Connect with us

Bengaluru City

ನಟಿ ರಾಧಿಕಾ ಕುಮಾರಸ್ವಾಮಿ ಸಂಪತ್ತಿನ ಸೀಕ್ರೆಟ್..!

Published

on

ಬೆಂಗಳೂರು: ಕೋಟಿ ಕೋಟಿ ಹಣದ ಆರೋಪ ಹೊಂದಿರುವ ನಟಿ ರಾಧಿಕಾ ಕುಮಾರಸ್ವಾಮಿ ಬಳಿ ಎಷ್ಟು ಆಸ್ತಿ ಎಂಬ ಲೆಕ್ಕಚಾರ ಆರಂಭವಾಗಿದೆ. ಈ ಸಂಪತ್ತೇ ರಾಧಿಕಾಗೆ ಕಂಟಕವಾಗುತ್ತಾ ಎಂಬ ಪ್ರಶ್ನೆ ಕೂಡ ಮೂಡಿದೆ.

ಆಸ್ತಿ ನಂಬರ್ 1: ಸ್ವಂತ ಊರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಸಾಲೆತ್ತೂರಿನಲ್ಲಿ 1 ಎಕರೆಯಲ್ಲಿ ಮನೆ, ತೋಟ. ಇದು ಒಟ್ಟು 3 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ.

ಆಸ್ತಿ ನಂಬರ್ 2: ಮಂಗಳೂರಿನಲ್ಲಿ ‘ದೇವಸ್ಯ’ ಹೆಸರಿನ ಭವ್ಯ ಮನೆ ಇದೆ. ಇದು ಮಂಗಳೂರು ನಗರದ ಯೆಯ್ಯಾಡಿಯಲ್ಲಿದೆ. ಗರ್ಭಿಣಿಯಾಗಿದ್ದಾಗ ಆಸ್ಪತ್ರೆ ಬಳಿಯೇ ರಾಧಿಕಾ ಈ ಮನೆ ಖರೀದಿ ಮಾಡಿದ್ದರು. ಇದು 60 ರಿಂದ 70 ಲಕ್ಷ ಬೆಲೆ ಬಾಳುತ್ತದೆ.

ಆಸ್ತಿ ನಂಬರ್ 3: ಕಲ್ಲಡ್ಕ ಬಳಿ ಅಮ್ಟೂರಿನಲ್ಲಿ 1 ತೋಟದ ಮನೆ ಇದ್ದು, ಮನೆಗೆ ‘ನಂದನವನ’ ಎಂದು ಹೆಸರಿಡಲಾಗಿದೆ. ಈ ಮನೆ ಸುಮಾರು 4 ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ.

ಆಸ್ತಿ ನಂಬರ್ 4: ಬೆಂಗಳೂರಿನ ಸಂಜಯ್ ನಗರದಲ್ಲಿ ಬಂಗಲೆ ಇದ್ದು, ಇದು ಕೂಡ ಬಹುಕೋಟಿ ಬೆಲೆಬಾಳುವ ಮನೆಯಾಗಿದೆ.

ಆಸ್ತಿ ನಂಬರ್ 5: ಬೆಂಗಳೂರು ನಗರದಲ್ಲಿ ಕೂಡ ರಾಧಿಕಾ ಒಡೆತನದ ಬಹುಕೋಟಿ ಬೆಲೆ ಬಾಳುವ ಮಳಿಗೆ ಇದೆ ಎಂದು ಹೇಳಲಾಗುತ್ತಿದೆ.

ಆಸ್ತಿ ನಂಬರ್ 6: ಪುತ್ರಿ ಶಮಿಕಾ ಹೆಸರಲ್ಲಿ ನಿರ್ಮಾಣ ಸಂಸ್ಥೆ ಇದೆ. ಈ ಸಂಸ್ಥೆಯಿಂದ 3 ಚಿತ್ರ ನಿರ್ಮಾಣ ಮಾಡಲಾಗಿದೆ. ಲಕ್ಕಿ- ಸ್ವೀಟಿ – ಭೈರಾದೇವಿ ಚಿತ್ರ ನಿರ್ಮಾಣ ಇದೇ ಸಂಸ್ಥೆಯಿಂದ ನಿರ್ಮಾಣ ಮಾಡಲಾಗಿದೆ.

ಆಸ್ತಿ ನಂಬರ್ 7: ಇಷ್ಟು ಮಾತ್ರವಲ್ಲದೆ ಕೋಟಿ ಕೋಟಿ ಹಣಹೂಡಿಕೆ..? ಹಾಗೂ ಹಲವು ಕಂಪನಿಗಳಿಗೆ ರಾಧಿಕಾ ಪಾಲುದಾರಿಕೆ ಹೊಂದಿದ್ದಾರೆ ಎಂಬ ಗುಮಾನಿ ಕೂಡ ಇದೆ.

ಒಟ್ಟಿನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ರಾಧಿಕಾರಿಗೆ ನೋಟಿಸ್ ನೀಡಿದ್ದಾರೆ. ಈ ವೇಳೆ ಸಿಸಿಬಿ ಪೊಲೀಸರು ಯುವರಾಜ್ ಅಲಿಯಾಸ್ ಸ್ವಾಮಿ ಜೊತೆಗಿನ ವ್ಯವಹಾರ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in