Connect with us

Cinema

‘ಯುವರತ್ನ’ನಿಗೆ ಜೋಡಿಯಾದ್ರು ಸಯ್ಯೇಷಾ ಸೈಗಲ್

Published

on

ಬೆಂಗಳೂರು: ರಾಜಕುಮಾರ ಹಿಟ್ ಸಿನಿಮಾ ಬಳಿಕ ಮತ್ತೆ ಒಂದಾಗಿರುತ್ತಿರುವ ನಿರ್ದೇಶಕ ಆನಂದ್ ರಾಮ್ ಹಾಗೂ ನಟ ಪುನೀತ್ ರಾಜ್‍ಕುಮಾರ್ ಅವರ ಯುವರತ್ನ ಸಿನಿಮಾಗೆ ಕಾಲಿವುಡ್ ನಟಿ ಸಯ್ಯೇಷಾ ಸೈಗಲ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಸಿನಿಮಾದ ಟೈಟಲ್ ಅನಾವರಣ ಮಾಡಿ ಚಿತ್ರೀಕರಣ ಆರಂಭಿಸಿದ್ದ ಯುವರತ್ನ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಸಂತೋಷ್ ಆನಂದ್ ರಾಮ್ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಅಭಿಮಾನಿಗಳ ಕುತೂಹಲಕ್ಕೆ ಉತ್ತರಿಸಿದ್ದಾರೆ.

ಯುವರತ್ನ ಸಿನಿಮಾ ಘೋಷಣೆ ಆದ ದಿನದಿಂದಲೂ ಕೂಡ ಚಿತ್ರ ನಾಯಕಿ ಬಗ್ಗೆ ಅಭಿಮಾನಿಗಳು ಸಾಕಷ್ಟು ಕುತೂಹಲ ಹೊಂದಿದ್ದರು. ಟಾಲಿವುಡ್ ನಟಿ ತಮನ್ನಾ ಸೇರಿದಂತೆ ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ಅವರೊಂದಿಗೆ ಅಭಿನಯಿಸಿದ್ದ ಅನುಪಮಾ ಪರಮೇಶ್ವರನ್ ಅವರ ಹೆಸರು ಕೂಡ ಕೇಳಿ ಬಂದಿತ್ತು.

ಸದ್ಯ ಚಿತ್ರತಂಡ 21 ವರ್ಷದ ಸಯ್ಯೇಷಾ ಸೈಗಲ್ ಅವರನ್ನು ಫಿಕ್ಸ್ ಮಾಡಿದ್ದು, ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದ ಇವರು ತಮಿಳಿನ ವಿಜಯಮ್ ರವಿ ಅವರ ‘ವನಮಗಂ’ ಚಿತ್ರದಲ್ಲಿ ನಟಿಸಿ ತಮ್ಮ ಗ್ಲಾಮರ್ ಲುಕ್ ಹಾಗೂ ನಟನೆಯ ಮೂಲಕ ಗಮನಸೆಳೆದಿದ್ದರು. ಇದಕ್ಕೂ ಮುನ್ನ ಟಾಲಿವುಡ್ ನಟ ನಾಗರ್ಜುನ ಅವರ ಪುತ್ರ ಅನಿಲ್ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ್ದರು. ಅಲ್ಲದೇ ಬಾಲಿವುಡ್‍ನಲ್ಲಿ ವಿಜಯ್ ದೇವಗನ್ ಅವರೊಂದಿಗೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಸಯ್ಯೇಷಾ ಅವರಿಗೆ ಇದು ಡೆಬ್ಯೂ ಸಿನಿಮಾ ಆಗಿದೆ.

ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ಯುವರತ್ನ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. `ರಾಜಕುಮಾರ’ ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ನಟನ ಕಾಂಬಿನೇಷನ್ ಬರುತ್ತಿರುವ 2ನೇ ಚಿತ್ರ ಯುವರತ್ನ. ಈಗಾಗಲೇ ಫೆಬ್ರವರಿ 14 ರಂದು ಚಿತ್ರೀಕರಣ ಆರಂಭವಾಗಿದ್ದು, ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ 16 ವರ್ಷಗಳ ಹಿಂದೆ ತೆರೆಕಂಡಿದ್ದ `ಅಭಿ’ ಚಿತ್ರದ ಬಳಿಕ ಪುನೀತ್ ಮತ್ತೆ ಕಾಲೇಜ್ ಸ್ಟೂಡೆಂಟ್ ಆಗಿದ್ದಾರೆ.

ಉಳಿದಂತೆ ನಟಿ ಸಯ್ಯೇಷಾ ಸೈಗಲ್ ಕಳೆದ ಕೆಲ ದಿನಗಳ ಹಿಂದೆಯಷ್ಟೇ ತಮಿಳು ನಟ ಆರ್ಯ ಅವರೊಂದಿನ ಪ್ರೀತಿಯ ವಿಚಾರವನ್ನು ರಿವೀಲ್ ಮಾಡಿ ಸುದ್ದಿಯಾಗಿದ್ದರು. ಮಾರ್ಚ್ ತಿಂಗಳನಲ್ಲಿ ಇಬ್ಬರ ವಿವಾಹ ನಿಗದಿಯಾಗಿದೆ. ಸಯ್ಯೇಷಾ ಸೈಗಲ್ ನಟ ನಿರ್ಮಾಪಕ ಸಮೇತ್ ಸೈಗಲ್ ಮತ್ತು ನಟಿ ಶಹೀನ್ ಬಾನು ಅವರ ಪುತ್ರಿಯಾಗಿದ್ದಾರೆ.

View this post on Instagram

#lovemyjob#photoshoot#tbt#jatinkampani

A post shared by Sayyeshaa (@sayyeshaa) on

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv