60 ಬಾರಿ ಚುಚ್ಚಿ ಚುಚ್ಚಿ ಕೊಂದ ಪಾತಕಿಗಳು- ಬುಧವಾರ ಹುಬ್ಬಳ್ಳಿಯಲ್ಲೇ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ

Advertisements

ಹುಬ್ಬಳ್ಳಿ: ಸರಳವಾಸ್ತು, ಮಾನವಗುರು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್‍ನಲ್ಲಿ ಭೀಕರವಾಗಿ ಕೊಲ್ಲಲಾಗಿದೆ. ನಾಳೆ ಹುಬ್ಬಳ್ಳಿಯಲ್ಲೇ ಅಂತ್ಯಕ್ರಿಯೆ ನಡೆಯಲಿದೆ.

Advertisements

58 ವರ್ಷದ ಚಂದ್ರಶೇಖರ್ ಗುರೂಜಿಯನ್ನು ಭೇಟಿ ಮಾಡಲು ಬಂದ ಅವರ ಮಾಜಿ ಆಪ್ತ ಸಹಾಯಕರು ಈ ಕೃತ್ಯ ಎಸಗಿದ್ದಾರೆ. ಮಧ್ಯಾಹ್ನ 12.23ರ ಸಮಯಲ್ಲಿ ಹೋಟೆಲ್ ರೂಂನಿಂದ ರಿಸೆಪ್ಶನ್‍ಗೆ ಬಂದ ಚಂದ್ರಶೇಖರ ಗುರೂಜಿ ಪಾದಕ್ಕೆ ಒಬ್ಬ ನಮಸ್ಕರಿಸುವ ಹೊತ್ತಲ್ಲೇ ಅಲ್ಲೇ ನಿಂತಿದ್ದ ಇನ್ನೊಬ್ಬ ಗುರೂಜಿ ಎದೆಗೆ ಚಾಕು ಹಾಕಿದ್ದ. ನಂತ್ರ ಇಬ್ರು ಸೇರಿಕೊಂಡು ಕೇವಲ 40 ಸೆಕೆಂಡ್‍ಗಳ ಅಂತರದಲ್ಲಿ 60ಕ್ಕೂ ಹೆಚ್ಚು ಬಾರಿ ಚುಚ್ಚಿ, ಕತ್ತು ಕೊಯ್ದು ಭೀಕರವಾಗಿ ಕೊಂದಿದ್ದಾರೆ.

Advertisements

ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿದ ಚಂದ್ರಶೇಖರ ಗುರೂಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ಯೆ ಬೆನ್ನಲ್ಲೇ ಇಬ್ಬರು ಹಂತಕರು ಅಲ್ಲಿಂದ ಹೊರಗೆ ಓಡಿದ್ದಾರೆ. ಈ ಎಲ್ಲಾ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಾರಲ್ಲಿ ಮುಂಬೈಗೆ ಎಸ್ಕೇಪ್ ಆಗುತ್ತಿದ್ದ ಇಬ್ಬರು ಹಂತಕರಾದ ಧಾರವಾಡದ ಮಹಂತೇಶ್ ಶಿರೂರ ಮತ್ತು ಕಲಘಟಗಿಯ ಮಂಜುನಾಥ್‍ನನ್ನು ರಾಮದುರ್ಗ ಬಳಿ ಸಿನಿಮೀಯ ರೀತಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಗುರೂಜಿ ಹತ್ಯೆ ಪ್ರಕರಣ- ರಸ್ತೆಯಲ್ಲಿ ಜೆಸಿಬಿ ಅಡ್ಡ ನಿಲ್ಲಿಸಿ, ಗನ್ ತೋರಿಸಿ ಹಂತಕರಿಗೆ ಬೇಡಿ ತೊಡಿಸಿದ ಖಾಕಿ

ಮೊಬೈಲ್ ಲೋಕೇಷನ್ ಟವರ್ ಆಧರಿಸಿ ಬೆನ್ನಟ್ಟಿದ ಪೊಲೀಸರು ಆರೋಪಿಗಳು ಎಸ್ಕೇಪ್ ಆಗದಂತೆ ಸುತ್ತುವರೆದಿದ್ದಾರೆ. ರಸ್ತೆಗೆ ಅಡ್ಡಲಾಗಿ ಜೆಸಿಬಿ ನಿಲ್ಲಿಸಿ ಕಾರನ್ನು ತಡೆದ್ರು. ಆರೋಪಿಗಳು ಓಡಲು ಪ್ರಯತ್ನಿಸಿದಾಗ ರಾಮದುರ್ಗ ಡಿವೈಎಸ್ಪಿ ಶೂಟೌಟ್ ಮಾಡೋ ಎಚ್ಚರಿಕೆ ನೀಡಿ ಅರೆಸ್ಟ್ ಮಾಡಿದ್ರು. ಇದಕ್ಕೂ ಮುನ್ನ, ಮಹಂತೇಶ್ ಶಿರೂರ ಪತ್ನಿ ವನಜಾಕ್ಷಿಯನ್ನು ಪೊಲೀಸ್ರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು.

Advertisements

ಹಂತಕರ ಬಂಧನ ನಂತ್ರ ವನಜಾಕ್ಷಿಯನ್ನು ಬಿಟ್ಟುಕಳಿಸಿದ್ರು. ಮುಂಬೈನಿಂದ ಕುಟುಂಬಸ್ಥರು ಹುಬ್ಬಳ್ಳಿಗೆ ಧಾವಿಸಿದ್ದು, ನಾಳೆ ಹುಬ್ಬಳ್ಳಿಯ ಸುಳ್ಳ ಗ್ರಾಮದ ರಸ್ತೆಯ ಫಾರಂಹೌಸ್‍ನಲ್ಲಿ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ ನಡೆಯಲಿದೆ. ಸರಳವಾಸ್ತು ಸಿಬ್ಬಂದಿ ಕಣ್ಣೀರಿಟ್ಟಿದ್ದಾರೆ.

Live Tv

Advertisements
Exit mobile version