ರಕ್ಷಿಸುವ ದೃಶ್ಯಗಳು ಕಾರಿಗೆ ಅಳವಡಿಸಲಾಗಿದ್ದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮಗು ರಕ್ಷಣೆ ಮಾಡುವ ವೇಳೆ ಕೆಲ ಸಮಯ ಪೊಲೀಸ್ ಅಧಿಕಾರಿಯನ್ನು ಮಗು ಸತಾಯಿಸುವ ದೃಶ್ಯಗಳು ಕಾಣಸಿಗುತ್ತದೆ. ಆದರೂ ಧೃತಿಗೆಡದ ಅಂಥೋನಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

ಆಂಥೋನಿ ರವರ ಈ ಸಾಹಸ ಕಾರ್ಯವನ್ನು ಮೆಚ್ಚಿ ಪೊಲೀಸ್ ಇಲಾಖೆ ಅವರಿಗೆ ಜೀವ ಉಳಿಸಿದ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೇ ಪೊಲೀಸ್ ಇಲಾಖೆ ಅವರ ಈ ಸಾಹಸ ಕಾರ್ಯದ ವಿಡಿಯೋವನ್ನು ಹಾಕಿ ಕೊಂಡಾಡಿದಿದೆ.

Sergeant Receives Award for May Incident on Route 59

Last month, this youngster escaped his mother's watchful eye, left his house and was found by Sgt. Anthony Mannino running on Route 59! Luckily, no one was hurt, and we attribute that to Sgt. Mannino's observation while on patrol and quick reaction, placing his squad car and himself between the child and traffic. On June 7, Sgt. Mannino was presented the department's Life Saving Award. Well done, Sergeant.

Naperville Police Departmentさんの投稿 2018年6月11日(月)

Leave a Reply

Your email address will not be published. Required fields are marked *