Connect with us

Belgaum

ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ರೆ ಗೋಕಾಕ್ ಕರದಂಟು ದುಬೈನಲ್ಲೂ ಸಿಗುತ್ತೆ- ಹೆಬ್ಬಾಳ್ಕರ್‌ಗೆ ಜಾರಕಿಹೊಳಿ ಟಾಂಗ್

Published

on

ಬೆಳಗಾವಿ: ಕರದಂಟು ಬೇಕಾದರೆ ಗೋಕಾಕ್ ಮಾತ್ರವಲ್ಲ, ಬೆಳಗಾವಿ, ಮೆಜೆಸ್ಟಿಕ್ ನಲ್ಲಿಯೂ ಸಿಗುತ್ತೆ. ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದರೆ ದುಬೈನಲ್ಲೂ ಸಿಗುತ್ತೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹಾಸ್ಯ ಚಟಾಕಿ ಹಾರಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಕುಂದಾ ಜೊತೆ ಗೋಕಾಕ್ ಕರದಂಟು ಇದ್ದರೆ ಚೆನ್ನಾಗಿರುತ್ತದೆ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ಕರದಂಟು ಬೇಕಾದರೆ ಗೋಕಾಕ್ ಮಾತ್ರವಲ್ಲ, ಬೆಳಗಾವಿ, ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿಯೂ ಸಿಗುತ್ತೆ. ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದರೆ ದುಬೈನಲ್ಲೂ ಸಿಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದರು.

ಗೋಕಾಕ್‍ನಲ್ಲಿ ರಮೇಶ್ ಸೋಲಿಸಲು ನನ್ನದು ಹಾಗೂ ಸತೀಶ್‍ರವರ ಜಾಯಿಂಟ್ ವೆಂಚರ್ ಎಂಬ ಹೆಬ್ಬಾಳ್ಕರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ನಾವು ಹೆಚ್ಚು ಸೀಟ್ ಗೆಲ್ಲುವುದು ಜಾಯಿಂಟ್ ವೆಂಚರ್, ಗೋಕಾಕ್ ಸೇರಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲೋದು ನಮ್ಮ ಪ್ಲ್ಯಾನ್. ಅದನ್ನು ಜಾಯಿಂಟ್ ವೆಂಚರ್ ಎಂದು ಹೇಳಿರಬಹುದಷ್ಟೇ, ಅದರಲ್ಲೇನು ತಪ್ಪಿದೆ ಎಂದು ಪ್ರಶ್ನಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕರನ್ನು ಕಡೆಗಣಿಸಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸರ್ಕಾರಿ ಸಭೆ ಮಾಡುತ್ತಾರೆ ಎಂಬ ಕುರಿತು ಮಾತಣಾಡಿದ ಅವರು, ಅಂತಹ ಯಾವುದಾದರೂ ಸಭೆ ಆಗಿದ್ದರೆ ಲಿಸ್ಟ್ ಮಾಡಿ ಕೆಡಿಪಿ ಸಭೆ ಕರೆಯುತ್ತಾರೆ. ಕೆಡಿಪಿ ಸಭೆಯಲ್ಲಿ ನಾವು ಕೇಳುವ ಅಧಿಕಾರ ಇರುತ್ತೆ. ಗೋಕಾಕ್ ಅಷ್ಟೇ ಅಲ್ಲ ಇಡೀ ಜಿಲ್ಲೆಯಲ್ಲಿ ಲಿಂಗಾಯತ ಮುಖಂಡರನ್ನು ಕಾಂಗ್ರೆಸ್‍ಗೆ ಆಹ್ವಾನ ಮಾಡುತ್ತಿದ್ದೇವೆ. ಬಹಳಷ್ಟು ಜನ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂದರು.

ರಾಜ್ಯ ಕಾಂಗ್ರೆಸ್‍ನಲ್ಲಿ ಡಿಕೆಶಿ, ಸಿದ್ದರಾಮಯ್ಯ ಎರಡು ಗುಂಪುಗಳ ವಿಚಾರದ ಬಗ್ಗೆ ಮಾತನಾಡಿದ ಅವರು, ಅದು ಬೆಂಗಳೂರು ಲೆವೆಲ್, ನಮ್ಮ ಜಿಲ್ಲೆಗೆ ಸಂಬಂಧ ಇಲ್ಲ. ಗುದ್ದಾಟ ಏನೂ ಇಲ್ಲ, ಕೆಲವು ಘಟನೆ ಆಗುತ್ತಿರುತ್ತವೆ. ಇದನ್ನೇ ಅವರ ಫೇಲ್ಯೂರ್, ಇವರು ಸಕ್ಸಸ್ ಎಂದು ಹೇಳಲು ಆಗುವುದಿಲ್ಲ. ಯಾರನ್ನು ಯಾರೂ ಮೂಲೆಗುಂಪು ಮಾಡಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದರು.

ಬೆಳಗಾವಿ ಕಾಂಗ್ರೆಸ್ ಶಾಸಕರು ಅವರವರ ಕ್ಷೇತ್ರಕ್ಕೆ ಸೀಮಿತವಾಗಿರುವುದು ನಿಜ. ಜಿಲ್ಲೆಯಲ್ಲಿ ಮೀಟಿಂಗ್ ಕರೆದಾಗ ಬರುತ್ತಾರೆ. ನಾವು ಹೋಗುತ್ತೇವೆಂದು ಅವರೂ ಬರಲಿಕ್ಕಾಗಲ್ಲ. ನಾವು ಇಡೀ ಜಿಲ್ಲೆ, ಮುಂಬೈ ಕರ್ನಾಟಕ. ರಾಜ್ಯ ಮಟ್ಟದಲ್ಲಿ ಪ್ರವಾಸ ಮಾಡುತ್ತೇವೆ. ನಮ್ಮ ರೀತಿ ಮಾಡಬೇಕೆಂದರೆ ಅವರು ಅಸಹಾಯಕರಿರುತ್ತಾರೆ. ಹೀಗಾಗಿ ತಮ್ಮ ಕ್ಷೇತ್ರಗಳಿಗೆ ಸೀಮಿತರಿರುತ್ತಾರೆ. ಅವರ ಕ್ಷೇತ್ರಗಳಿಗೆ ಹೋದರೆ ನಮ್ಮ ಜೊತೆ ಇರುತ್ತಾರೆ ಎಂದರು.

Click to comment

Leave a Reply

Your email address will not be published. Required fields are marked *